ಯೆಸ್, SUV ಸೆಗ್ಮೆಂಟಿಗೆ ಮಾರುತಿ ಸುಜುಕಿ ಎಂಟ್ರಿ!

ಮಾರುತಿ ಸುಜುಕಿ ಅಂದ್ರೆ ಸಣ್ಣಕಾರು ಸ್ಪೆಷಲಿಸ್ಟ್ ಆಗಿ ಫೇಮಸ್ಸು. ಅಂತಿಮವಾಗಿ ಮಾರುತಿ ಕಂಪನಿ ಕೂಡ ತನ್ನ ಬಾಹು ವಿಸ್ತಾರ ಮಾಡಲು ಮುಂದಾಗಿದೆ. ಕಂಪನಿಯು ಎರ್ಟಿಗಾ ಮಲ್ಟಿ ಪರ್ಪೊಸ್ ವೆಹಿಕಲ್ ಹೊರತರಲು ನಿರ್ಧರಿಸಿರುವ ಕಥೆ ನಿಮಗೆ ಗೊತ್ತಲ್ವ? ಇದೀಗ ಕಂಪನಿಯು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮಾರುಕಟ್ಟೆಗೂ ನುಗ್ಗಲು ನಿರ್ಧರಿಸಿದೆ.
ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಎಕ್ಸ್ ಎ ಆಲ್ಫಾ ಎಂಬ ನೂತನ ಎಸ್ ಯುವಿಯನ್ನು ಅನಾವರಣ ಮಾಡಿತ್ತು. ಈ ಕಾರು ರಸ್ತೆಗಿಳಿಯಲು ಒಂದೆರಡು ವರ್ಷ ಕಾಯುವುದು ಅನಿವಾರ್ಯ. ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಈ ಸೆಗ್ಮೆಂಟಿಗೆ ಪ್ರವೇಶಿಸಲು ನಿರ್ಧರಿಸಿರುವುದಾಗಿ ಕಂಪನಿ ಹೇಳಿದೆ.
ನೂತನ ಮಾರುತಿ ಎಕ್ಸ್ ಎ ಆಲ್ಪಾ ಸ್ಪೋರ್ಟ್ ಕಾರು ಕಾರ್ಯಕ್ಷಮತೆಯಲ್ಲಿ ಸೆಡಾನ್ ನಂತೆ ಕಾರ್ಯನಿರ್ವಹಿಸಲಿದೆ. ಸ್ಥಳಾವಕಾಶ ಮತ್ತು ಆಫ್ ರೋಡ್ ಸವಾರಿಯಲ್ಲಿ ಎಸ್ ಯುವಿಯಂತೆ ಇರಲಿದೆ. ಇಂಧನ ದಕ್ಷತೆಯ ವಿಷಯದಲ್ಲಿ ಇದು ಹೈಬ್ರಿಡ್ ಕಾರಿನಂತೆ ಇರಲಿದೆ. ಇದರ ವಿಶೇಷ ವಿನ್ಯಾಸ ಮತ್ತು ಆಕರ್ಷಕ ಇಂಟಿರಿಯರ್ ಸೂಪರ್. ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ದರ ಮಾಹಿತಿಯನ್ನು ಇನ್ನೂ ಕಂಪನಿ ಪ್ರಕಟಿಸಿಲ್ಲ.


Click it and Unblock the Notifications