ಭಲೇ ಭಲೇ: ಟಾಟಾ ಹಿಂದಿಕ್ಕಿದ ಮಹೀಂದ್ರ

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್ ಮೂರನೇ ಸ್ಥಾನದಲ್ಲಿ ನಿಶ್ಚಿಂತೆಯಿಂದ ಇತ್ತು. ಇದೀಗ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಈ ಸ್ಥಾನವನ್ನು ಆಕ್ರಮಿಸಿಕೊಂಡಿದ್ದು, ಟಾಟಾವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ. ಇದಕ್ಕೂ ಮೊದಲು ಟಾಟಾ ಎರಡನೇ ಸ್ಥಾನದಲ್ಲಿತ್ತು. ಈ ಸ್ಥಾನವನ್ನು ಹ್ಯುಂಡೈ ಕಸಿದುಕೊಂಡಿತ್ತು.

ಕಳೆದ ಆರು ತಿಂಗಳಿನಿಂದ ಮಹೀಂದ್ರ ಕಂಪನಿಯು ವೇಗವಾಗಿ ಪ್ರಗತಿ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣ XUV 500 ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್. ಪ್ರಸಕ್ತ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಟಾಟಾ ಮೋಟರ್ಸ್ ಕಂಪನಿಯನ್ನು ಮಹೀಂದ್ರ ಹಿಂದಿಕ್ಕಿದೆ.

Mahidra Overtakes Tata Motors To Take Third Spot

ಮಹೀಂದ್ರ ಕಂಪನಿಯು ದೇಶದ ಅಗ್ರ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಕಂಪನಿಯಾಗಿದೆ. ಇತ್ತೀಚೆಗೆ ಎಸ್ ಯುವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಮಹೀಂದ್ರ ಪ್ರಗತಿ ಕಾಣಲು ನೆರವಾಗಿದೆ. ದೇಶದಲ್ಲಿ ಮಹೀಂದ್ರ ಬೊಲೆರೊ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸ್ಕಾರ್ಪಿಯೊ ಎರಡನೇ ಸ್ಥಾನದಲ್ಲಿದೆ. ಎಂಪಿವಿ ಸೆಗ್ಮೆಂಟಿನಲ್ಲಿ ಕ್ಷೈಲೊ ಅತ್ಯುತ್ತಮವಾಗಿ ಮಾರಾಟ ಕಾಣುತ್ತಿದೆ.

ಇದೇ ಸಮಯದಲ್ಲಿ ಟಾಟಾ ಮೋಟರ್ಸ್ ಮಾರಾಟವೂ ಇಳಿಮುಖ ಕಾಣುತ್ತಿದೆ. ಟಾಟಾ ನ್ಯಾನೊ ಮಾರಾಟ ಆಶಾದಾಯಕವಾಗಿಲ್ಲ. ಇಂಡಿಕಾ ಕಾರು ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಮಾತ್ರ ಹೆಚ್ಚು ಜನಪ್ರಿಯವಾಗುತ್ತಿದೆ. ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಇಂಡಿಕಾ ವಿಫಲವಾಗಿದೆ. ಇವೆಲ್ಲ ಟಾಟಾ ಮಾರಾಟ ಪ್ರಗತಿ ಕಾಣಲು ಹಿನ್ನಡೆಯಾಗಿದೆ.

ಇದರಿಂದ ಟಾಟಾ ಮೋಟರ್ಸ್ ಮೂರನೇ ಸ್ಥಾನಕ್ಕೆ ಮಹೀಂದ್ರ ಲಗ್ಗೆಯಿಟ್ಟಿದೆ. ಕಂಪನಿಯು ಹ್ಯುಂಡೈಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನ ಯಾವಾಗ ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from DriveSpark

Article Published On: Wednesday, July 18, 2012, 15:20 [IST]
English summary
Tata Motors which had long held the third spot in the top Indian carmakers' list has lost that position to its Indian Counterpart Mahindra and Mahindra. Tata Motors which was first dropped to third spot by Hyundai a few years ago was going steady in its position until Mahindra saw a huge surge in the past six months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+