ಏನ್ ಚಂದಾ; ಇಂಡಿಯನ್ ಜಿಪಿ ಫೋಟೋಸ್‌ಗಾಗಿ ಕ್ಲಿಕ್ಕಿಸಿ
ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಬಹುನಿರೀಕ್ಷಿತ ಇಂಡಿಯನ್ ಗ್ರಾಂಡ್ ಪ್ರಿ ಫಾರ್ಮುಲಾ ಒನ್ ರೇಸ್‌ಗೆ ಅದ್ಧೂರಿ ಚಾಲನೆ ದೊರಕಿದ್ದು, ವಿಶ್ವದೆಲ್ಲೆಡೆಯ ಗಮನ ರಾಷ್ಟ್ರ ರಾಜಧಾನಿಯತ್ತ ಹರಡಿದೆ.
ಎರಡನೇ ಎಫ್-1 ಚಾಂಪಿಯನ್‌ಶಿಪ್ ರೇಸ್ ಭಾನುವಾರ ಸಾಗಲಿದೆ. ಇದರಂತೆ ಈಗಾಗಲೇ ಟ್ರ್ಯಾಕ್‌ನಲ್ಲಿ ಅಭ್ಯಾಸ ರೇಸ್ ನೆರವೇರಿದೆ. ಎಫ್-1 ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಇಂಡಿಯನ್ ಜಿಪಿ ಅಭ್ಯಾಸ ರೇಸ್‌ನ ಕೆಲವೊಂದು ಆಕರ್ಷಕ ಚಿತ್ರಗಳು ಇಲ್ಲಿವೆ. ನೋಡಿ ಆನಂದಿಸಿರಿ...

ಇಂಡಿಯನ್ ಗ್ರಾಂಡ್ ಪ್ರಿ
2012ನೇ ಆವೃತ್ತಿ ಇಂಡಿಯನ್ ಜಿಪಿಗೆ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಚಾಲನೆ ದೊರಕಿದ್ದು, ವಿಶ್ವಶ್ರೇಷ್ಠ ಎಫ್-1 ಚಾಲಕರು ತಮ್ಮ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಮೈಕಲ್ ಶುಮಾಕರ್
ಫಾರ್ಮುಲಾ ಒನ್ ಯುಗದ ದಿಗ್ಗಜ ಮೈಕಲ್ ಶುಮಕಾರ್ ಇಂಡಿಯನ್ ಜಿಪಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಶುಮಾಕರ್ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್ ತಲುಪುತ್ತಿದ್ದಂತೆಯೇ ಸುತ್ತುವರಿದ ಅಭಿಮಾನಿಗಳು ಆಟೋಗ್ರಾಫ್‌ಗಾಗಿ ಸುತ್ತುವರಿದಿದ್ದರು.

ಭಾರತೀಯ ಸಂಸ್ಕೃತಿಯ ಅನಾವರಣ
ಫಾರ್ಮುಲಾ ಒನ್ ರೇಸ್ ಎಂಬುದು ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ವೇದಿಕೆ ಕೂಡಾ ಆಗಿತ್ತು. ಈ ಮೂಲಕ ವಿಶ್ವದೆಲ್ಲಡೆಯ ಎಫ್-1 ಪ್ರಿಯರಲ್ಲೂ ದೇಶದ ಸಂಸ್ಕೃತಿ ಪಸರಿಸಿದೆ.

ನರೈನ್ ಕಾರ್ತಿಕೇಯನ್
ನರೈನ್ ಕಾರ್ತಿಕೇಯನ್ ದೇಶದ ಅತಿ ವೇಗದ ಎಫ್-1 ಚಾಲಕರಲ್ಲಿ ಒಬ್ಬರಾಗಿದ್ದಾರೆ. ಅವರ ಸಾನಿಧ್ಯ ತವರಿನ ಅಭಿಮಾನಿಗಳಲ್ಲಿ ಹುಮ್ಮಸ್ಸು ವೃದ್ಧಿಗೆ ಕಾರಣವಾಗಿದೆ.

ಇಂಡಿಯನ್ ಗ್ರಾಂಡ್ ಪ್ರಿ
ಫೆರಾರಿ ಪಿಟ್ ಯಾವತ್ತಿನ ಹಾಗೆ ತುಂಬಾನೇ ಬ್ಯುಸಿಯಾಗಿ ಕಾಣಿಸಿಕೊಂಡಿದ್ದರು.

ಸೆಬಾಸ್ಟಿಯನ್ ವೆಟಲ್
ಸತತ ನಾಲ್ಕನೇ ರೇಸ್ ಪ್ರಶಸ್ತಿ ಎದುರು ನೋಡುತ್ತಿರುವ ಸೆಬಾಸ್ಟಿಯನ್ ವೆಟಲ್ ಅಭ್ಯಾಸ ಅವಧಿಯಲ್ಲೂ ಉತ್ತಮ ಗತಿ ಕಾಯ್ದುಕೊಳ್ಳುವ ಮೂಲಕ ಚಾಂಪಿಯನ್‌ಶಿಪ್‌ಗೆ ತಾವೇ ಪ್ರಬಲ ಪ್ರತಿಸ್ಪರ್ಧಿ ಎಂಬುದನ್ನು ಸಾರಿದ್ದಾರೆ.

ಇಂಡಿಯನ್ ಗ್ರಾಂಡ್ ಪ್ರಿ
ಪ್ರಸ್ತುತ ಚಾಂಪಿಯನ್‌ಶಿಪ್ ಪಾಯಿಂಟ್‌ಗಳಲ್ಲಿ ವೆಟಲ್ ಹಿಂದಿನ ಇರುವ ಫೆರ್ನಾಂಡೊ ಅಲನ್ಸೊ ಸಹ ಚಾಂಪಿಯನ್‌ಶಿಪ್ ಗೆಲುವಿಗಾಗಿ ಕಠಿಣ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್
ಬುದ್ಧ ಇಂಟರ್‌ನ್ಯಾಷನಲ್ ಸೆರ್ಕ್ಯೂಟ್ (ಬಿಐಸಿ) ವಿಶ್ವಶ್ರೇಷ್ಠ ಟ್ರ್ಯಾಕ್‌ಗಳಲ್ಲಿ ಒಂದಾಗಿದೆ. ಮೇಲಿನ ಚಿತ್ರದಲ್ಲಿರುವಂತೆಯೇ ನಾವೇನೂ ಹೆಚ್ಚು ವಿವರಿಸುವ ಅಗತ್ಯವಿಲ್ಲ.

ಇಂಡಿಯನ್ ಗ್ರಾಂಡ್ ಪ್ರಿ
ಭಾರತದಲ್ಲಿ ಆಯೋಜನೆಯಾಗುತ್ತಿರುವ ಎಫ್-1 ರೇಸ್‌ನಲ್ಲಿ ಪಾಲ್ಗೊಳ್ಳಲು ಅತಿ ಹೆಚ್ಚು ಉತ್ಸಾಹಿತರಾಗಿರುವ ವಿಶ್ವದೆಲ್ಲೆಡೆಯ ಪ್ರತಿಷ್ಠಿತ ತಂಡಗಳ ಕಾರು ಚಾಲಕರು ಭಾನುವಾರ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.


Click it and Unblock the Notifications








