ಮಾರುತಿ ಸುಜುಕಿ ಎರ್ಟಿಗಾ: ಬದಲಾವಣೆಯ ಹರಿಕಾರ

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಇತ್ತೀಚೆಗೆ ಪರಿಚಯಿಸಿದ ಎರ್ಟಿಗಾದ ಮೂಲಕ ಹೊಸ ಎತ್ತರಕ್ಕೆ ಏರಲು ಯೋಜಿಸಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಹತ್ತು ಸಾವಿರಕ್ಕಿಂತಲೂ ಹೆಚ್ಚು ಬುಕ್ಕಿಂಗ್ ಆಗಿರುವುದು ಕಂಪನಿಯ ನಿರೀಕ್ಷೆಗೆ ಇನ್ನಷ್ಟು ಬೆಂಬಲ ನೀಡಿದೆ.

ಕೆಲವು ವರ್ಷಗಳ ಹಿಂದೆ ಕಂಪನಿಯು ದೇಶದ ವಾಹನ ಮಾರುಕಟ್ಟೆಯಲ್ಲಿ ಶೇಕಡ 50ರಷ್ಟು ಪಾಲು ಪಡೆದಿತ್ತು. ಆದರೆ ಪೈಪೋಟಿಗೆ ಸಿಲುಕಿ ಪಾಲು ಕುಸಿದಿದೆ. ಎರ್ಟಿಗಾ ನೆರವಿನಿಂದ ಕಳೆದು ಕೊಂಡ ಪಾಲನ್ನು ಮತ್ತೆ ಪಡೆಯುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಡೀಸೆಲ್ ಕಾರುಗಳ ಹೆಚ್ಚಳ ಮತ್ತು ಹೊಸ ಪ್ರತಿಸ್ಪರ್ಧಿಗಳ ಆಗಮನವು ಕಂಪನಿಯ ಮಾರುಕಟ್ಟೆ ಪಾಲಿಗೆ ಕನ್ನ ಹಾಕಿತ್ತು. ಎಂಪಿವಿ ಮತ್ತು ಸ್ಪೋರ್ಟ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕೂಡ ಕಂಪನಿಯ ಷೇರು ಕಡಿಮೆಯಾಗಲು ಕಾರಣವಾಗಿದೆ. ಈ ಸೆಗ್ಮೆಂಟುಗಳಲ್ಲಿ ಕಂಪನಿ ಇಲ್ಲಿವರೆಗೆ ಯಾವುದೇ ಉತ್ಪನ್ನ ಪ್ರಕಟಿಸಿಲ್ಲ. ಇದೀಗ ಎರ್ಟಿಗಾ ಮೂಲಕ ಎಂಪಿವಿ ಮಾರುಕಟ್ಟೆಯ ಪಾಲು ಕದಿಯಲು ಕಂಪನಿ ನಿರ್ಧರಿಸಿದೆ.

ಮಾರುತಿ ಸುಜುಕಿ ಎರ್ಟಿಗಾ ಪ್ರತಿಸ್ಪರ್ಧಿಗಳಾದ ಮಹೀಂದ್ರ ಕ್ಷೈಲೊ, ಟೊಯೊಟಾ ಇನ್ನೋವಾ, ಷೆವರ್ಲೆ ತವೆರಾ ಮತ್ತು ಟಾಟಾ ಆರಿಯಾ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಎರ್ಟಿಗಾ ದರವೆಷ್ಟು? ಎರ್ಟಿಗಾ ವಿಶೇಷತೆಗಳೇನು? ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಪ್ರವೇಶಿಸಿರಿ.

More from DriveSpark

Article Published On: Thursday, April 19, 2012, 14:32 [IST]
English summary
Maruti Suzuki India, the country's leading carmaker is looking at its recently launched MPV Ertiga as a game changer. The carmaker has now stated that the Ertiga will help it regain a 50% market share in the Indian car market in a few years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+