ಕಸ್ಟಮರ್ ಸರ್ವೀಸ್: ಸತತ 13ನೇ ಬಾರಿಯೂ ಮಾರುತಿ ನಂ. 1

ಆಟೋ ಜಗತ್ತಿನಲ್ಲಿ ಮತ್ತೊಂದು ಮೈಲುಗಲ್ಲನ್ನಿಟ್ಟಿರುವ ಮಾರುತಿ ಸುಜುಕಿ, ನೂತನವಾಗಿ ಬಿಡುಗಡೆಯಾಗಿರುವ ಜೆಡಿ ಪವರ್ ಕಸ್ಟಮರ್ ಸರ್ವೀಸ್ ಇಂಡೆಕ್ಸ್‌ನಲ್ಲಿ (ಸಿಎಸ್‌ಐ) ಮಗದೊಮ್ಮೆ ನಂ. 1 ಸ್ಥಾನ ಗಿಟ್ಟಿಸಿಕೊಂಡಿದೆ. ಈ ಮೂಲಕ ಸತತ 13ನೇ ಬಾರಿಯೂ ಮಾರುತಿ ತನ್ನ ಸಾಧನೆಯನ್ನು ಪುನರಾವರ್ತಿಸಿದೆ.

ಗ್ರಾಹಕರಿಗೆ ಅನುಕೂಲಕರ ಸೇವಾ ಸೌಲಭ್ಯಗಳನ್ನು ಒದಗಿಸುವ ಬೇಡಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ನಾಲ್ಕು ಚಕ್ರದ ವಾಹನಗಳಲ್ಲಿ ಸರಿಯಾದ ಚಾಲನೆ, ಹೊಂದಾಣಿಕೆಯ ಸರ್ವೀಸ್ ಹಾಗೂ ಶೀಘ್ರ ಪರಿಹಾರಗಳನ್ನು ದೇಶದ ಕಾರು ಚಾಲಕರು ಬಯಸುತ್ತಾರೆ. ಇದರಂತೆ ಎಲ್ಲ ಪ್ರಮುಖ ಕಾರು ಕಂಪನಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಕಳೆದ 16 ವರ್ಷಗಳಿಂದ ಜೆಡಿ ಪವರ್ ಸಂಶೋಧನೆ ನಡೆಸಿಕೊಂಡು ಬಂದಿದೆ. ಈ ಮೂಲಕ ಡೀಲರ್‌ಶಿಪ್‌ಗಳಿಗೆ ತಮ್ಮ ಕಾರುಗಳ ಸಹಿತ ಸರ್ವೀಸ್‌ ನಡೆಸಲು ಬರುತ್ತಿರುವ ಕಾರು ಮಾಲಿಕರಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಒಟ್ಟು ಐದು ವಿಭಾಗಗಳಲ್ಲಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅವೆಂದರೆ ಸೇವೆಯ ಗುಣಮಟ್ಟ, ವಾಹನ ಪಿಕ್ ಅಪ್, ಸರ್ವೀಸ್ ಸಲಹೆಗಾರ, ಸರ್ವೀಸ್ ಸೌಲಭ್ಯ ಹಾಗೂ ಸರ್ವೀಸ್ ಆರಂಭ ಒಳಗೊಂಡಿರುತ್ತದೆ. ಹಾಗೆಯೇ ಎಲ್ಲ ಬ್ರಾಂಡ್‌ಗಳನ್ನು 1000 ಪಾಯಿಂಟ್‌ಗಳಲ್ಲಿ ರೇಟಿಂಗ್ ಮಾಡಲಾಗುತ್ತದೆ.

ಇದರಂತೆ ಮಾರುತಿ ಸುಜುಕಿ ನಂ. 1 ಪಟ್ಟ ಗಿಟ್ಟಿಸಿಕೊಂಡರೆ ಹೊಂಡಾ ಕಂಪನಿ ದ್ವಿತೀಯ ಸ್ಥಾನ ಪಡೆದಿದೆ. ಮಾರುತಿ ಸುಜಕಿ 879 ಅಂಕ ಪಡೆದಿದ್ದರೆ ಹೊಂಡಾ 815 ಪಾಯಿಂಟ್ ಗಿಟ್ಟಿಸಿತ್ತು. ಹಾಗೆಯೇ 803 ಅಂಕ ಪಡೆದ ಹುಂಡೈ ಮೂರನೇ ಸ್ಥಾನಕ್ಕೆ ಅರ್ಹವಾಗಿದೆ.

ಜೆಡಿ ಪವರ್ ಇಂಡೆಕ್ಸ್ ಟಾಪ್ ಫೈವ್ ಪಟ್ಟಿ ಇಂತಿದೆ:
1. ಮಾರುತಿ ಸುಜುಕಿ- 879
2. ಹೊಂಡಾ- 815
3. ಹುಂಡೈ- 803
4. ಟೊಯೊಟಾ- 799
5. ಮಹೀಂದ್ರ- 798

ಫೋಕ್ಸ್‌ವಾಗನ್ 775 ಅಂಕಗಳೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಸ್ಕೋಡಾ ಹಾಗೂ ಷೆವರ್ಲೆ ಅಂತಿಮ ಮೂರು ಸ್ಥಾನಗಳಿಗೆ ತೃಪ್ತಪಟ್ಟುಕೊಂಡಿದೆ.

ಸಮೀಕ್ಷಾ ವರದಿಯು ಇತ್ತೀಚಿನ ದಿನಗಳಲ್ಲಿ ಕಾರು ಮಾಲಿಕರು ತಮ್ಮ ವಾಹನಗಳ ಸರ್ವೀಸ್‌ಗಳಿ ಭಾರಿ ಮಹತ್ವ ನೀಡುತ್ತಾರೆ ಎಂಬುದು ಕಂಡುಬಂದಿದೆ. ಹಾಗಾಗಿ ಸರಿಯಾದ ಸೇವೆ ಒದಗಿಸಿಕೊಡುವುದು ಕಾರು ಕಂಪನಿಯ ಬದ್ಧತೆಯಾಗಿರುತ್ತದೆ.

ಸತತ 13ನೇ ಬಾರಿಯೂ ಮಾರುತಿ ನಂ. 1

ಸತತ 13ನೇ ಬಾರಿಯೂ ಮಾರುತಿ ನಂ. 1

879 ಅಂಕ ಗಿಟ್ಟಿಸಿಕೊಂಡ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಸತತ 13ನೇ ಬಾರಿಯೂ ನಂ. 1 ಸ್ಥಾನ ಗಿಟ್ಟಿಸಿಕೊಂಡಿದೆ.

ಹೊಂಡಾ ನಂ. 2

ಹೊಂಡಾ ನಂ. 2

ಕೇವಲ 64 ಅಂಕಗಳಿಂದ ಅಗ್ರಸ್ಥಾನ ಕಳೆದುಕೊಂಡ ಹೊಂಡಾ ನಂ. 2 ಸ್ಥಾನಕ್ಕೆ ತೃಪ್ತಪಟ್ಟುಕೊಂಡಿದೆ.

ಹ್ಯುಂಡೈ ನಂ. 3

ಹ್ಯುಂಡೈ ನಂ. 3

803 ಅಂಕ ಪಡೆದ ಹ್ಯುಂಡೈ ನಂ. 3

ಟೊಯೊಟಾ ನಂ.4

ಟೊಯೊಟಾ ನಂ.4

799 ಅಂಕ ಗಿಟ್ಟಿಸಿಕೊಂಡ ಟೊಯೊಟಾಗೆ ನಾಲ್ಕನೇ ಸ್ಥಾನ

ಟಾಪ್ 5ರಲ್ಲಿ ಮಹೀಂದ್ರ

ಟಾಪ್ 5ರಲ್ಲಿ ಮಹೀಂದ್ರ

ಕೇವಲ ಒಂದು ಅಂಕ ವ್ಯತ್ಯಾಸದಲ್ಲಿ ನಂ.4 ಸ್ಥಾನವನ್ನು ಮಹೀಂದ್ರ ತಪ್ಪಿಸಿಕೊಂಡಿದೆ

More from DriveSpark

Article Published On: Tuesday, November 6, 2012, 14:20 [IST]
English summary
The JD Power Customer Service Index (CSI) for 2012 revealed that customers' demand for convenient vehicle servicing facilities has increased considerably, and Maruti Suzuki came out trumps in the service index, achieving this acclaim for the 13th year in a row.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+