ಮಹೀಂದ್ರ ಎಕ್ಸ್‌ಯುವಿ500 ಮಾಸಿಕ ಉತ್ಪಾದನೆ ಹೆಚ್ಚಳ
ಕಂಪನಿಯು ಜೂನ್ 8ರಿಂದ ಎಕ್ಸ್‌ಯುವಿ500 ಬುಕ್ಕಿಂಗ್ ಪುನಾರಂಭಿಸಿತ್ತು. ಈ ಬುಕ್ಕಿಂಗ್ ಪ್ರಕ್ರಿಯೆಯನ್ನು ಕಂಪನಿ ಯಾವಾಗ ಸ್ಥಗಿತಗೊಳಿಸಲಿದೆ ಎಂದು ಹೇಳಲಾಗುವುದಿಲ್ಲ. ಹಿಂದೊಮ್ಮೆ ಗ್ರಾಹಕರ ಮಿತಿಮೀರಿದ ಬೇಡಿಕೆಯಿಂದಾಗಿ ಲಾಟರಿ ಆಯ್ಕೆ ಮೂಲಕ ಗ್ರಾಹಕರನ್ನು ಆಯ್ಕೆ ಮಾಡಲಾಗಿತ್ತು.
ಮಹೀಂದ್ರ ಎಕ್ಸ್‌ಯುವಿ500 ಉತ್ಪಾದನಾ ಸಾಮರ್ಥ್ಯ ಪ್ರತಿತಿಂಗಳಿಗೆ ಸುಮಾರು 3,500 ಯೂನಿಟ್ ಆಗಿದೆ. ಆದರೆ ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಪ್ರತಿತಿಂಗಳಿಗೆ 5 ಸಾವಿರ ಯುನಿಟಿಗೆ ಹೆಚ್ಚಿಸಲು ನಿರ್ಧರಿಸಿದೆ. ಕಂಪನಿಯು ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಉತ್ಪಾದನೆ ಹೆಚ್ಚಿಸಲಿದೆ.
ಕಂಪನಿಯು ಈ ಹಿಂದೆಯೇ ಉತ್ಪಾದನೆ ಹೆಚ್ಚಳ ನಿರ್ಧಾರ ಪ್ಟಕಟಿಸಿತ್ತು. ಮೇ ತಿಂಗಳಲ್ಲಿ ಮಹೀಂದ್ರ ಕಂಪನಿಯು 500ರಷ್ಟು ಹೆಚ್ಚು ಎಕ್ಸ್ ಯುವಿ ಉತ್ಪಾದಿಸಿತ್ತು. "ಈಗ ತಿಂಗಳಿಗೆ 4 ಸಾವಿರಷ್ಟು XUV500 ಉತ್ಪಾದಿಸುತ್ತಿದ್ದೇವೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವೇಳೆಗೆ ಇದನ್ನು 5 ಸಾವಿರ ಯುನಿಟಿಗೆ ತಲುಪಿಸಲು ಯೋಜಿಸಿದ್ದೇವೆ" ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್ ಶಾ ಹೇಳಿದ್ದಾರೆ.
ಕಂಪನಿಯು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ XUV 500 ಹೊರತಂದ ಸಮಯದಲ್ಲಿ ಕೇವಲ ಹತ್ತು ದಿನದಲ್ಲಿ 8 ಸಾವಿರ ಜನರು ಬುಕ್ಕಿಂಗ್ ಮಾಡಿದ್ದರು. ಕಂಪನಿಯು ನಾಲ್ಕು ತಿಂಗಳ ನಂತರ ಮತ್ತೊಮ್ಮೆ ಬುಕ್ಕಿಂಗ್ ಆರಂಭಿಸಿತ್ತು. ಹತ್ತು ದಿನದಲ್ಲಿ ಕಂಪನಿಯ ನಿರೀಕ್ಷೆಯನ್ನೂ ಮೀರಿ 25 ಸಾವಿರ ಜನರು ಎಕ್ಸ್ ಯುವಿಗಾಗಿ ಅರ್ಜಿ ಸಲ್ಲಿಸಿದ್ದರು. ಕಂಪನಿಯು ಲಾಟರಿ ಡ್ರಾ ಮೂಲಕ 7 ಸಾವಿರ ಜನರಿಗೆ ಮಹೀಂದ್ರ ಎಕ್ಸ್ ಯುವಿ ಬುಕ್ಕಿಂಗ್ ಮಾಡುವ ಅವಕಾಶ ಒದಗಿಸಿತ್ತು.


Click it and Unblock the Notifications









