ಬಿಂದಾಸ್ ಹುಡುಗಿ ಹನ್ಸಿಕಾಗೆ ಸೆ-ಡಾನ್ ಬಾಯ್ ಫ್ರೆಂಡ್
ಕನ್ನಡ ಸಿನಿಮಾ ಬಿಂದಾಸ್‌ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದ ಜನಪ್ರಿಯ ತಮಿಳು, ತೆಲುಗು ನಟಿ ಹನ್ಸಿಕಾ ಮೊಟ್ವಾನಿ ಇದೀಗ ಹೊಸ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾಳೆ. ಆ ಬಾಯ್ ಫ್ರೆಂಡ್ ಹೆಸರು ಬಿಎಂಡಬ್ಲ್ಯು 5 ಸೀರಿಸ್ ಸೆಡಾನ್. ಸದ್ಯಕ್ಕೆ ಇದೇ ಕಾರಿನ ಜೊತೆ ಬಿಂದಾಸ್ ಆಗಿ ಹನ್ಸಿಕಾ ಸುತ್ತಾಡುತ್ತಿದ್ದರಂತೆ.
"ಹೊಸ ಕಾರಿನಲ್ಲಿ ಅಮ್ಮ ಮತ್ತು ಸಹೋದರನ ಜೊತೆಗೆ ರಾತ್ರಿ ಖಾಲಿ ರಸ್ತೆಯಲ್ಲಿ ಫಸ್ಟ್ ಡ್ರೈವಿಂಗ್ ಮಾಡಿದೆ. ನನ್ನ ಅದೃಷ್ಟದ ಸಂಖ್ಯೆ 9. ಹೀಗಾಗಿ ಈ ಕಾರಿಗೆ 9 ಅಂಕಿಯನ್ನು ರಿಜಿಸ್ಟ್ರೇಷನ್ ನಂಬರ್ ಮಾಡಿಕೊಂಡಿದ್ದೇನೆ, ಇದೇ ಸಂಖ್ಯೆಯನ್ನು ನಮ್ಮ ಹೊಸ ಫ್ಲಾಟಿಗೂ ಇಟ್ಟಿದ್ದೇವೆ" ಎಂದು ಹನ್ಸಿಕಾ ಹೇಳಿದ್ದಾರೆ. ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಕಾರಿನ ನಂಬರ್ ಕೂಡ ಒಂಬತ್ತು. ಅಂಬಿ ಕಾರು ಕ್ರೇಝ್ ಕಥೆ ತುಂಬಾ ಡಿಫರೆಂಟ್.
ಹೆಸರೇ ಹೇಳುವಂತೆ ಇದು ಬಿಎಂಡಬ್ಲ್ಯು ಕಂಪನಿಯ ದುಬಾರಿ ಕಾರು. ಬೆಂಗಳೂರಿನಲ್ಲಿ ಇದರ ದರ 38 ಲಕ್ಷ ರು.ನಿಂದ 58 ಲಕ್ಷ ರು.ವರೆಗಿದೆ. ಬಿಎಂಡಬ್ಲ್ಯು 5 ಸೀರಿಸ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.
ಇದ್ರಲ್ಲಿ 2.0 ಲೀಟರ್ ಇನ್ ಲೈನ್ 4 ಡೀಸೆಲ್ ಎಂಜಿನ್ 177 ಹಾರ್ಸ್ ಪವರ್ ನೀಡುತ್ತದೆ. 3.0 ಲೀಟರಿನ ಇನ್ ಲೈನ್ ಡೀಸೆಲ್ ಎಂಜಿನ್ 235 ಹಾರ್ಸ್ ಪವರ್ ನೀಡುತ್ತದೆ. 2.5 ಲೀಟರಿನ ಪೆಟ್ರೋಲ್ ಎಂಜಿನ್ 212 ಹಾರ್ಸ್ ಪವರ್ ನೀಡುತ್ತದೆ. 3.0 ಲೀಟರಿನ ಇನ್ ಲೈನ್ ಪೆಟ್ರೋಲ್ ಎಂಜಿನ್ 255 ಹಾರ್ಸ್ ಪವರ್ ನೀಡುತ್ತದೆ.
ಮಲ್ಟಿ ಕಾರ್ಯನಿರ್ವಹಣೆಯ ಸ್ಟೀಯರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ ವಿಂಡೋಸ್, 10 ಸ್ಪೀಕರ್, ಬ್ಲೂಟೂಥ್ ಸೇರಿದಂತೆ ಹತ್ತು ಹಲವು ಫೀಚರುಗಳು ಈ ಕಾರಿನಲ್ಲಿವೆ. ಜೊತೆಗೆ ಸ್ಟಾರ್ಟ್ ಸ್ಟಾಪ್ ಬಟನ್, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ಫೀಚರುಗಳು ಇದರಲ್ಲಿವೆ.
ಸಂಪೂರ್ಣ ವಿವರಗಳಿಗಾಗಿ ಇಲ್ಲಿಗೆ ಬನ್ನಿ


Click it and Unblock the Notifications









