ವಯಸ್ಕರಿಗೆ ಮಾತ್ರ: ಕಾರಲ್ಲಿ ತನನಂ ತನನಂ

ಕಾರು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಕೆಲವರ ಪಾಲಿಗೆ ಅದು ಪ್ರಣಯದ ಪಲ್ಲಂಗ. ಒಂದು ಅಂದಾಜಿನ ಪ್ರಕಾರ ಶೇಕಡ 50ರಷ್ಟು ಕಾರಿರುವ ದಂಪತಿಗಳು ಕಾರಿನೊಳಗೆಯೇ ಒಂದಾಗಿರುತ್ತಾರೆ. ಕಾರಿನೊಳಗೆಯೇ ಮಿಲನ ಮಹೋತ್ಸವ ನಡೆಸಿರುತ್ತಾರಂತೆ!

"ಮಿಲನ ಕೇವಲ ಬೆಡ್ ರೂಂ, ಬಾತ್ ರೂಂಗೆ ಯಾಕೆ ಸೀಮಿತವಾಗಿರಬೇಕು. ಕಾರಿನೊಳಗೆ ಒಮ್ಮೆ ವಿಜ್ರಂಭಿಸಿ ನೋಡಿ. ಇದರಿಂದ ಬಾಂಧವ್ಯ ಹೆಚ್ಚು ಆಸಕ್ತಿದಾಯಕವಾಗಿರುತ್ತದೆ" ಎಂದು ಹೆಸರು ಹೇಳಲು ಇಚ್ಚಿಸದ ಕಾರು ಮಾಲಿಕರೊಬ್ಬರು ಹೇಳುತ್ತಾರೆ.

ಜೊತೆಯಾಗುವ ಪ್ರಕ್ರಿಯೆ ಯಾಂತ್ರಿಕವಾಗಿರಬಾರದು. ಅದರಲ್ಲೂ ಬದಲಾವಣೆ ಬೇಕು, ಸರ್ ಪ್ರೈಸ್ ಆಗಿ ಒಮ್ಮೊಮ್ಮೆ ಈ ರೀತಿಯೂ ಒಂದಾಗಬೇಕು. ಅದರ ಅನುಭವ ಬಹುಕಾಲ ನೆನಪಿನಲ್ಲಿರುತ್ತದೆ ಎನ್ನುವುದು ಅವರ ಅಭಿಪ್ರಾಯ.

ಕಾರಿನೊಳಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಹೆಚ್ಚು ಕಂಫರ್ಟ್ ಇರದು ಎನ್ನುವ ದೂರು ಇರಬಹುದು. ಆದರೆ ಹಲವು ವರ್ಷಗಳ ಕಾಲ ಜೊತೆಯಾಗಿ ಬಾಳಿರುವ ದಂಪತಿಗಳಿಗೆ ಈ ಸಣ್ಣ ಸ್ಥಳಾವಕಾಶ ಹೆಚ್ಚು ವಿಭಿನ್ನ ಅನುಭವ ನೀಡಬಹುದು.

ಓಹ್, ಈ ಲೇಖನ ಓದಿ ಕಾರಿನೊಳಗೆ ಮಿಲನಮಹೋತ್ಸವ ನಡೆಸಲು ಪ್ಲಾನ್ ಮಾಡಿದ್ದರೆ ಒಂದ್ನಿಮಿಷ ನಿಲ್ಲಿ. ಕಾರಿನೊಳಗೆ ಲೈಂಗಿಕ ಕ್ರಿಯೆ ನಡೆಸುವುದು ಕಾನೂನು ಪ್ರಕಾರ ಗಂಭೀರ ಅಪರಾಧ. ಪೊಲೀಸರು ನಿಮ್ಮನ್ನು ಬಂಧಿಸಬಹುದು. ವಿವಿಧ ದೇಶಗಳಲ್ಲಿ ಈ ಕುರಿತಾಗಿ ಕಟ್ಟುನಿಟ್ಟಿನ ಕಾನೂನುಗಳಿವೆ.

ಅಂದ ಹಾಗೆ ಟಿಂಟೆಡ್ ಗ್ಲಾಸ್ ನಿಷೇಧ ಮಾಡಲು ಇದು ಒಂದು ಕಾರಣ. ಕಾರಿನೊಳಗೆ ನಡೆಯುವ ಅತ್ಯಾಚಾರಗಳು, ಕಾರಿನೊಳಗೆ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಿಗೆ ಗಾಢ ಫಿಲ್ಮ್ ಹಾಕೋದನ್ನು ನಿಷೇಧಿಸಲಾಗಿದೆ.

ಓದಿ: ಫಿಲ್ಮ್ ರಿಮೂವ್ ಮಾಡೋದು ಹೇಗೆ?

More from DriveSpark

Article Published On: Saturday, May 19, 2012, 12:10 [IST]
English summary
Making love inside car is Offense. Don't do it. Remove your car tinted glass. The Supreme Court banned the use of tinted glass, many crimes, including sexual assault on women, were committed by offenders who used cars with tinted glasses to evade public gaze and conceal their identity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+