ಮಹೀಂದ್ರ ಕ್ವಾಂಟೊ ಎಸ್‌ಯುವಿ ರಸ್ತೆಗೆ, ದರ 5.82 ಲಕ್ಷ ರು.

ಮುಂಬೈ, ಸೆ 20: ದೇಶದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರ ಆಂಡ್ ಮಹೀಂದ್ರ ಫ್ಯಾಕ್ಟರಿಯಿಂದ ಬಹುನಿರೀಕ್ಷಿತ ಪುಟ್ಟ ಎಸ್‌ಯುವಿ "ಕ್ವಾಂಟೊ" ರಸ್ತೆಗಿಳಿದಿದೆ. ಇದರ ಆರಂಭಿಕ ದರ 5.82 ಲಕ್ಷ ರುಪಾಯಿ.

ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕ್ವಾಂಟೊ ದೇಶದ ಅತಿಸಣ್ಣ ಎಸ್‌ಯುವಿಯಾಗಿದೆ. ಇದು 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದ್ದು, 100 ಹಾರ್ಸ್ ಪವರ್ ಮತ್ತು 240 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಕ್ವಾಂಟೊ ದರ ಮಾಹಿತಿ(ಎಕ್ಸ್ ಶೋರೂಂ ಮಹಾರಾಷ್ಟ್ರ)
ಕ್ವಾಂಟೊ ಸಿ2: 5.82 ಲಕ್ಷ ರು.
ಕ್ವಾಂಟೊ ಸಿ4: 6.35 ಲಕ್ಷ ರು.
ಕ್ವಾಂಟೊ ಸಿ6: 6.86 ಲಕ್ಷ ರು.
ಕ್ವಾಂಟೊ ಸಿ8: 7.36 ಲಕ್ಷ ರು.

ಕ್ಷೈಲೊ ಎಂಯುವಿಯ ಬಾಡಿ ಆನ್ ಲ್ಯಾಡರ್ ಚಾಸೀಯನ್ನು ನೂತನ ಕ್ವಾಂಟೊ ಕಾರಿಗೆ ಬಳಸಲಾಗಿದೆ. ಜೊತೆಗೆ ಕ್ಷೈಲೊ ಕಾರಿನ ಇಜೆನಿಯೊ ಫ್ಲಾಟ್ ಫಾರ್ಮ್ ನಲ್ಲೇ ನೂತನ ಕ್ವಾಂಟೊ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಲಾಗಿದೆ.

ನಾಲ್ಕು ಮೀಟರುಗಿಂತ ಕಡಿಮೆ ಉದ್ದದ ಕಾರು ಅಥವಾ ಎಸ್‌ಯುವಿಗಳಿಗೆ ಕೇವಲ ಶೇಕಡ 12ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ. ಇದರ ಲಾಭ ಪಡೆಯಲು ಮಹೀಂದ್ರ ಕಂಪನಿಯು ನೂತನ ಎಸ್‌ಯುವಿ ಕ್ವಾಂಟೊ ಉದ್ದವನ್ನು ನಾಲ್ಕು ಮೀಟರಿಗಿಂತ ಕಿರಿದುಗೊಳಿಸಿದೆ.

ಇದರ ಆರಂಭಿಕ ದರ 5.82 ಲಕ್ಷ ರು. ಇರುವುದರಿಂದ ದೇಶದ ಸಣ್ಣಕಾರುಗಳಿಗೆ, ಸೆಡಾನುಗಳಿಗೆ ಇದು ಪೈಪೋಟಿ ನೀಡುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಸ್ವಿಫ್ಟ್, ಫೋರ್ಡ್ ಫಿಗೊ ಮತ್ತು ಹ್ಯುಂಡೈ ಐ20 ಕಾರುಗಳೊಂದಿಗೆ ಈ ಎಸ್‌ಯುವಿ ಪೈಪೋಟಿ ನಡೆಸಲಿದೆ.

ಮಹೀಂದ್ರ ಕ್ವಾಂಟೊ ಎಂ2ಡಿಐ ಮೂರು ಸಿಲಿಂಡರಿನ ಎಂಜಿನ್ ಹೊಂದಿದೆ. ಇದು 1398ಸಿಸಿ ಎಂಜಿನ್ ಆಗಿದೆ. ದೇಶದ ರಸ್ತೆಗೆ ಮಹೀಂದ್ರ ಎಕ್ಸ್‌ಯುವಿ ಆಗಮಿಸಿ ಒಂದು ವರ್ಷದ ತರುವಾಯ ನೂತನ ಕ್ವಾಂಟೊ ಆಗಮಿಸಿದೆ. ಎಕ್ಸ್ ಯುವಿ500ನಂತೆ ನೂತನ ಕಾರು ದೇಶದ ಗ್ರಾಹಕರ ಗಮನ ಸೆಳೆಯುವುದೇ? ಕಾದು ನೋಡಬೇಕಿದೆ.

More from DriveSpark

Article Published On: Thursday, September 20, 2012, 14:12 [IST]
English summary
Mahindra has launched its first compact SUV, the Quanto with a starting price of Rs. Lakhs. The Quanto, which was previously called as the mini Xylo carries forward much of the design elements from the car that it is based on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+