ಮಾರುತಿ ಸುಜುಕಿ ಆಲ್ಟೊ ಕಾರಿನ ಯುಗಾಂತ್ಯ?
ಒಂದೆಡೆ ಇಂಧನ ದರ ಗಗನಕ್ಕೇರುತ್ತಿದೆ. ಡೀಸೆಲ್ ಕಾರುಗಳಿಗೂ ಹೆಚ್ಚುವರಿ ಸುಂಕದ ಭೀತಿಯಿದೆ. ಆದರೂ ದೇಶದ ವಾಹನ ಮಾರುಕಟ್ಟೆ ಜಗತ್ತಿನಲ್ಲಿಯೇ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಮಾರುತಿ ಸುಜುಕಿ ಕಂಪನಿಯ ಪುಟ್ಟಕಾರು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.
ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಮಾರುತಿ ಸುಜುಕಿ ಆಲ್ಟೊ ಮಾರಾಟವಾಗುತ್ತಿದೆ. ಮಾರುತಿ 800 ಸ್ಥಾನವನ್ನು ಅಲಂಕರಿಸಿಕೊಂಡ ಆಲ್ಟೊಗೆ ಅತ್ಯಧಿಕ ಬೇಡಿಕೆಯಿದೆ. ಮಾರುತಿ ಸುಜುಕಿ ಕಂಪನಿಯು ದೇಶದ ವಾಹನ ಮಾರುಕಟ್ಟೆಯಲ್ಲಿ ಶೇಕಡ 60ರಷ್ಟು ಪಾಲು ಪಡೆದಿದೆ. ಕೇವಲ ಕಳೆದ ತಿಂಗಳು ಮಾತ್ರ 20,724 ಯುನಿಟ್ ಆಲ್ಟೊ ಮಾರಾಟವಾಗಿದೆ. ಇಡೀ ವಿಶ್ವದಲ್ಲಿಯೇ ಅತ್ಯಧಿಕ ಮಾರಾಟದ ಕಾರೆಂಬ ಗರಿಮೆಯನ್ನು ಆಲ್ಟೊ ಪಡೆದಿದೆ.
ಆಲ್ಟೊ ಮಾರಾಟ ಹೆಚ್ಚಳಕ್ಕೆ ಕಾರಣ ಅದರ ಅಗ್ಗದ ದರ. ಇದು ದೇಶದಲ್ಲಿರುವ ಅಗ್ಗದ ಕಾರುಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಟಾಟಾ ನ್ಯಾನೊ ಪ್ರಥಮ ಸ್ಥಾನ ಪಡೆದಿದೆ. ಕಡಿಮೆ ರನ್ನಿಂಗ್ ವೆಚ್ಚ ಆಲ್ಟೊ ಕಾರಿನ ಇನ್ನೊಂದು ವಿಶೇಷತೆ.
ಮಾರುತಿ ಸುಜುಕಿ ಆಲ್ಟೊ ಕಾರು ಸಿಟಿ ಮತ್ತು ಹೆದ್ದಾರಿ ರಸ್ತೆಗಳಿಗೆ ಪೂರಕವಾಗಿದೆ. ಆಲ್ಟೊ ಕಾರು ಸಾಮಾನ್ಯ ಆವೃತ್ತಿ ಮತ್ತು ಕೆ10 ಎಂಜಿನ್ ಆವೃತ್ತಿ ಎಂಬ ಎರಡು ಆಯ್ಕೆಯಲ್ಲಿ ದೊರಕುತ್ತದೆ. ಆಲ್ಟೊ ದರ 2.4 ಲಕ್ಷ ರುಪಾಯಿಯಿಂದ 3.2 ಲಕ್ಷ ರುಪಾಯಿ ಇದೆ.
ಆದರೆ ಕಂಪನಿಯು ಆಲ್ಟೊ ಬದಲಿಗೆ ಹೊಸ ಆವೃತ್ತಿಯೊಂದನ್ನು ಪರಿಚಯಿಸಲು ಯೋಜಿಸುತ್ತಿದೆ. ಈ ಮೂಲಕ ಮಾರುತಿ 800 ಕಾರಿನಂತೆ ಆಲ್ಟೊ ಕಾರನ್ನು ನೇಪತ್ತಕ್ಕೆ ಸರಿಸಲು ಕಂಪನಿ ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ ಇರುವುದು ಆಲ್ಟೊ ಬೇಡಿಕೆ ಮೇಲೆ ಪರಿಣಾಮ ಬೀರುತ್ತಿದೆ. ಹೊಸ ಸಣ್ಣಕಾರು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕುವ ನಿರೀಕ್ಷೆಯಿದೆ.
ವರದಿಗಳ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಸುಜುಕಿ ಕಂಪನಿಯು ಮಾರಾಟ ಮಾಡುತ್ತಿರುವ ಸೆರ್ವೊ ಸಣ್ಣಕಾರು ಆಲ್ಟೊ ಸ್ಥಾನಕ್ಕೆ ಆಗಮಿಸಲಿದೆಯಂತೆ. ಯಾವುದಕ್ಕೂ ಕೊಂಚ ದಿನ ಕಾದು ನೋಡಿದರೆ ಕಂಪನಿಯ ಕಾರ್ಯತಂತ್ರಗಳು ಸ್ಪಷ್ಟವಾಗಲಿದೆ. (


Click it and Unblock the Notifications









