ಎರಡು ಮಿಲಿಯನ್ ಜನ ನೋಡಿದ ಯುಟ್ಯೂಬ್ ವಿಡಿಯೋ

ಯುಟ್ಯೂಬ್ ನಲ್ಲಿ ಲಕ್ಷ ಲಕ್ಷ ಜನರು ವಿಡಿಯೋ ವೀಕ್ಷಿಸುತ್ತಾರೆ. ಕೋಟಿ ಕೋಟಿ ಜನರು ನೋಡುವ ವಿಡಿಯೋಗಳೂ ಇವೆ. ವೈ ದಿಸ್ ಕೊಲವರಿ ಮುಂತಾದ ಹಾಡುಗಳು ಯುಟ್ಯೂಬ್ ನಲ್ಲಿ ಹೊಸ ದಾಖಲೆ ಬರೆಯುತ್ತಿವೆ. ಸಿನಿಮಾ, ಹಾಸ್ಯ ಅಥವಾ ವಿಶೇಷ ಘಟನೆಗೆಗಳಿಗೆ ಸಂಬಂಧಿಸಿದ ವಿಡಿಯೋಗಳು ಲೆಕ್ಕವಿಡಲು ಕಷ್ಟವಾಗುವಷ್ಟು ಹಿಟ್ಸ್ ಪಡೆಯುತ್ತವೆ.

ಆದರೆ ವಾಹನ ಕಂಪನಿಯೊಂದರ ಜಾಹೀರಾತನ್ನು ಇಷ್ಟೊಂದು ಪ್ರಮಾಣದಲ್ಲಿ ನೋಡುತ್ತಾರೆಂದು ಬಹುಶಃ ಕಂಪನಿಯೇ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಮಹೀಂದ್ರ ಇತ್ತೀಚೆಗೆ ಪರಿಚಯಿಸಿದ ಚಿರತೆ ಎಸ್ ಯುವಿ ಅರ್ಥಾತ್ Mahindra XUV5oo ಜಾಹೀರಾತನ್ನು ಯುಟ್ಯೂಬ್ ನಲ್ಲಿ 20 ಲಕ್ಷ ಜನರು ನೋಡಿದ್ದು, ಹೊಸ ಇತಿಹಾಸ ಬರೆದಿದೆ.

ಸಿನಿಮಾ ಕುರಿತಾದ ವಿಡಿಯೋಗಳಾದರೆ ಹೆಚ್ಚಿನ ಜನ ನೋಡುತ್ತಾರೆ. ಆದರೆ ಮಹೀಂದ್ರ ಎಕ್ಸ್ ಯುವಿ5ಒಒ ವಾಹನದ ಜಾಹೀರಾತನ್ನು ಇಷ್ಟೊಂದು ಜನರು ನೋಡಿದ್ದು ಅಚ್ಚರಿ ತಂದಿದೆ ಎಂದು ಯುಟ್ಯೂಬ್ ವಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಕ್ಸ್ ಯುವಿ ಮಾರಾಟ ಹೆಚ್ಚಲು ಕಂಪನಿಯು ಆನ್ ಲೈನನ್ನೇ ಪ್ರಮುಖ ಮಾಧ್ಯಮವಾಗಿ ಬಳಸಿತ್ತು. ಈ ಎಕ್ಸ್ ಯುವಿ ಬಿಡುಗಡೆಗೆ ಮುನ್ನವೇ ವೆಬ್ ಸೈಟ್ ಮತ್ತು ಫೇಸ್ ಬುಕ್ ಪುಟಗಳ ಮೂಲಕ ಹೊಸ ಹವಾ ಸೃಷ್ಟಿಸಿತ್ತು. ಈಗಾಗಲೇ ಎಕ್ಸ್ ಯುವಿ5ಒಒ ಫೇಸ್ ಬುಕ್ ಪುಟವನ್ನು 3 ಲಕ್ಷ ಜನರು ಮೆಚ್ಚಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)

ಮಹೀಂದ್ರ ಎಕ್ಸ್ ಯುವಿ5ಒಒ ಬಗ್ಗೆ ಓದಿರಿ

More from DriveSpark

Article Published On: Wednesday, February 29, 2012, 15:55 [IST]
English summary
Mahindra XUV 500 advertisement hit on You Tube. Mahinrda new commercial for the "cheetah inspired" Mahindra XUV ad get 2 million visits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+