ಪವನ್ ಗೊಯೆಂಕಾಗೆ ಸಿವಿ ವರ್ಷದ ವ್ಯಕ್ತಿ ಪ್ರಶಸ್ತಿ

ದೇಶದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಸ್ಪೆಷಲಿಸ್ಟ್ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಅಧ್ಯಕ್ಷರಾದ ಡಾ. ಪವನ್ ಗೋಯೆಂಕಾ "2012ರ ಸಿವಿ ವರ್ಷದ ವ್ಯಕ್ತಿ" ಪ್ರಶಸ್ತಿ ಪಡೆದಿದ್ದಾರೆ. ಕಮರ್ಷಿಯಲ್ ವೆಹಿಕಲ್ ಮ್ಯಾಗಜಿನ್(ಸಿವಿ ಮ್ಯಾಗಜಿನ್) ಪ್ರತಿ ವರ್ಷ ಅಪೊಲೊ ಸಿವಿ ಪ್ರಶಸ್ತಿ ನೀಡುತ್ತಿದೆ.

ದೇಶದ ಮತ್ತು ಜಾಗತಿಕ ಮಟ್ಟದಲ್ಲಿ ವಾಹನೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪವನ್ ಗೋಯೆಂಕಾಗೆ ಪ್ರಶಸ್ತಿ ನೀಡಲಾಗಿದೆ. "ಈ ವರ್ಷ ವಾಹನೋದ್ಯಮಕ್ಕೆ ಹೆಚ್ಚು ಕಠಿಣ ಸಮಯವಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲೂ ಮಹೀಂದ್ರ ಕಂಪನಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ" ಎಂದು ಸಿವಿ ಮ್ಯಾಗಜಿನ್ ಸಂಪಾದಕ ಶ್ರೀಧರ್ ಚಾರಿ ಹೇಳಿದ್ದಾರೆ.

"ಸಿವಿ ಮ್ಯಾಗಜಿನ್ ನೀಡಿರುವ ಪ್ರಶಸ್ತಿ ಸಂತೋಷ ತಂದಿದೆ. ನಾನು ಈ ಪ್ರಶಸ್ತಿಯನ್ನು ಮಹೀಂದ್ರ ಕಂಪನಿಗೆ ಅರ್ಪಿಸುತ್ತಿದ್ದೇನೆ. ನನಗೆ ಇಂತಹ ಅತ್ಯುತ್ತಮ ಅವಕಾಶ ನೀಡಿದ ಕಂಪನಿ ಮತ್ತು ಸಹೋದ್ಯೋಗಿಗಳು ಕಂಪನಿಯ ಈ ಪ್ರಗತಿಗೆ ಕಾರಣ" ಎಂದು ಪವನ್ ಗೋಯೆಂಕಾ ಹೇಳಿದ್ದಾರೆ.

ತನ್ನ ಅತ್ಯುತ್ತಮ ಕವರೇಜ್ ಕಾರಣದಿಂದ ಕಮರ್ಷಿಯಲ್ ವೆಹಿಕಲ್(ಸಿವಿ) ಮ್ಯಾಗಜಿನನ್ನು ದೇಶದ ವಾಣಿಜ್ಯ ವಾಹನ ಉದ್ಯಮದ ಧ್ವನಿ ಎಂದು ಹೇಳಲಾಗುತ್ತದೆ. ವಾಣಿಜ್ಯ ವಾಹನ ಬಗೆಗೆ ಬೆಳಕು ಚೆಲ್ಲುವ ದೇಶದ ಅಗ್ರ ಪತ್ರಿಕೆ ಇದಾಗಿದೆ.

More from DriveSpark

Article Published On: Friday, May 4, 2012, 11:14 [IST]
English summary
Dr Pawan Goenka, President of India's leading SUV manufacturer Mahindra & Mahindra was conferred with the ‘CV Man of the Year 2012’ award at the annual Apollo CV Awards 2012. He has been conferred this accolade in recognition of his extensive contribution within the automotive industry in India and globally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+