ವರ್ಣ ಚಿತ್ರಕಲಾವಿದೆ ಟ್ರಿನಳಿಂದ ನಗ್ನ ಮಾನವ ಬೈಕ್

Posted By:

ವಿಶ್ವದೆಲ್ಲೆಡೆಯ ವರ್ಣ ಚಿತ್ರಕಲಾವಿದರು ವಿಭಿನ್ನ ರೀತಿಯಲ್ಲಿ ತಮ್ಮ ಕಲಾ ಸೃಷ್ಟಿಯನ್ನು ಜಗತ್ತಿಗೆ ವರ್ಣಿಸಲು ಬಯಸುತ್ತಾರೆ. ಇದೇ ರೀತಿಯ ವಿನೂತನ ಮಾದರಿಯ ಪ್ರಯೋಗಕ್ಕೆ ಮುಂದಾಗಿ ಜನಮನ್ನಣೆ ಗಿಟ್ಟಿಸಿಕೊಂಡವರು ಟ್ರಿನ ಮೆರ್ರಿ.

ಅಂದ ಹಾಗೆ ಟ್ರಿನಳನ್ನು ವರ್ಣ ಚಿತ್ರಕಲಾವಿದೆ ಎಂಬುದಕ್ಕಿಂತಲೂ ಮಿಗಿಲಾಗಿ ಉತ್ಕೃಷ್ಟ 'ಬಾಡಿ ಪೈಂಟರ್' ಎಂದೇ ವಿಶ್ಲೇಷಿಸುವುದೇ ಹೆಚ್ಚು ಸೂಕ್ತವಾಗಬಹುದು. ಯಾಕೆಂದರೆ ಈಕೆಯ ಪ್ರಯೋಗ ವಾಹನಗಳ ಮೇಲಾಗಿದೆ. ಅದು ಕೂಡಾ ಅಂತಿಂಥ ವಾಹನಗಳಲ್ಲ. ಸಾಕ್ಷಾತ್ ಮಾನವ ಬೈಕ್‌ ಹಾಗೂ ಕಾರು ಸೃಷ್ಟಿ ಮಾಡುವುದರಲ್ಲೇ ಟ್ರಿನ ಮಗ್ನವಾಗಿದ್ದಾರೆ. ಮಾನವ ದೇಹದ ಅಂಗಾಂಗಗಳಿಗೆ ಬಣ್ಣ ಬಳಿದು ಬೈಕ್‌ಗಳಂತೆ ಪರಿವರ್ತಿಸುವುದು ಈಕೆಯ ಹವ್ಯಾಸವಾಗಿದೆ.

ಬಿ.ಎ ಪದವಿ ಗಿಟ್ಟಿಸಿಕೊಂಡ ಬಳಿಕ ಚಲನಚಿತ್ರ ರಂಗಕ್ಕಿಳಿದಿದ್ದ ಟ್ರಿನ ಅನೇಕ ಟಿ.ವಿ ಶೋಗಳಲ್ಲಿ ಭಾಗವಹಿಸಿದ್ದರು. ಆದರೆ ಅತಿ ಪ್ರಾಚೀನ ಅದೇ ಸಮಯಕ್ಕೆ ಸಮಕಾಲೀನ ಕಲಾಚಿತ್ರಗಳಲ್ಲಿನ ಪ್ರೇಮವು ಆಕೆಯನ್ನು ಮತ್ತೆ ಪೈಂಟಿಂಗ್‌ನತ್ತ ಸೆಳೆಯುವಂತೆ ಮಾಡಿತ್ತು.

ದೂರದಿಂದ ವೀಕ್ಷಿಸಿದ್ದಲ್ಲಿ ಬೈಕ್ ಯಾವುದು ಮನುಷ್ಯರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಟ್ರಿನ ಫಿನಿಶಿಂಗ್ ಟಚ್ ಅಷ್ಟೊಂದು ಅಮೋಘವಾಗಿರುತ್ತದೆ. ಬನ್ನಿ ಟ್ರಿನ ಮೇರಿ ನಗ್ನ ಬೈಕ್‌ಗಳತ್ತ ಒಮ್ಮೆ ಕಣ್ಣಾಯಿಸೋಣ...

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ಟ್ರಿನ ಮೆರ್ರಿ ತನ್ನ ಕಲಾ ಸೃಷ್ಟಿಗಾಗಿ ಹೆಸರಾಂತ ಮಾಡೆಲ್, ಯೋಗ ಹಾಗೂ ಸರ್ಕಸ್ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಅಂತವರ ದೇಹವು ಬೈಕ್ ರೀತಿಯಲ್ಲಿ ವಾಲುತ್ತದೆ.

ಮಾನವ ಬೈಕ್

ಮಾನವ ಬೈಕ್

ಇದು ಪೈಟಿಂಗ್‌ಗಿಂತ ಮೊದಲು ನಡೆಸುವ ರಿಹರ್ಸಲ್ ಆಗಿದೆ. ಹೀಗೆ ಮಾಡುವುದರಿಂದ ಯಾವ ರೀತಿ ಬಣ್ಣ ಹಚ್ಚಬೇಕೆಂಬ ಸರಿಯಾದ ಯೋಚನೆ ಹೊಳೆಯುತ್ತದೆ.

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ಕಲಾ ಸೃಷ್ಟಿಯ ಮೇಲಿರುವ ಆಗಾಧವಾದ ಪ್ರೀತಿಯೇ ಟ್ರಿನ ಮೆರ್ರಿಯನ್ನು ಇಂತಹದೊಂದು ಶೋಧನೆಗೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ವಾಸಿಸುತ್ತಿರುವ ಈಕೆ ತಮ್ಮ ಸೃಷ್ಟಿಗಾಗಿ ತಂಡ ರಚಿಸಿದ್ದಾರೆ.

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ತನ್ನ ಈ ಯೋಜನೆ ನನಸಾಗಿಸಲು ಈಕೆ ಹಲವು ಕಲಾವಿದರನ್ನು ಜತೆಗೂಡಿಸಿದ್ದಾರೆ. ಮೊದಲು ಕಂಪ್ಯೂಟರ್ ಮೂಲಕ ರಚಿಸಿದ ಫೋಟೊವನ್ನು ಆ ಬಳಿಕ ಕಾರ್ಯರೂಪಕ್ಕೆ ತರಲಾಗುತ್ತದೆ.

ಮಾನವ ಬೈಕ್

ಮಾನವ ಬೈಕ್

ಈ ನಗ್ನವಾದ ಮಾಡೆಲ್ ಹೆಸರು ಎರಿನ್ ಬೆಟ್ಸ್ ಎಂದಾಗಿದೆ. ಈ ಮೂಲಕ ಮನುಷ್ಯ ಅಂಗಾಂಗಗಳಿಗೆ ಬೈಕ್ ರೂಪುರೇಷೆ ನೀಡಲಾಗುತ್ತದೆ.

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ಟ್ರಿನ ಈ ಅಮೋಘ ಪೈಟಿಂಗ್‌‍ನಲ್ಲಿ ಮೂರು ವಿಭಿನ್ನಿ ಶೈಲಿಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಕ್ರೂಜರ್ ಬೈಕ್, ಡರ್ಟ್ ಬೈಕ್ ಹಾಗೂ ಸ್ಪೋರ್ಟ್ ಬೈಕ್ ಪ್ರಮುಖವಾಗಿದೆ.

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ಸದ್ಯ ವಿಶ್ವದೆಲ್ಲೆಡೆ ಡರ್ಟ್ ಬೈಕ್‌ನದ್ದೇ ಸುದ್ದಿ. ಈ ನಡುವೆ ಟ್ರಿನ ಈ ವಿನೂತನ ಪ್ರಯೋಗ. ಜನಪ್ರಿಯವಾಗಿರುವ ಈ ಬಾಡಿ ಪೈಂಟಿಂಗ್‌ನಲ್ಲಿ ಮಾಡೆಲ್ ಎರಿನ್ ಬೆಟ್ಸ್ ಇದ್ದಾರೆ.

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ಇದು ಟ್ರಿನಳಿಂದ ನಿರ್ಮಿತವಾದ ಥೇಟ್ ಸ್ಪೋರ್ಟ್ ಬೈಕ್ ಆಗಿದೆ. ಈ ಮಾನವ ಬೈಕ್ ನಿರ್ಮಿಸುವುದಕ್ಕಾಗಿ ತುಂಬಾನೇ ಕಷ್ಟಪಡಬೇಕಾಗಿ ಬಂದಿತ್ತು. ಯಾಕೆಂದರೆ ಮಾಡೆಲ್‌ಗಳು ಒಂದೇ ಸ್ಥಿತಿಯಲ್ಲಿ ತುಂಬಾ ಸಮಯ ಕುಳಿತುಕೊಳ್ಳಬೇಕಾಯಿತು.

ನಗ್ನ ಮಾನವ ಬೈಕ್

ನಗ್ನ ಮಾನವ ಬೈಕ್

ಟ್ರಿನ ಈ ಅದ್ಭುತ ಕಲಾಕೃತಿಯ ಭಾಗವಾಗಿರುವ ಮಾಡೆಲ್ ಎರಿನ್ ಬೆಟ್ಸ್ ತುಂಬಾನೇ ಖುಷಿಯಾಗಿದ್ದಾರೆ. ಈ ವಿನೂತನ ಪ್ರಯೋಗ ಸದ್ಯದಲ್ಲೇ ಅಂತರಾಷ್ಟ್ರೀಯ ಮೋಟಾರ್ ಶೋನಲ್ಲೂ ಬೆಳಕಿಗೆ ಬರಲಿದೆ.

English summary
Trina Merry the fine art and fashion body painter has created a human motorcycle. Don't believe us? Step right in to check out Trina Merry's Human dirt bike, cruiser and sportsbike human models.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark