ಅಂಬಿ ಸವಾರಿ: ಮಂಡ್ಯದ ಗಂಡಿನ ಆ ದಿನಗಳು

By * ಪ್ರವೀಣ ಚಂದ್ರ

ಸದ್ಯ ಅಂಬಿ ಅಭಿಮಾನಿಗಳ ಸಂಭ್ರಮಕ್ಕೆ ಎರಡು ಕಾರಣಗಳಿವೆ. ಅಂಬರೀಷ್ 60ನೇ ಹುಟ್ಟುಹಬ್ಬ ಮತ್ತು ಅವರು ಬೆಳ್ಳಿತೆರೆಗೆ ಆಗಮಿಸಿ 40 ವರ್ಷಗಳು ಸಂದ ಕ್ಷಣಗಳೆರಡರ ಕಾರ್ಯಕ್ರಮಗಳು ಇಂದಿನಿಂದ ಆರಂಭವಾಗಲಿವೆ. ಆದರೆ ರೆಬಲ್ ಸ್ಟಾರ್ ಅಂದ್ರೆ ಕೇವಲ ಸಿನಿಮಾ, ರಾಜಕಾರಣ ಅಷ್ಟೇ ಅಲ್ಲ. ಅವರೊಬ್ಬ ಅಪ್ಪಟ ವಾಹನಪ್ರೇಮಿ. ಕಾರುಗಳೆಂದರೆ ಮಂಡ್ಯದ ಗಂಡಿಗೆ ಏನೋ ಮೋಹ. ಬಿಡಲಾಗದ ನಂಟು.

ಪಿಟೀಲು ಚೌಡಯ್ಯನವರ ಮೊಮ್ಮಗ ಅಂಬರೀಷ್‌ಗೆ ಚಿಗುರು ಮೀಸೆ ಮೂಡುವಾಗಲೇ ವಾಹನಗಳತ್ತ ಸೆಳೆತ ಆರಂಭವಾಗಿತ್ತು. ಕಾರೊಂದು ತೆಗೆದುಕೊಡುವಂತೆ ತಂದೆ ಬಳಿ ಕೇಳಿಕೊಂಡಿದ್ದರು. ಆದರೆ ತಂದೆ ಎಂ. ಹುಚ್ಚೇಗೌಡ ಒಲ್ಲೆ ಎಂದಿದ್ದರು. ಕೊನೆಗೆ ತನ್ನ ಮೊದಲ ಸಿನಿಮಾದಲ್ಲಿ ದುಡಿದ ದುಡ್ಡನ್ನು ಪೂರ್ತಿ ಸುರಿದು ಕಾರೊಂದು ಖರೀದಿಸಿಬಿಟ್ಟರು. ಕಾಲೇಜ್ ಸ್ನೇಹಿತ ಸಂದೇಶ್ ಇವರಿಗೊಂದು ಫಿಯೆಟ್ ಕಾರು ಕೊಡಿಸಿದ್ರಂತೆ.

ದೂರದಲ್ಲೆಲ್ಲೋ ಆ ಹಾರನ್ ಸದ್ದು ಕಿವಿಗೆ ಬಿದ್ದರೆ ಸಾಕು. ಜನರೆಲ್ಲ ರಸ್ತೆಯಿಂದ ಮಾರುದ್ದ ದೂರಕ್ಕೆ ಸರಿದು ಬಿಡುತ್ತಿದ್ದರು. ಕಾಲೇಜು ದಿನಗಳಲ್ಲಿ ವೇಗದ ಆವೇಗಕ್ಕೆ ಸೆಡ್ಡು ಹೊಡೆಯುತ್ತ ಬಿಸಿರಕ್ತದ ಮಳವಳ್ಳಿ ಹುಚ್ಚೇಗೌಡ ಅಮರನಾಥ್‌ ಬರುತ್ತಿದ್ದಾನೆಂದರೆ ಬಹುಶಃ ರಸ್ತೆಗೂ ನಡುಕವಾಗುತ್ತಿತ್ತೇನೋ...! ಅದು ಅಂಬಿ ಸ್ಟೈಲ್.

1981ರಲ್ಲಿ ತೆರೆಕಂಡ ಅಂಬಿಯ 89ನೇ ಚಿತ್ರ "ಅಂತ" ನಿಮಗೆ ನೆನಪಿರಬಹುದು. ಸಿನಿಮಾಗಳಲ್ಲಿ ವಾಹನ ಚಾಲನೆ ಕೌಶಲ್ಯ ಪ್ರದರ್ಶಿಸಲು ಅದು ಅವರಿಗೆ ಸಿಕ್ಕ ಮೊದಲ ಅವಕಾಶ. ವಿಲನ್‌ಗಳನ್ನು ಜೀಪು, ಕಾರುಗಳಲ್ಲಿ ವೇಗವಾಗಿ ಹಿಂಬಾಲಿಸಿ ಮೆಟ್ಟಿಹಾಕುವ ಅಭಿನಯಕ್ಕೆ ಇವರ ವೇಗದ ಡ್ರೈವಿಂಗ್ ಅನುಭವ ಸಹಾಯಕ್ಕೆ ಬರುತ್ತಿತ್ತು.

ಅವರ ಜೊತೆಗೆ ಒಮ್ಮೆ ಕಾರಲ್ಲಿ ಬಂದವರು ಮತ್ತೊಮ್ಮೆ ಬರಲು ಭಯಪಡುತ್ತಿದ್ದರು. ಅವರ ಕಾರಲ್ಲಿ ಪ್ರಯಾಣ ಅನಿವಾರ್ಯವಾದರೆ ಸ್ವಲ್ಪ ಮೆಲ್ಲಗೆ ಹೋಗಿ ಅಂತ ವಿನಂತಿಸಿಕೊಳ್ಳುತ್ತಿದ್ದರು. ಮೈಸೂರು ಬೆಂಗಳೂರು ರಸ್ತೆ ಒನ್ ವೇ ಇದ್ದಾಗ ಸರಿಯಾಗಿ 1 ಗಂಟೆ 20 ನಿಮಿಷಗಳಲ್ಲಿ ಮೈಸೂರಿನಿಂದ ಬೆಂಗಳೂರು ತಲುಪುತ್ತಿದ್ದರೆಂದು ಅವರ ಹತ್ತಿರದ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಹಳಷ್ಟು ವರ್ಷಗಳ ಹಿಂದೆಯೇ ರಾಜ್ಯದ ರಸ್ತೆಗೆ ಅಪರೂಪವಾಗಿದ್ದ ಪ್ರಮುಖ ಕಾರುಗಳೆಲ್ಲವನ್ನೂ ಆಮದು ಮಾಡಿಕೊಂಡಿದ್ದರು. ಚಿತ್ರಗಳಲ್ಲಿ ದುಡಿದ ಹಣದ ಬಹುಪಾಲನ್ನು ಇಂತಹ ಕಾರು ಖರೀದಿಗೆ ಬಳಸುತ್ತಿದ್ದರು. ಬಹುಶಃ ಕನ್ನಡ ಚಿತ್ರರಂಗದ ಅಂದಿನ ಜಮಾನದಲ್ಲಿ ಇಷ್ಟೊಂದು ವಾಹನ ಪ್ರೇಮವಿರುವ ಬೇರೊಬ್ಬ ನಟ ಸಿಗಲಿಕ್ಕಿಲ್ಲ.

ಅಂಬರೀಷ್ ಆಡಿ, ಫಾರ್ಚ್ಯುನರ್, ಬಿಎಂಡಬ್ಲ್ಯು, ಇನ್ನೋವಾ, ಟೊಯೊಟಾ ಪ್ರಡೊ ಇತ್ಯಾದಿ ಕಾರುಗಳನ್ನು ಬಳಸುತ್ತಾರೆ. ಅದರಲ್ಲೂ ಆಡಿ, ಪ್ರಡೊ(ಪ್ರಡೊ ರಿವ್ಯೂ ನೋಡಿ), ಇನ್ನೋವಾ(ವಿಮರ್ಶೆ ಓದಿ) ಹೆಚ್ಚು ಅಚ್ಚುಮೆಚ್ಚು. ಇತ್ತೀಚೆಗೆ ಅಂಬರೀಷ್ ಅಭಿನಯಿಸಿದ್ದ ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲೂ ಆಮದು ಮಾಡಿದ ಐಷಾರಾಮಿ ಕಾರೊಂದರಲ್ಲಿ ದೊಡ್ಡಣ್ಣನ ಜೊತೆ ಯಮನಾಗಿ ಅಂಬರೀಷ್ ಕುಳಿತಿದ್ದನ್ನು ನೀವು ನೋಡಿರಬಹುದು.

ಅಂಬರೀಷ್ ಕಾರುಗಳಲ್ಲಿ ಈಗ ಇನ್ನೊಂದು ವಿಶೇಷತೆಯಿದೆ. ಅದೇನೆಂದರೆ ಅಂಬರೀಷ್ ಕಾರುಗಳ ನೋಂದಣಿ ಸಂಖ್ಯೆ 9. ಅವರಲ್ಲಿರುವ ಆಡಿ, ಪ್ರಡೊ, ಇನ್ನೋವಾ ಕಾರುಗಳ ನಂಬರ್ ಪ್ಲೇಟ್ ನೋಡಿದ್ರೆ ಇದು ಅರಿವಾಗುತ್ತದೆ. ವೇಗದ ಚಾಲನೆಯೊಂದಿಗೆ ಫ್ಯಾನ್ಸಿ ನಂಬರ್ ಕ್ರೇಝು ಇವರ ವಾಹನ ಪ್ರೀತಿಯ ಇನ್ನೊಂದು ಮುಖ. (ವಾಹನ ಫ್ಯಾನ್ಸಿ ಸಂಖ್ಯೆ ಬಗ್ಗೆ ಲೇಖನಗಳು)

ಅರುವತ್ತರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಂಬಿ ಈಗ ಸಹಜವಾಗಿ ಅತಿವೇಗದಲ್ಲಿ ಕಾರುಗಳನ್ನು ಓಡಿಸುತ್ತಿಲ್ಲ. ಆದರೂ ರೆಬಲ್ ಸ್ಟಾರ್ ಆಗಿನ ವೇಗದ ಕಾರ್ ಕ್ರೇಝ್ ನೆನಪಿಸಿಕೊಳ್ಳುವುದು ಅಭಿಮಾನಿಗಳ ಪಾಲಿಗೆ ಪುಳಕದ ಸಂಗತಿ ಅಲ್ಲವೇ? ಕನ್ನಡ ಡ್ರೈವ್‌ಸ್ಪಾರ್ಕ್ ಕಡೆಯಿಂದ ರೆಬಲ್ ಸ್ಟಾರ್ ಅಂಬರೀಷ್‌ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಬನ್ನಿ ಅಂಬರೀಷ್ ಬಳಿಯಿರುವ ದುಬಾರಿ ಪ್ರಡೊ ಕಾರಿನ ಬಗ್ಗೆ ತಿಳಿದುಕೊಳ್ಳೋಣ>>

More from DriveSpark

Article Published On: Tuesday, May 29, 2012, 9:58 [IST]
English summary
Kannada film Rebel Star Ambarish who turns 60 today is an avid car lover who possess an envious collection of luxury cars. Apart from a number of imported cars, a high-end Audi car, a Toyota Prado and and Innova have found place at the rebel star's garage. Interestingly, the kingmaker, who was denied a car by his father, owned his first car after his debut movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+