ಬೆಂಗಳೂರಿಗೂ ಬಂತು ಮಹೀಂದ್ರ ಕ್ವಾಂಟೊ, ದರವೆಷ್ಟು?
ಬೆಂಗಳೂರು, ಸೆ 21: ದೇಶದ ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಪುಟ್ಟ ಎಸ್‌ಯುವಿ "ಕ್ವಾಂಟೊ" ರಾಜ್ಯಕ್ಕೆ ಆಗಮಿಸಿದೆ. ಉದ್ಯಾನ ನಗರಿಯ ಗ್ರಾಂಡ್ ಪೆವಿಲಿಯನ್ ಹೋಟೆಲಿನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಪುಟ್ಟ ಎಸ್ ಯುವಿಯನ್ನು ಪರಿಚಯಿಸಲಾಯಿತು.
ಬೆಂಗಳೂರಿನಲ್ಲಿ ನೂತನ ಕ್ವಾಂಟೊ ಎಕ್ಸ್ ಶೋರೂಂ ದರ
* ಕ್ವಾಂಟೊ ಸಿ2: 6.08 ಲಕ್ಷ ರು.
* ಕ್ವಾಂಟೊ ಸಿ4: 6.63 ಲಕ್ಷ ರು.
* ಕ್ವಾಂಟೊ ಸಿ6: 7.16 ಲಕ್ಷ ರು.
* ಕ್ವಾಂಟೊ ಸಿ8: 7.69 ಲಕ್ಷ ರು.
"ಸಣ್ಣಕಾರು, ಎಂಯುವಿ, ಸೆಡಾನ್ ಸೆಗ್ಮೆಂಟಿಗೆ ನೂತನ ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಶಕ್ತಿಶಾಲಿ ಸಣ್ಣ ಎಸ್ ಯುವಿ ಕ್ವಾಂಟೊ ಪೈಪೋಟಿ ನೀಡಲಿದೆ" ಎಂದು ಎಂದು ಮಹೀಂದ್ರ ಆಂಡ್ ಮಹೀಂದ್ರ ಮಾರಾಟ ವಿಭಾಗದ ಉಪಾಧ್ಯಕ್ಷರಾದ ವಿಜಯ್ ನಕ್ರ ಹೇಳಿದ್ದಾರೆ.
"ಎಲ್ಲಾ ಕಾರು ಕಂಪನಿಗಳು ಮಾರಾಟ ಹೆಚ್ಚಿಸಿಕೊಳ್ಳಲು ತೊಂದರೆ ಪಡುತ್ತಿರುವಾಗ, ನಾವು ಪ್ರಯಾಣಿಕ ಕಾರು ಮಾರಾಟದಲ್ಲಿ ಶೇಕಡ 33ರಷ್ಟು ಪ್ರಗತಿ ಕಂಡಿದ್ದೇವೆ. ಇದೇ ಸಮಯದಲ್ಲಿ ದೇಶದ ವಾಹನೋದ್ಯಮದಲ್ಲಿ ಎಸ್ ಯುವಿ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇಕಡ 22ಕ್ಕೆ ತಲುಪಿದೆ" ಎಂದರು.
ಮಹೀಂದ್ರ ಕ್ವಾಂಟೊ ಎಂ2ಡಿಐ ಮೂರು ಸಿಲಿಂಡರಿನ ಎಂಜಿನ್ ಹೊಂದಿದೆ. ಇದು 1398ಸಿಸಿ ಎಂಜಿನ್ ಆಗಿದೆ. ದೇಶದ ರಸ್ತೆಗೆ ಮಹೀಂದ್ರ ಎಕ್ಸ್‌ಯುವಿ ಆಗಮಿಸಿ ಒಂದು ವರ್ಷದ ತರುವಾಯ ನೂತನ ಕ್ವಾಂಟೊ ಆಗಮಿಸಿದೆ. ನಾವು ಕಣ್ಣಾರೆ ಕಂಡ ಹೊಸ ಕ್ವಾಂಟೊ ಕಾರಿನ ವಿಮರ್ಶೆ ಶೀಘ್ರದಲ್ಲಿ ನಿಮ್ಮ ಮುಂದಿರಲಿದೆ.


Click it and Unblock the Notifications









