ಮಹೀಂದ್ರ ಕ್ವಾಂಟೊ 4×4 ಎಸ್‌ಯುವಿ ಟೆಸ್ಟಿಂಗ್ ಟೆಸ್ಟಿಂಗ್
ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಯಶಸ್ಸು ಸಾಧಿಸಿರುವ ಬಳಿಕವೀಗ ಮಹೀಂದ್ರ, ಕ್ವಾಂಟೊ 4x4 ವರ್ಷನ್ ಪರಿಚಯಿಸಲು ಹೊರಟಿದೆ. ಇದರಂತೆ ಮಹೀಂದ್ರ ಕ್ವಾಂಟೊ 4x4 ವರ್ಷನ್ ಟೆಸ್ಟಿಂಗ್ ಪುಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ವಾಂಟೊ ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ವಾಂಟೊಗೆ ಹೋಲಿಸಿದರೆ ನೂತನ ಮಹೀಂದ್ರ ಕ್ವಾಂಟೊ 4x4 ಕಾಂಪಾಕ್ಟ್ ಎಸ್‌ಯುವಿ ದೊಡ್ಡದಾದ 2.2 ಲೀಟರ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಕ್ವಾಂಟೊ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.
ಪುಣೆ ನಗರದಲ್ಲಿ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆಸಿಕ್ಕಿದೆ. ಇದು ಐದು ಸೀಟರ್ ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ. ಎಂಜಿನ್ ಅಪ್‌ಗ್ರೇಡ್ ಆಗಲಿರುವುದರಿಂದ 150 ಕೆ.ಜಿ ಅಧಿಕ ಭಾರವನ್ನು ಹೊಂದಿರಲಿದೆ. ಪ್ರಮುಖವಾಗಿಯೂ ಆಫ್ ರೋಡಿಂಗ್ ಡ್ರೈವಿಂಗ್‌ಗೆ ಹೆಚ್ಚು ಸಹಕಾರಿಯಾಗಲಿದೆ.
ಮುಂದಿನ ದಿನಗಳಲ್ಲಿ ಯುರೋಪ್ ಹಾಗೂ ದಕ್ಷಿಣ ಅಮೆರಿಕಾಗಳಿಗೂ ರಫ್ತು ಮಾಡುವ ಇರಾದೆಯನ್ನು ಮಹೀಂದ್ರ ಹೊಂದಿದೆ.


Click it and Unblock the Notifications









