ಲೂಸ್ ಮಾದ ಸಿದ್ಲಿಂಗು ಸಿನಿಮಾದಲ್ಲಿ ಕಾಡುವ ಕಾರು

Kannada film Sidlingu and Car Craze
ಸಿನಿಮಾ ಜಗತ್ತಿನಲ್ಲಿ ಕಾರು ಬಳಕೆ ಹೊಸ ವಿಷಯವೇನಲ್ಲ. ಬಾಲಿವುಡ್, ಹಾಲಿವುಡ್ ಚಿತ್ರಗಳಲ್ಲಿ ಕಾರುಗಳು ಫೈಟ್ ಗೆ ಪ್ರಮುಖ ವಸ್ತು. ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಕನ್ನಡ ಚಿತ್ರಗಳಲ್ಲಿ ಕಾರನ್ನು ಪ್ರಮುಖ ವಸ್ತುವಾಗಿಟ್ಟುಕೊಂಡು ಬಂದ ವಿನೂತನ ಚಿತ್ರ ಸಿದ್ಲಿಂಗು. ಈ ಚಿತ್ರದಲ್ಲಿ ಕಾರು ಭಾವಾನಾತ್ಮಕವಾಗಿ ನಮ್ಮನ್ನು ಕಾಡುವ ಬಂಡಿ.

ಚಿತ್ರ ಆರಂಭವಾಗುವುದೇ ಸಿದ್ಲಿಂಗುವಿನ ಕಾರು ಮೋಹದ ಫ್ಲಾಷ್ ಬ್ಯಾಕ್ ನೊಂದಿಗೆ. ಆತನ ಸ್ಕೂಲ್ ಬ್ಯಾಗ್ ನಲ್ಲಿ ಕಾರಿನ ಕಸೂತಿ ಚಿತ್ರ. ಕ್ಲಾಸ್ ಮೇಟ್ ಹುಡುಗಿಯೊಬ್ಬಳೊಂದಿಗೆ ನಿತ್ಯ ಜಗಳ ಮಾಡುತ್ತಿದ್ದ. ಆದರೆ ಆಕೆ ಸ್ಕೂಲಿಗೆ ಕಾರಿನಲ್ಲಿ ಬರಲು ಆರಂಭಿಸಿದಾಗ ಆತನಿಗೆ ಅವಳೊಂದಿಗೆ ಲವ್ವು ಸುರುವಾಗುತ್ತದೆ. ನಿನ್ನಲ್ಲಿ ಕಾರಿದೆ ಅದಕ್ಕೆ ನಿನ್ನ ಸ್ನೇಹ ಮಾಡಿದೆ ಅಂತ ನೇರವಾಗಿ ಹೇಳುತ್ತಾನೆ.

ಆ ಬಾಲ್ಯದ ಗೆಳತಿಯೊಂದಿಗೆ ಶಾಲಾ ಕಾಂಪೌಂಡಿನಲ್ಲಿ ಮಸಿಯಿಂದ ಕಾರಿನ ಚಿತ್ರ ಬಿಡಿಸುತ್ತಾನೆ. ಕಾರು ಅಪಘಾತದಲ್ಲಿ ಆತನ ಬಾಲ್ಯದ ಗೆಳತಿ ಸಾಯುತ್ತಾಳೆ. ಆತ ಕಾರಿನ ಚಿತ್ರವಿರುವ ಕಾಂಪೌಂಡ್ ಮುಂದೆ ಅಳುತ್ತಾನೆ. ಮಳೆ ಬರುತ್ತದೆ. ಮಸಿಯಲ್ಲಿ ಬರೆದ ಕಾರಿನ ಚಿತ್ರ ಕರಗುತ್ತದೆ. ಅವನ ಮೊದಲ ಕಾರು/ಪ್ರೀತಿ ಹೀಗೆ ದುರಂತವಾಗುತ್ತದೆ.

ಕಾಲೇಜು ಕಲಿಯುತ್ತಿರುವಾಗ ಸಿದ್ಲಿಂಗು ಅಂದಾಲಮ್ಮ (ಸುಮನ್ ರಂಗನಾಥ್) ಎಂಬ ಟೀಚರನ್ನು ಇಷ್ಟಪಡುತ್ತಾನೆ. ಆಕೆಯಲ್ಲಿ ಕಾರಿರುವುದು ಆಕೆ ಇಷ್ಟವಾಗಲು ಪ್ರಮುಖ ಕಾರಣ. ಅವನಿಗೆ ಅವಳ ಕಾರು ಇಷ್ಟ. ಅವಳಿಗೆ ರೈಲು ಇಷ್ಟ. ಕಾರಿನಲ್ಲಿಯೇ ಅಂದಾಲಮ್ಮನೊಂದಿಗೆ ಆಕಸ್ಮಿಕವಾಗಿ "ಮಿಲನ"ವಾಗುತ್ತದೆ. ಅದರ ಷಾಕ್ ನಿಂದ ಮನೆಗೆ ಬಂದವನನ್ನು ತಂದೆತಾಯಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕಾಯುತ್ತಿರುತ್ತದೆ.

ಅಲ್ಲಿಂದ ಈತನ ಬದುಕು ಬೀದಿಪಾಲಾಗುತ್ತದೆ. ಕಷ್ಟದಲ್ಲಿರುವರಿಗೆ ಸಹಾಯ ಮಾಡುತ್ತ ಬದುಕುತ್ತಾನೆ. ಆಗಲೂ ಅವನಲ್ಲಿ ಕಾರು ಖರೀದಿಸುವ ಕನಸು ಜೀವಂತವಾಗಿರುತ್ತದೆ. ಇದಕ್ಕಾಗಿ ಸೆಕೆಂಡ್ ಹ್ಯಾಂಡ್ ಖರೀದಿಸಲು ಶತಪ್ರಯತ್ನ ಮಾಡುತ್ತಾನೆ. ಕೊನೆಗೂ ಸಾಲಗೀಲ ಮಾಡಿ ಸೆಕೆಂಡ್ ಹ್ಯಾಂಡ್ ವಿಂಟೇಜ್ ಕಾರು ಖರೀದಿಸುತ್ತಾನೆ. ಲಕ್ಷುರಿ ಕಾರುಗಳೊಂದಿಗೆ ಕಾರಿನ ಕುರಿತು ಹಾಡು ಕೂಡ ಈ ಚಿತ್ರದಲ್ಲಿದೆ.

ಕಾರು ಖರೀದಿಗೆ ಎಲ್ಲರಂತೆ ಸಾಲ ಮಾಡುತ್ತಾನೆ. ಸಾಲ ಮಾಡುವ ಸಮಯದಲ್ಲಿ ಮಂಗಳೆ ಟೀಚರ್(ರಮ್ಯ) ಪರಿಚಯವಾಗುತ್ತದೆ. ಆಕೆಯಲ್ಲಿ ಕಾರಿರದಿದ್ದರೂ ಪ್ರೀತಿ ಹುಟ್ಟುತ್ತದೆ. ಈತನ ಕಾರು ಹೋರಾಟದಲ್ಲಿ ಆಕೆಯೂ ಭಾಗಿಯಾಗುತ್ತಾಳೆ. (ಆಗ ಆಕಸ್ಮಿಕವಾಗಿ ಕಾಲೇಜಿನಲ್ಲಿ ಕಾರಿನಲ್ಲಿ ಮಿಲನ ಮಹೂರ್ತ ನಡೆಸಿದ ಟೀಚರ್ ಅಂದಾಲಮ್ಮ ಮತ್ತೆ ಸಿಕ್ಕಾಗ ಏನಾಯಿತು? ಮುಂದಿನ ಪುಟ ನೋಡಿ)

More from DriveSpark

Article Published On: Wednesday, January 25, 2012, 12:30 [IST]
English summary
Sidlingu and Car Love: Kannada film Sidlingu using car buying story of sidlingu. Sidlingu fascination in life is to own a vintage car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+