ಎಕ್ಸ್‌ಯುವಿ500: 2 ದಿನದಲ್ಲಿ 7 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್

ಜೂನ್ 8ರಿಂದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಎಕ್ಸ್‌ಯುವಿ 500 ಬುಕ್ಕಿಂಗ್ ಪುನಾರಂಭಿಸಿತ್ತು. ಬುಕ್ಕಿಂಗ್ ಆರಂಭಿಸಿದ ಎರಡೇ ದಿನಗಳಲ್ಲಿ ಸುಮಾರು 7,200 ಗ್ರಾಹಕರು ಎಕ್ಸ್‌ಯುವಿ500 ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಗ್ರಾಹಕರ ಭಾರಿ ಪ್ರತಿಕ್ರಿಯೆಯಿಂದಾಗಿ ಮತ್ತೆ ಕಂಪನಿಯು ಬುಕ್ಕಿಂಗ್ ಸ್ಥಗಿತಗೊಳಿಸುವುದೇ ಕಾದುನೋಡಬೇಕಿದೆ.

"ನಮ್ಮ ಗ್ರಾಹಕರಿಗೆ ಮತ್ತೊಮ್ಮೆ ಧನ್ಯವಾದ ಹೇಳಬೇಕು. ಗ್ರಾಹಕರು ನಮ್ಮ ನಿರೀಕ್ಷೆಯನ್ನೂ ಮೀರಿ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಆಟೋಮೊಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಶಾ ಹೇಳಿದ್ದಾರೆ.

ಮಹೀಂದ್ರ ಕಂಪನಿಯ ಎಕ್ಸ್‌ಯುವಿ500 ದರ ಕಡಿಮೆಯಾಗಿರುವುದೇ ಇದರ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಸುಮಾರು 11.38 ಲಕ್ಷ ರುಪಾಯಿ ಆರಂಭಿಕ ದರಕ್ಕೆ ಇಷ್ಟೊಂದು ಆಕರ್ಷಕವಾದ ಬೇರೆ ಯಾವುದೇ ಎಸ್ ಯುವಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದರ ಅತ್ಯುತ್ತಮ ವಿನ್ಯಾಸ, ತಂತ್ರಜ್ಞಾನ, ಸುರಕ್ಷತೆಯ ಫೀಚರುಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ.

ವರ್ಷದ ಕಾರು, ವರ್ಷದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಸೇರಿದಂತೆ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮಹೀಂದ್ರ ಎಕ್ಸ್‌ಯುವಿ500 ಪಡೆದಿದೆ. ಬ್ಲೂಬೈಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಜನಮೆಚ್ಚುಗೆ ಪಡೆದ ನಂಬಿಕಸ್ತ ಬ್ರಾಂಡೆಂಬ ಹೆಗ್ಗಳಿಕೆಯನ್ನು XUV500 ಪಡೆದಿದೆ.

ಡೆಸಾರ್ಟ್ ಸ್ಟ್ರೋಮ್, ಡೆಸಾರ್ಟ್ ಡ್ಯಾಷ್ ಮತ್ತು ದಕ್ಷಿಣ್ ಡೇರ್ ಸೇರಿದಂತೆ ಹಲವು ರೇಸಿನಲ್ಲೂ ಎಕ್ಸ್ ಯುವಿ ಪಾಲ್ಗೊಂಡಿದೆ. ಗ್ರಾಹಕರು ಈ ರೀತಿ ಮುಗಿಬಿದ್ದರೆ ಕಂಪನಿಯು ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸುವ ನಿರೀಕ್ಷೆಯಿದೆ.

More from DriveSpark

Article Published On: Tuesday, June 12, 2012, 15:51 [IST]
English summary
Mahindra had reopened bookings of its best selling cheetah-inspired XUV500 from June 8 and the carmaker has now registered an even huge bookings of 7,200 units in just two days. The XUV 500 has been seeing overwhelming response with the SUV's 9 months' production capacity being sold out in just 2 rounds of booking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+