ಲಂಬೊರ್ಗಿನಿ ಡಿಕ್ಕಿ: 10 ಸೂಪರ್ ಬೈಕ್ ಡಮಾರ್!

ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವ ಲಂಬೊರ್ಗಿನಿ ಮುರ್ಸಿಲಾಗೊ ಕಾರೊಂದು ಚಾಲಕನ ಹಿಡಿತ ತಪ್ಪಿ ಅಪಘಾತಗೊಂಡ ಘಟನೆ ಇಟಲಿಯಲ್ಲಿ ನಡೆದಿದೆ. ಈ ಕಾರು ಶೋರೂಂ ಹೊರಗೆ ನಿಲ್ಲಿಸಿದ ಹತ್ತು ಹೊಸ ಬಿಎಂಡಬ್ಲ್ಯು ಸೂಪರ್ ಬೈಕುಗಳಿಗೆ ಡಿಕ್ಕಿ ಹೊಡೆದು ಚಿಂದಿ ಚಿತ್ರಾನ್ನ ಮಾಡಿದೆ. ಬಿಎಂಡಬ್ಲ್ಯು ಶೋರೂಂಗೂ ಹಾನಿಯಾಗಿದ್ದೂ ಒಟ್ಟು ನಷ್ಟ ಹಲವು ಕೋಟಿ ರು. ದಾಟಿದೆ.

ಲಂಬೊರ್ಗಿನಿ ಮುರ್ಸಿಲಾಗೊ ಅಪಘಾತದಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ. ಚಾಲಕ, ಸಹ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಯಾವುದೇ ಗಾಯಗಳು ಆಗಿಲ್ಲ. ಆದರೆ 10 ಹೊಸ ಸೂಪರ್ ಬೈಕ್ ಸೇರಿದಂತೆ ಬಿಎಂಡಬ್ಲ್ಯು ಡೀಲರ್ ಶೋರೂಂಗೆ ಮಾತ್ರ ಅಪಾರ ಹಾನಿಯಾಗಿದೆ. ಲಂಬೊರ್ಗಿನಿ ಕಾರು ಕೂಡ ಜಖಂಗೊಂಡಿದೆ.

ಸೂಪರ್ ಕಾರುಗಳು ಅಪಘಾತಗೊಳ್ಳುವುದು ಇದು ಮೊದಲಲ್ಲ. ಅತಿವೇಗದಲ್ಲಿ ಚಲಿಸುವ ಈ ಕಾರುಗಳು ಸಾಕಷ್ಟು ಅಪಘಾತಗಳನ್ನು ಮಾಡುತ್ತಿವೆ. ಇದರಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿಯೂ ನಷ್ಟವಾಗುತ್ತದೆ.

ಮೇ ತಿಂಗಳಲ್ಲಿ ಆಸ್ಟನ್ ಮಾರ್ಟಿನ್ ಅಪ್ಪಚ್ಚಿಯಾದ ಸ್ಟೋರಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಪ್ರಕಟಿಸಿತ್ತು. ಪ್ಲೇಬಾಯ್ ಬೆತ್ತಲೆ ಸುಂದರಿ ಲಿಂಡ್ಸೆ ಕಾರು ಅಪಘಾತಗೊಂಡ ಲೇಖನವನ್ನೂ ನೀವು ಓದಿರಬಹುದು. 15 ಲಕ್ಷುರಿ ಕಾರುಗಳ ಭಯಾನಕ ಅಪಘಾತದ ದೃಷ್ಯವಂತೂ ಮರೆಯುವ ಹಾಗಿಲ್ಲ.

More from DriveSpark

Article Published On: Tuesday, July 10, 2012, 11:45 [IST]
English summary
A black colour Lamborghini Murcielago drive lost his control on the car and rammed in to Valli Motorrad in Mariano Comense near Como, Italy. Nearly 10 brand new BMW motorcycles as well as Lamborghini Murcielago also got damaged in this accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+