ಇಮ್ರಾನ್ ಖಾನಿಗೆ ಬುಲೆಟ್ ಗಿಫ್ಟ್ ಕೊಟ್ಟೋರು ಯಾರು?

Bollywood actor Imran Khan gifted a 500cc Royal Enfield Classic bullet by director Vishal Bhardwaj. Upcoming movie, Maatru Ki Bijli Ka Mandola scenes involving Imran Khan riding a motorcycle.
ನಿನ್ನೆಯಷ್ಟೇ ದರ್ಶನ್ 35ನೇ ವರ್ಷದ ಹುಟ್ಟುಹಬ್ಬಕ್ಕೆ ಅರ್ಧಾಂಗಿ ವಿಜಯಲಕ್ಷ್ಮಿ 1.38 ಕೋಟಿ ರುಪಾಯಿಯ ಜಾಗ್ವಾರ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಬಾಲಿವುಡ್ ನಟ ಇಮ್ರಾನ್ ಖಾನ್ ಕೂಡ 500ಸಿಸಿಯ ರಾಯಲ್ ಎನ್ ಫೀಲ್ಡ್ ಬುಲೆಟ್ ಉಡುಗೊರೆಯಾಗಿ ಪಡೆದಿದ್ದಾರೆ.

ಆದರೆ ಇಮ್ರಾನ್ ಖಾನಿಗೆ ಉಡುಗೊರೆ ನೀಡಿರುವುದು ಆತನ ಹೆಂಡತಿಯಲ್ಲ. ಮುಂಬರುವ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲಿರುವ ಇಮ್ರಾನಿಗೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಈ ಬುಲೆಟ್ ಉಡುಗೊರೆ ನೀಡಿದ್ದಾರೆ.

ಮುಂಬರುವ "ಮಾತೃ ಕಿ ಬಿಜ್ಲಿ ಕ ಮಂಡೊಲಾ" ಸಿನಿಮಾದಲ್ಲಿ ಬುಲೆಟ್ ಪ್ರಧಾನ ದೃಷ್ಯಗಳಿರುವುದರಿಂದ ಇಮ್ರಾನ್ ಖಾನ್ ರೈಡಿಂಗ್ ಸ್ಕಿಲ್ ಹೆಚ್ಚಿಸಲು ಈ ಉಡುಗೊರೆ ನೀಡಲಾಗಿದೆಯಂತೆ. 500ಸಿಸಿಯ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಬುಲೆಟಿಗೆ ದೆಹಲಿ ಎಕ್ಸ್ ಶೋರೂಂ 1.27 ಲಕ್ಷ ರು. ಮತ್ತು ಆನ್ ರೋಡ್ ದರ 1.49 ಲಕ್ಷ ರು. ಇದೆ.

ಜಿಂದಗಿ ನಾ ಮಿಲೆಗಿ ಚಿತ್ರದಲ್ಲಿ ಕತ್ರಿನಾ ಕೈಫ್ ರಾಯಲ್ ಎನ್ ಫೀಲ್ಡ್ ರೈಡ್ ಮಾಡಿದ್ದರು. ಹ್ಯಾರಿ ಪಾಟರ್ ಸೀರಿಸ್ ಚಿತ್ರವೊಂದರಲ್ಲಿ ಡೇನಿಯಲ್ ಪಾತ್ರದಾರಿ ಕೂಡ ರಾಯಲ್ ಎನ್ ಫೀಲ್ಡ್ ಬಳಸಲಾಗಿತ್ತು. ಅಮೆರಿಕದ ಆಸ್ಕರ್ ಪ್ರಶಸ್ತಿ ಪುರಷ್ಕೃತ ಸಿನಿಮಾ "ದಿ ಕ್ಯೂರಿಯಸ್ ಕೇಸ್ ಆಫ್ ಬೆಂಝಮಿನ್ ಬುಟ್ಟೋ"ನಲ್ಲೂ ನಟ ಬ್ರಾಡ್ ಪಿಟ್ ರಾಯಲ್ ಎನ್ ಫೀಲ್ಡ್ ಬುಲೆಟ್ ಬಳಸಿದ್ದರು. ಇವೆಲ್ಲ ಇತ್ತೀಚಿನ ಉದಾಹರಣೆಗಳು. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Friday, February 17, 2012, 16:13 [IST]
English summary
Bollywood actor Imran Khan gifted a 500cc Royal Enfield Classic bullet by director Vishal Bhardwaj. Upcoming movie, Maatru Ki Bijli Ka Mandola scenes involving Imran Khan riding a motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+