ಮಹೀಂದ್ರ ಕ್ವಾಂಟೊಗೆ ಸಕತ್ ಡಿಮ್ಯಾಂಡಪ್ಪೊ ಡಿಮ್ಯಾಂಡು!

By Nagaraja

ದೇಶದ ಮುಂಚೂಣಿಯ ಎಸ್‌ಯುವಿ ಕಾರು ತಯಾರಕ ಸಂಸ್ಥೆಯಾದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನೂತನ ಅವತರಣಿಕೆಯಾದ 'ಮಿನಿ ಕ್ಲೈಲೊ' ಆವೃತ್ತಿಗೆ ದೇಶದಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ಈ ಬಗ್ಗೆ ಇತ್ತೀಚೆಗಷ್ಟೇ ಡ್ರೈವ್ ಸ್ಪಾರ್ಕ್ ತಂಡವು ಟೆಸ್ಟ್ ಡ್ರೈವ್ ಲೇಖನವನ್ನು ವರದಿ ಮಾಡಿತ್ತು. ನೀವು ಮಿಸ್ ಮಾಡಿದ್ರಾ..? ಇಲ್ಲಿದೆ ನೋಡಿ...)

ಮಹೀಂದ್ರ ಕ್ವಾಂಟೊ ಎಸ್‌ಯುವಿ ಸುಮೋ ಲಾಂಚ್ ಆದ ಎರಡು ತಿಂಗಳೊಳಗೆ ಐದಂಕಿ ಅಂದರೆ 10,000 ಬುಕ್ಕಿಂಗ್ ನಂಬರುಗಳನ್ನು ದಾಟಿದೆ ಎಂದು ಕಂಪನಿ ಹೆಮ್ಮೆಯಿಂದ ತಿಳಿಸಿದೆ. ಸರಿ ಸುಮಾರು ಎರಡು ತಿಂಗಳುಗಳ ಹಿಂದೆ ಸೆಪ್ಟೆಂಬರ್ 21ರಂದು ಕ್ವಾಂಟೊ ಬುಕ್ಕಿಂಗ್ ಪ್ರಕ್ರಿಯೆ ದೇಶದಾದ್ಯಂತ ಆರಂಭಗೊಂಡಿತ್ತು.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಗ್ರಾಹಕರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ದೊರಕಿರುವುದರಿಂದ ಅತೀವ ಸಂತಸ ವ್ಯಕ್ತಪಡಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಆಯೋಮೋಟಿವ್ ಡಿವಿಷನ್ ಕಾರ್ಯನಿರ್ವಾಹಕ ಮುಖ್ಯಸ್ಥ ಪ್ರವೀಣ್ ಷಾ, ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕ್ವಾಂಟೊ ಹೊಸ ಬಿರುಗಾಳಿಯೆಬ್ಬಿಸಲಿದೆ ಎಂದಿದ್ದಾರೆ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಡಿಜಿಟಲ್ ಡ್ರೈವ್ ಅಸಿಸ್ಟ್ ಸಿಸ್ಟಂ, ಮೈಕ್ರೋ ಹೈಬ್ರಿಡ್ ಸ್ಟಾರ್ಟ್ ಸ್ಟಾಪ್ ಸಿಸ್ಟಂ, 1.5 ಲೀಟರ್ 100 ಬಿಎಚ್‌ಪಿ ಎಂ ಸಿಆರ್ 100 ಎಂಜಿನ್ ಜತೆ ಟ್ವಿನ್ ಟರ್ಬೊಚಾರ್ಜರ್ಸ್, ಇಂಟೆಲಿಪಾರ್ಕ್ ರಿವರ್ಸ್ ಅಸಿಸ್ಟ್, 2 ಡಿಐಎನ್ ಮ್ಯೂಸಿಕ್ ಸಿಸ್ಟಂ ಜತೆ ಸಿಡಿ, ಎಂಪಿ3, ಯುಎಸ್‌ಬಿ ಆಂಡ್ ಆಕ್ಸ್ ಇನ್ ಸೇರಿದಂತೆ ಇತರ ಹಲವು ಸೌಲಭ್ಯಗಳಿವೆ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಕ್ವಾಂಟೊದಲ್ಲಿ ಡ್ಯುಯೆಲ್ ಏರ್ ಬ್ಯಾಗ್ಸ್, ಎಬಿಎಸ್ ಒಳಗೊಂಡ ಎಬಿಡಿ, ಎಂಜಿನ್ ಇಮ್ಮೊಬಿಲೈಜರ್, ಫಾಗ್ ಲ್ಯಾಂಪ್‌ಗಳು, ಹೈ ಸ್ಪೀಡ್ ವಾರ್ನೀಂಗ್ ಸಿಸ್ಟಂ ಇದ್ದು, ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಕ್ವಾಂಟೊ ನಾಲ್ಕು ಭಿನ್ನ ವರ್ಗಗಳಲ್ಲಿ ಹಾಗೂ ಆರು ವರ್ಣಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ Fiery Black, Mist Silver, Toreador Red, Java Brown, Diamond White and Rocky Beige.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಕ್ವಾಂಟೊ ಸುಮೋ ವರ್ಗದಲ್ಲೇ ಅತ್ಯುತ್ತಮ ವಾಹನವಾಗಿದ್ದು ಆಕರ್ಷಕ ಬಾಹ್ಯ ಮತ್ತು ಒಳಾಂಗಣ ವಿನ್ಯಾಸಗಳನ್ನು ಒಳಗೊಂಡಿದೆ. ಅಲಾಯ್ ವೀಲ್‌ಗಳು, ಆಕರ್ಷಕ ಹಿಂದಿನ ಸ್ಟೆಪ್ನಿ, ನವೀಣ್ ಮೇಲ್ ಕವಚ ನಿಜಕ್ಕೂ ನೋಡುಗರನ್ನು ಸೆಳೆಯುತ್ತಿದೆ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಮಹೀಂದ್ರದಿಂದ ಬಿಡುಗಡೆಯಾಗಿರುವ ಮೊದಲ ಕಾಂಪ್ಯಾಕ್ಟ್ ಎಸ್‌ಯುವಿ ಕ್ವಾಂಟೊ ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ. ವಾರಾಂತ್ಯಗಳಲ್ಲಿ ಪಿಕ್‌ನಿಕ್‌ಗೆ ತೆರಳುವವರಿಗೆ ಈ ಕಾರು ಹೇಳಿ ಮಾಡಿಸಿದಂತಿದೆ.

More from DriveSpark

Article Published On: Tuesday, November 13, 2012, 12:49 [IST]
English summary
Mahindra has announced that it has received over 10,000 bookings from customers for its newly launched compact and versatile SUV Quanto within 2 months of launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+