ಕ್ವಾಂಟೊ ಕೊಳ್ತೀರಾ; ಟೆಸ್ಟ್ ಡ್ರೈವ್ ರಿಪೋರ್ಟ್ ನೋಡಿ

ಮಹೀಂದ್ರ ಕ್ವಾಂಟೊ ಖರೀದಿಸಲು ಇಚ್ಛಿಸಿರುವವರಿಗೊಂದು ಮಹತ್ವದ ಮಾಹಿತಿ ಇಲ್ಲಿದೆ ನೋಡಿ. ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ಡ್ರೈವ್ ಸ್ಪಾರ್ಕ್ ತಂಡವು 'ಮಿನಿ ಕ್ಸೈಲೋ' ಎಂದೇ ಖ್ಯಾತಿ ಪಡೆದಿರುವ ಮಹೀಂದ್ರ ಕಂಪನಿಯ ನೂತನ ಟಾಪ್ ವೆರಿಯಂಟ್ ಎಸ್‌ಯುವಿ ಕ್ವಾಂಟೊ ಟೆಸ್ಟ್ ಡ್ರೈವ್ ನಡೆಸಿತ್ತು.

ಈ ಹಿಂದೆಯೇ ಕ್ವಾಂಟೊ ಕಾರಿನ ಬಗ್ಗೆ ವಿಸೃತ ಫೋಟೊ ಫೀಚರ್ ಸ್ಟೋರಿಯಲ್ಲಿ ಮಾಹಿತಿ ನೀಡಿದ್ದೆವು. (ಇದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಇದೀಗ ಮಹೀಂದ್ರ ಕ್ವಾಂಟೊ ಟೆಸ್ಟ್ ಡ್ರೈವ್ ಅನುಭವದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಟಾಪ್ ವೆರಿಯಂಟ್ ಕ್ವಾಂಟೊ

ಟಾಪ್ ವೆರಿಯಂಟ್ ಕ್ವಾಂಟೊ

ಸ್ಫೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಟಾಪ್ ವೆರಿಯಂಟ್ ಕಾರು ಆಗಿರುವ ಮಹೀಂದ್ರ ಕ್ವಾಂಟೊ ಭಾರತೀಯ ರಸ್ತೆಗಳ ಸವಾರಿಗೆ ಹೇಳಿ ಮಾಡಿಸಿದಂತಹ ಕಾರು ಆಗಿದೆ. ನಗರ ಪ್ರದೇಶ ಸೇರಿದಂತೆ ರಫ್ ರಸ್ತೆಯಲ್ಲೂ ಅತ್ಯುತ್ತಮ ಡ್ರೈವ್ ನೀಡಲಿದೆ.

ಸ್ಪೀಡ್ ಸೆನ್ಸಿಂಗ್

ಸ್ಪೀಡ್ ಸೆನ್ಸಿಂಗ್

ಇದು ಟಾಪ್ ವೆರಿಯಂಟ್ ಮಹೀಂದ್ರ ಕ್ವಾಂಟೊದಲ್ಲಿರುವ ಅತ್ಯುತ್ತಮ ಫೀಚರ್ ಆಗಿದ್ದು 30 ಕಿಲೋ ಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಕಾರು ಚಲಾಯಿಸಿದ್ದಲ್ಲಿ ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಸಿಸ್ಟಂನಿಂದ ಆಟೋಮ್ಯಾಟಿಕ್ ಆಗಿ ಕಾರು ಲಾಕ್ ಆಗುತ್ತೆ.

ಕ್ವಾಂಟೊ ರನ್ನಿಂಗ್ ಟೈಮ್

ಕ್ವಾಂಟೊ ರನ್ನಿಂಗ್ ಟೈಮ್

ಮಹೀಂದ್ರ ಕ್ವಾಂಟೊ ರನ್ನಿಂಗ್ ಟೈಮ್‌ನಲ್ಲಿ ಕಾರಿನೊಳಗಿನ ಕ್ಯಾಬಿನ್ ಶಬ್ದ ಸ್ವಲ್ವ ಜಾಸ್ತಿಯಾಗಿರುತ್ತದೆ. ಇದು ಪಯಣಿಕರಿಗೆ ಕಿರಿಕಿರಿಯಾಗಿ ಅನ್ನಿಸಬಹುದು.

ರಿಯರ್ ವೈಪರ್

ರಿಯರ್ ವೈಪರ್

ಕಾರಿನ ಹೆಸರಲ್ಲೇ ಸೂಚಿಸಿರುವಂತೆ ಟಾಪ್ ವೆರಿಯಂಟ್ ಮಿನಿ ಕ್ಸೈಲೋದಲ್ಲಿ ರಿಯರ್ ವೈಪರ್ ಸೌಲಭ್ಯವಿದ್ದು, ವ್ಯತಿರಿಕ್ತ ವಾತಾವರಣ ಪರಿಸ್ಥಿತಿಯಲ್ಲೂ ಇದನ್ನು ಸದುಪಯೋಗಪಡಿಸಬಹುದಾಗಿದೆ.

ಮಹೀಂದ್ರ ಕ್ವಾಂಟೊ ಟೆಸ್ಟ್ ಡ್ರೈವ್

ಮಹೀಂದ್ರ ಕ್ವಾಂಟೊ ಟೆಸ್ಟ್ ಡ್ರೈವ್

ಎಂಜಿನ್- mCR100, ಕಾಮನ್ ರೈಲ್, ಬಿಎಸ್‌ಐವಿ

ಇಂಧನ- ಡೀಸೆಲ್

ಇಂಧನ ಸಾಮರ್ಥ್ಯ (ಸಿಸಿ)- 1493

ಪವರ್ (kw@rpm)- 73.5kw(100BHP)@3750

ಟಾರ್ಕ್ಯೂ (Nm@rpm)- 240Nm@1600-2800rpm

ಟ್ರಾನ್ಸ್‌ಮಿಷನ್- 5 ಸ್ಪೀಡ್, 5MT320, ಇನ್‌ಡೈರೆಕ್ಟ್ ಶಿಫ್ಟ್

ಫ್ರಂಟ್ ಬ್ರೇಕ್- ಡಿಸ್ಕ್

ರಿಯರ್ ಬ್ರೇಕ್- ಡ್ರಮ್

ಫ್ರಂಚ್ ಸಸ್ಪೆಕ್ಷನ್- ಇಂಡಿಪೆಂಡೆಂಟ್ ಡ್ಯೂಬ್ಲ್ ವಿಶ್ ಬೋನ್, ಕೊಲಿ ಸ್ಪ್ರಿಂಗ್ಸ್ ವಿತ್ ಎಂಟಿ ರಾಲ್ ಬಾರ್

ರಿಯರ್ ಸಸ್ಪೆಕ್ಷನ್: ಫೈವ್ ಬಾರ್

ಲಿಂಕ್, ಕಾಯಿಲ್ ಸ್ಪ್ರಿಂಗ್ಸ್

ಸ್ಟೀರಿಂಗ್ ಹೊಂದಾಣಿಕೆ ಆಪ್ಷನ್

ಸ್ಟೀರಿಂಗ್ ಹೊಂದಾಣಿಕೆ ಆಪ್ಷನ್

ಮಹೀಂದ್ರ ಮಿನಿ ಕ್ಸೈಲೋ ಡಿಜಿಟಲ್ ಮತ್ತು ಟಾಗ್ ಮೀಟರ್ ಹೊಂದಿದೆ. ಆದರೆ ಹೆಡ್ ಲೈಟ್ ನಾಬ್ ಉದ್ದವು ಚಿಕ್ಕದಾಗಿರುವುದರಿಂದ ಚಾಲಕರಿಗೆ ಆಪರೇಟ್ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಸ್ಟೀರಿಂಗ್ ಹೊಂದಾಣಿಕೆ ಆಪ್ಷನ್ ಹೆಚ್ಚು ಆನಂದದಾಯಕವಾಗಿದೆ.

ಆಡಿಯೊ ಸಿಸ್ಟಂ

ಆಡಿಯೊ ಸಿಸ್ಟಂ

ಮಹೀಂದ್ರ ಕ್ವಾಂಟೊದಲ್ಲಿ ಟು ಟಿನ್ ಆಡಿಯೋ ಸಿಸ್ಟಂ ಬಳಸಲಾಗಿದೆ. ಇದು ಹೆಚ್ಚಿನ ಫೀಚರ್ ಒದಗಿಸಲು ಕಾರಣವಾಗಿದೆ.

ಪವರ್ ವಿಂಡೋ ಸ್ವಿಚ್

ಪವರ್ ವಿಂಡೋ ಸ್ವಿಚ್

ಪವರ್ ವಿಂಡೋ ಸ್ವಿಚ್ ಪ್ರೆಸ್ ಮಾಡಿದ್ರೆ ಗ್ಲಾಸ್ ಮೇಲೆ ಹೋಗುತ್ತೆ. ಫ್ರಂಟ್ ಸೀಟ್‌ನಲ್ಲಿ ಹೊಂದಾಣಿಕೆಯ ಆರ್ಮ್ ರೆಸ್ಟ್ ಆಪ್ಷನ್ ಸಹ ನೀಡಲಾಗಿದೆ.

ಡೆಡ್ ಪೆಡಲ್ ಆಪ್ಷನ್

ಡೆಡ್ ಪೆಡಲ್ ಆಪ್ಷನ್

ದೂರದ ಪ್ರಯಾಣ ಸಂದರ್ಭದಲ್ಲಿ ಚಾಲಕರಿಗೆ ಸುಲಲಿತವಾಗಿ ಸಂಚರಿಸುವ ನಿಟ್ಟಿನಲ್ಲಿ ಡೆಡ್ ಪೆಡಲ್ ಆಯ್ಕೆಯನ್ನು ನೀಡಲಾಗಿದೆ. ಸ್ಟಾರ್ಟ್ ಸ್ಟಾಪ್ ಸಾಧನ ಕೂಡಾ ಉಪಕಾರಿಯಾಗಿದೆ. ಫ್ಯೂಯಲ್ ಟಾಂಕ್ ಓಪನರ್ ಹಾಗೂ ಹೆಡ್‌ಲೈಟ್ ಫೀಚರ್ ಕೂಡಾ ಆಳವಡಿಸಲಾಗಿದೆ.

ಸ್ಪೀಡ್ ಸೆನ್ಸಾರ್

ಸ್ಪೀಡ್ ಸೆನ್ಸಾರ್

ಕಾರಿನ ವೇಗ ಗಂಟೆಗೆ 100 ಕಿಲೋ ಮೀಟರ್‌ಗಿಂತಲೂ ಹೆಚ್ಚಾದಾಗ ಸ್ಪೀಡ್ ಸೆನ್ಸಾರ್ ಆನ್ ಆಗುತ್ತದೆ. ಅಂದ್ರೆ ವೇಗ 100ರ ಮಿತಿ ಕ್ರಾಸ್ ಮಾಡಿದಾಗ ಭೀಫ್ ಶಬ್ದ ಹೊರಬರುತ್ತದೆ. ಇಂದೊಂದು ಉತ್ತಮ ಫೀಚರ್ ಆದರೂ ರಾತ್ರಿ ಪಯಣದ ಸಂದರ್ಭದಲ್ಲಿ ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವ ಸಾಧ್ಯತೆಯಿದೆ.

ಡೋರ್ ಪ್ಯಾಕೆಟ್

ಡೋರ್ ಪ್ಯಾಕೆಟ್

ಡೋರ್ ಪ್ಯಾಕೆಟ್ ಹಾಗೂ ಸ್ಪೀಕರ್ಸ್ ವ್ಯವಸ್ಥೆ ಕಾರಿನ ಅಂದವನ್ನು ಹೆಚ್ಚಿಸಿದೆ. ಟಾಪ್ ವೆರಿಯಂಟ್ ಕ್ವಾಂಟೊ ಅತಿ ಹೆಚ್ಚು ಫೀಚರ್‌ಗಳನ್ನು ಬಳಸಲಾಗಿದೆ.

ಕ್ವಾಂಟೊ ಗ್ರೌಂಡ್ ಕ್ಲಿಯರನ್ಸ್

ಕ್ವಾಂಟೊ ಗ್ರೌಂಡ್ ಕ್ಲಿಯರನ್ಸ್

ಮಹೀಂದ್ರ ಕ್ವಾಂಟೊ ಗ್ರೌಂಡ್ ಕ್ಲಿಯರನ್ಸ್ ಜಾಸ್ತಿ ಇದ್ದು, ಚಾಲಕ ಯಾವುದೇ ಭಯವಿಲ್ಲದೆ ನಿಶ್ಚಿಂತತೆಯಿಂದ ರಫ್ ರಸ್ತೆಯಲ್ಲೂ ಡ್ರೈವ್ ಮಾಡಬಹುದಾಗಿದೆ.

ರಿಯರ್ ಸೆನ್ಸಾರ್

ರಿಯರ್ ಸೆನ್ಸಾರ್

ಗೇರ್ ಮೈನಸ್ ಸಂದರ್ಭದಲ್ಲಿ ರಿಯರ್ ಸೆನ್ಸಾರ್ ತೋರಿಸುತ್ತದೆ. ಇದರಿಂದ ಅಪಘಾತಗಳನ್ನು ತಡೆಗಟ್ಟಬಹುದು.

ಹೆಡ್ ರೂಂ ಆಂಡ್ ಲೆಗ್ ರೂಂ

ಹೆಡ್ ರೂಂ ಆಂಡ್ ಲೆಗ್ ರೂಂ

ಉತ್ತಮ ಹೆಡ್ ರೂಂ ಹಾಗೂ ಲೆಗ್ ರೂಂ ಒದಗಿಸಲಾಗಿದೆ. ಇಂಟಿಯರ್ ಬಿಡಿ ಭಾಗಗಳನ್ನು ಗುಣಮಟ್ಟದ ಮೆಟಿರಿಯಲ್‌ಗಳಿಂದ ತಯಾರಿಸಲಾಗಿದೆ.

ಸಿಟ್ಟಿಂಗ್ ವ್ಯವಸ್ಥೆ

ಸಿಟ್ಟಿಂಗ್ ವ್ಯವಸ್ಥೆ

ಮಹೀಂದ್ರ ಕ್ವಾಂಟೊ ಫ್ಲೈ ಪ್ಲಸ್ ಟು ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದೆ. ಆದರೆ ಹಿಂದುಗಡೆ ಸೀಟ್ ಬಹಳ ಕಿರಿದಾಗಿರುವುದು ಮೈನಸ್ ಪಾಯಿಂಟ್ ಆಗಿದೆ. ಆದರೆ ಇದನ್ನು ಲಗ್ಗೇಜ್ ಇಡಲು ಬಳಸಬಹುದಾಗಿದೆ.

ಕ್ವಾಂಟೊ ಪಿಕ್ ಅಪ್

ಕ್ವಾಂಟೊ ಪಿಕ್ ಅಪ್

ಮಹೀಂದ್ರ ಕ್ವಾಂಟೊ ಉತ್ತಮ ಎಂಜಿನ್ ಹೊಂದಿದ್ದು, ಪಿಕ್ ಆಪ್ ಸಮಾಧಾನಕರವಾಗಿದೆ. ಆದರೆ ಓವರ್ ಟೆಕ್ ಸಂದರ್ಭದಲ್ಲಿ ಸಡನ್ ಪಿಕ್ ಅಪ್ ಸಿಗುವುದು ಕಷ್ಟಕರವಾಗಿದೆ.

ಎಸಿ ವೆಂಟ್ ಸೌಲಭ್ಯ

ಎಸಿ ವೆಂಟ್ ಸೌಲಭ್ಯ

ರಿಯರ್ ಸೀಟ್ ಪ್ರಯಾಣಿಕನಿಗೆ ಎಸಿ ವೆಂಟ್ ಸೌಲಭ್ಯವಿಲ್ಲದಿರುವುದು ಹಿನ್ನಡೆಯಾಗಿದೆ.

ಕ್ವಾಂಟೊ ಸ್ಮರ್ದಾತ್ಮಕ ದರ

ಕ್ವಾಂಟೊ ಸ್ಮರ್ದಾತ್ಮಕ ದರ

ಅಂದ ಹಾಗೆ ಮಹೀಂದ್ರ ಕ್ವಾಂಟೊ ಸ್ಮರ್ಧಾತ್ಮಕ ದರದಲ್ಲಿ ಲಭಿಸಲಿದ್ದು, ಮೈಲೇಜ್ 11.4 ಲಭಿಸಲಿದೆ.

ಕ್ವಾಂಟೊ ಇತರ ಫೀಚರ್ಸ್

ಕ್ವಾಂಟೊ ಇತರ ಫೀಚರ್ಸ್

ಜಾಕಿ ಕಿಟ್, ಚೈಲ್ಡ್ ಸೇಫ್ಟಿ, ಡೋರ್ ಪ್ಯಾಕೆಟ್ ಸ್ಪೀಕರ್ಸ್, ಕೀ ಹೋಲ್‌ನಲ್ಲಿ ಗ್ಲೊ ಲೈಟ್, 2 ಕಪ್ ಹೋಲ್ಡರ್, ಡೋರ್ ಪ್ಯಾಕೆಟ್ ಹಾಗೂ ವಿಂಡೊ ಸೆಪರೇಟ್ ಸ್ವಿಚ್‌ಗಳಂತಹ ಫೀಚರ್‌ಗಳನ್ನು ಬಳಸಲಾಗಿದೆ.

More from DriveSpark

Article Published On: Thursday, November 8, 2012, 9:55 [IST]
English summary
Team Drivespark test drove the top variant Mahindraq Quanto car recently. Here is our review of the Mahindra Quanto.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+