ಮಹೀಂದ್ರ XUV500: ಎರಡು ದಿನದಲ್ಲಿ 5,900 ಬುಕ್ಕಿಂಗ್!!

ಜನವರಿ 25ರಿಂದ ಬುಕ್ಕಿಂಗ್ ಪುನಾರಂಭಗೊಂಡಿತ್ತು. ಕಂಪನಿಯು ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ, ಚತ್ತಿಸ್ ಗಡ, ಲುದಿಯಾನ, ಜಲಂಧರ್, ಕೊಚ್ಚಿ, ತಿರುವನಂತಪುರ, ಕೊಯಮತ್ತೂರು ಸೇರಿದಂತೆ ದೇಶದ 19 ಜಿಲ್ಲೆಗಳಲ್ಲಿ ಬುಕ್ಕಿಂಗ್ ಆರಂಭಿಸಿತ್ತು.
ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಕಂಪನಿಯು XUV500 ಕಾರನ್ನು ಪರಿಚಯಿಸಿತ್ತು. ಹೆಚ್ಚು ಜನರು ಖರೀದಿಗೆ ಮುಗಿಬಿದ್ದ ಹಿನ್ನಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಬುಕ್ಕಿಂಗನ್ನು ಸ್ಥಗಿತಗೊಳಿಸಲಾಗಿತ್ತು. ಕೇವಲ 5 ನಗರಗಳಲ್ಲಿ ಹತ್ತು ದಿನಗಳಲ್ಲಿ 8 ಸಾವಿರಕ್ಕೂ ಹೆಚ್ಚು ಜನರು ಆ ಸಮಯದಲ್ಲಿ ಬುಕ್ಕಿಂಗ್ ಮಾಡಿದ್ದರು.
7,200ಕ್ಕಿಂತ ಹೆಚ್ಚು ಬುಕ್ಕಿಂಗ್ ಆದನಂತರ ಲಕ್ಕಿ ಡ್ರಾ ಮೂಲಕ ಗ್ರಾಹಕರಿಗೆ ಬುಕ್ಕಿಂಗ್ ಪಡೆಯುವ ಅವಕಾಶವನ್ನು ಕಂಪನಿ ನೀಡಿದೆ. ನಂತರ ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಮಾತ್ರ ಬುಕ್ಕಿಂಗ್ ಮಾಡುವ ಅವಕಾಶ ದೊರಕಲಿದೆ.
ಮಹೀಂದ್ರ XUV500 ಎಸ್ ಯುವಿ 2.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿದ್ದು 140 ಅಶ್ವಶಕ್ತಿ ನೀಡುತ್ತದೆ. ಇದು ಈಗ W6 2WD, W8 2WD ಮತ್ತು W8 AWD ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ XUV500 ಟಾಪ್ ಎಂಡ್ ಆವೃತ್ತಿ ದರವನ್ನು ಇತ್ತೀಚೆಗೆ ಕಂಪನಿಯು ಸುಮಾರು 55 ಸಾವಿರ ರು.ನಷ್ಟು ಹೆಚ್ಚಿಸಿತ್ತು.


Click it and Unblock the Notifications








