ಕಾರು ಮೋಹದಲ್ಲಿ ಕಳೆದು ಹೋದ ಸಿದ್ಲಿಂಗು

Kannada film Sidlingu and Car Craze
(ಮುಂದುವರೆದ ಭಾಗ) ಕಾರಿನ ದಾಖಲೆಗಳನ್ನು ಜಾಗೃತೆಯಾಗಿ ಇಟ್ಟುಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ಸಿದ್ಲಿಂಗು ಸೂಕ್ತ ನಿದರ್ಶನ. ಸೆಕೆಂಡ್ ಹ್ಯಾಂಡ್ ಕಾರು ಮಾಲಿಕ ಕವರೊಂದರಲ್ಲಿ ಸಿದ್ಲಿಂಗು ಹೆಸರಿಗೆ ಫಾರಮ್ 6 ನೀಡಿರುತ್ತಾನೆ. ಸಿದ್ಲಿಂಗು ಆರ್ ಟಿಓ ಕಚೇರಿಗೆ ಫಾರಮ್ 6 ತೆಗೆದುಕೊಂಡು ಹೋಗುತ್ತಾನೆ.

ಅಲ್ಲಿ ಹಲವು ವರ್ಷಗಳಿಂದ ನೋಡಿರದ ಕಾಲೇಜ್ ಟೀಚರ್ ಅಂದಾಲಮ್ಮ ಆಕಸ್ಮಿಕವಾಗಿ ಭೇಟಿಯಾಗುತ್ತಾಳೆ. ಅವನಿಗೆ ಒಂದನೊಂದು ಕಾಲದಲ್ಲಿ ಕಾರಿನಲ್ಲಿ ನಡೆದ ಆಕಸ್ಮಿಕ ಮಿಲನದ ನೆನಪಾಗುತ್ತದೆ. ಅಲ್ಲಿಂದ ಎದ್ದನೋ ಬಿದ್ದನೋ ಎಂದು ಓಡುತ್ತಾನೆ. ಅಲ್ಲ... ನಾನು ಯಾಕೆ ಓಡುತ್ತೇನೆ ಎಂದು ಜ್ಞಾನೋದಯ ಆದಾಗ ಫಾರ್ಮ್ 6 ಕಳೆದು ಹೋಗಿರುತ್ತದೆ.

ನಡುರಾತ್ರೆ ಸಿದ್ಲಿಂಗುವಿನ ಲೈಸನ್ಸ್ ಇಲ್ಲದ ಕಾರನ್ನು ಪೊಲೀಸರು ಹಿಡಿಯುತ್ತಾರೆ. ಈ ಕಾರು ಕಾಣೆಯಾಗಿದೆ ಎಂದು ಕಾರಿನ ಮಾಜಿ ಮಾಲಿಕನ ರೌಡಿ ಮಗ ದೂರು ನೀಡಿರುತ್ತಾನೆ. ಆ ಕಾರು ರೌಡಿಗೆ ವಾಪಸ್ ನೀಡುವ ಕ್ಷಣ, ಸಿದ್ಲಿಂಗು ಮತ್ತು ಮಂಗಳ ಟೀಚರ್ ದುಃಖ ಸಿನಿಮಾ ವೀಕ್ಷಕರ ಮನಕಲಕುತ್ತದೆ

ತನ್ನ ಕಾರನ್ನು ಮತ್ತೆ ರೌಡಿಯಿಂದ ವಾಪಸ್ ಪಡೆಯಲು ಮಾಡಿದ ಪ್ರಯತ್ನದಲ್ಲಿ ಎರಡನೇ ಆಕಸ್ಮಿಕ ನಡೆಯುತ್ತದೆ. ಮಿಲನ ಮರಣದ ಅಕಸ್ಮಿಕ ಚಿತ್ರವಾದ ಸಿದ್ಲಿಂಗುವಿನಲ್ಲಿ ಕಾರು ಕಾಡುತ್ತದೆ. ಕಾರನ್ನು ಮುಖ್ಯ ವಸ್ತುವಾಗಿಟ್ಟುಕೊಂಡ ಸಿದ್ಲಿಂಗು ಸಿನಿಮಾ ಇಷ್ಟವಾಗಲು ಲೂಸ್ ಮಾದನ ನೇರ ಪೋಲಿ ಮಾತುಗಳು ಕೂಡ ಕಾರಣವಾಗಬಹುದು.

ಕಾರಿನ ಕುರಿತಾಗಿ ಬಂದ ಕನ್ನಡ ಸಿನಿಮಾ ಸಿದ್ಲಿಂಗು ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಿಗೂ ಇಷ್ಟವಾಗಬಹುದು.

More from DriveSpark

Article Published On: Wednesday, January 25, 2012, 12:26 [IST]
English summary
Sidlingu and Car Love: Kannada film Sidlingu using car buying story of sidlingu. Sidlingu fascination in life is to own a vintage car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+