ಹತ್ತು ದಿನದಲ್ಲಿ 25 ಸಾವಿರ ಮಹೀಂದ್ರ ಎಕ್ಸ್ ಯುವಿ ಬುಕ್ಕಿಂಗ್

ಒಬ್ಬರೊಬ್ಬರೇ ಹಲವು ಬುಕ್ಕಿಂಗ್ ಮಾಡುವುದನ್ನು ತಪ್ಪಿಸಲು ಕಂಪನಿಯು ಬುಕ್ಕಿಂಗ್ ಶುಲ್ಕ 80 ಸಾವಿರ ರು. ವಿಧಿಸಿತ್ತು. ಆದರೆ ಇಷ್ಟು ಶುಲ್ಕವಿದ್ದರೂ 25 ಸಾವಿರಕ್ಕೂ ಹೆಚ್ಚು ಜನರು ಬುಕ್ಕಿಂಗ್ ಮಾಡಿದ್ದು ವಿಶೇಷ. ಕಳೆದ ವರ್ಷ ಈ ಕಾರು ರಸ್ತೆಗಿಳಿದಾಗಲೇ ಸಾವಿರಾರು ಜನರು ಖರೀದಿಗೆ ಮುಗಿಬಿದ್ದಿದ್ದರು.
ಕಂಪನಿಯು ಜನವರಿ 26ರಂದು ಆರಂಭಿಸಿದ ಎರಡನೇ ಸರತಿಯ ಬುಕ್ಕಿಂಗ್ ಫೆಬ್ರವರಿ 3ರಂದು ಕೊನೆಗೊಂಡಿತ್ತು. ಕಂಪ್ಯೂಟರಿಕೃತ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ದ ಗ್ರಾಹಕರಿಗೆ ಶೀಘ್ರದಲ್ಲಿ ಕಾರು ವಿತರಣೆ ಮಾಡಲಿದೆ.
ನಿರೀಕ್ಷೆಗೂ ಮೀರಿ ಜನರು ಮಹೀಂದ್ರ ಎಕ್ಸ್ ಯುವಿ ಬುಕ್ಕಿಂಗ್ ಮಾಡಿದ್ದಾರೆ ಎಂದು ಕಂಪನಿ ಸಂತಸ ವ್ಯಕ್ತಪಡಿಸಿದೆ. ಡ್ರಾ ಪ್ರಕ್ರಿಯೆಯ ಮೂಲಕ ಕೆಲವು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಮುಂದಿನ ಮೂರು ತಿಂಗಳೊಳಗೆ ಎಕ್ಸ್ ಯುವಿ 5ಒಒ ಕಾರನ್ನು ವಿತರಣೆ ಮಾಡುವುದಾಗಿ ಕಂಪನಿ ಹೇಳಿದೆ. ಉಳಿದವರು ಕೊಂಚ ಹೆಚ್ಚು ದಿನ ಕಾಯುವುದು ಅನಿವಾರ್ಯ.
ಕಂಪನಿಯು ವೇಟಿಂಗ್ ಪಿರೆಯಿಡನ್ನು ನಾಲ್ಕು ತಿಂಗಳಿಗಿಂತ ಹೆಚ್ಚಿಸುವುದಿಲ್ಲವೆಂದು ಈ ಹಿಂದೆ ತಿಳಿಸಿತ್ತು. ಆದರೆ ಈಗಿನ ಬುಕ್ಕಿಂಗ್ ಸಂಖ್ಯೆ ನೋಡಿದರೆ ನಾಲ್ಕು ತಿಂಗಳಲ್ಲಿ ಈ ಕಾರು ನೀಡಲು ಕಂಪನಿಗೆ ಕಷ್ಟವಾದೀತು.
ಮಹೀಂದ್ರ XUV 500 ಬಗ್ಗೆ ಇನ್ನಷ್ಟು ಓದಿರಿ.


Click it and Unblock the Notifications








