ಮಿನಿ ಕ್ಷೈಲೊ ಕುರಿತು ತುಟಿ ಕಚ್ಚಿ ಹಿಡಿದುಕೊಂಡ ಮಹೀಂದ್ರ

ಇವೆಲ್ಲ ಸ್ಪೋರ್ಟ್ ಯುಟಿಲಿಟಿ ವೆಹಿಕಲುಗಳು ತನ್ನ ಬೃಹತ್ ಗಾತ್ರ, ಠೀವಿಯಿಂದ ಇಷ್ಟವಾಗುತ್ತದೆ. ಆದರೆ ಈ ಡುಮ್ಮ ಕಾರುಗಳು ಸಿಟಿ ರಸ್ತೆಗೆ ಹೆಚ್ಚು ಸೂಕ್ತವಾಗಿಲ್ಲ. ನಗರ ರಸ್ತೆಗಳಲ್ಲಿ ಸಾಗಲು ಪೂರಕವಾಗಿರುವ ಮಿನಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕುರಿತು ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ.
ಮಿನಿ ಕ್ಷೈಲೊ ಕುರಿತು ಈಗಾಗಲೇ ಪತ್ತೆದಾರಿ(ಸ್ಪೈ) ಚಿತ್ರಗಳು ಬಹಿರಂಗವಾಗಿವೆ. ಪ್ರಸಕ್ತ ವರ್ಷವೇ ಈ ಕಾರು ರಸ್ತೆಗಿಳಿಯುವ ನಿರೀಕ್ಷೆಯಿದೆ. ಈ ಕಾರು ಕೂಡ ನಾಲ್ಕು ಮೀಟರ್ ಗಿಂತ ಕಡಿಮೆ ಉದ್ದವಿರುವ ಕೆಟಗರಿಯಲ್ಲಿ ಬರುತ್ತಂತೆ. ಹಳೆಯ ಕ್ಷೈಲೊ ಆವೃತ್ತಿಗಿಂತ ಇದರ ದರ ಕಡಿಮೆಯಿರಲಿದೆ. ಈ ಕಾರಿನ ಕುರಿತು ಮಾಹಿತಿ ಬಹಿರಂಗ ಪಡಿಸಲು ಕಂಪನಿಯು ಕಂಜೂಸ್ ಮಾಡುತ್ತಿದೆ.
ಈಗ ಕಂಪನಿಯು ನೂತನ XUV 500 ಕಾರಿನ ಕುರಿತು ಹೆಚ್ಚಿನ ಗಮನ ನೀಡುತ್ತಿದೆ. ಇದಕ್ಕೆ ಅತ್ಯಧಿಕ ಬೇಡಿಕೆ ಇರುವುದರಿಂದ ಹೊಸ ಕಾರು ರಸ್ತೆಗಿಳಿಸಿ ಉತ್ಪಾದನೆ ಕೊರತೆ ಅನುಭವಿಸುವುದು ಬೇಡವೆಂಬ ಯೋಚನೆಯೂ ಕಂಪನಿಗಿರಬಹುದು. ನೂತನ ಕ್ಷೈಲೊ ಕಾರನ್ನು ಮಹೀಂದ್ರ ಕಂಪನಿಯು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡುವ ನಿರೀಕ್ಷೆಯಿದೆ.
ಲುಕ್, ಕಾರ್ಯಕ್ಷಮತೆ ಮತ್ತು ಸ್ಥಳಾವಕಾಶದ ಕಾರಣದಿಂದ ಕ್ಷೈಲೊ ಕಾರು ಹೆಚ್ಚು ಇಷ್ಟವಾಗುತ್ತದೆ. ಆದರೆ ಇನ್ನು ಈ ಕಾರು ಕೇವಲ ದೊಡ್ಡ ಕುಟುಂಬಗಳಿಗೆ ಮಾತ್ರವಲ್ಲ. ಸಾಮಾನ್ಯ ಕುಟುಂಬವೂ ಖರೀದಿಸಬಹುದು. ಯಾವುದಕ್ಕೂ ನೂತನ ಮಿನಿ ಕ್ಷೈಲೊ ರಸ್ತೆಗಿಳಿಯುವರೆಗೆ ಕಾಯಬೇಕು ಅಷ್ಟೇ!


Click it and Unblock the Notifications








