ಏಪ್ರಿಲ್ ಬೊಂಬಾಟ್ ಲಾಂಚ್: ಮಾರುತಿ ಎರ್ಟಿಗಾ

ಬಹುನಿರೀಕ್ಷಿತ ಮಾರುತಿ ಸುಜುಕಿ ಎರ್ಟಿಗಾ ರಸ್ತೆಗಿಳಿಯಲು ಕ್ಷಣಗಣನೆ ಆರಂಭವಾಗಿದೆ. ಇದು ಏಪ್ರಿಲ್ ತಿಂಗಳಲ್ಲಿ ರಸ್ತೆಗಿಳಿಯಲಿರುವ ಪ್ರಮುಖ ಕಾರು. ದೇಶದ ವಾಹನ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ಜಾಗತಿಕವಾಗಿಯೂ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿದೆ.

ರಸ್ತೆಗಿಳಿಯವ ಮುನ್ನವೇ ಬಹುನಿರೀಕ್ಷೆ ಹುಟ್ಟಿಸಿದ 30 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಎರ್ಟಿಗಾಕ್ಕೆ ಆರನೇ ಸ್ಥಾನ ದೊರಕಿದೆ. ಮಾರುತಿ ಸುಜುಕಿ ಪ್ರಕಾರ ಎರ್ಟಿಗಾವೆಂದರೆ ಲೈಫ್ ಯುಟಿಲಿಟಿ ವೆಹಿಕಲ್(ಎಲ್‌ಯುವಿ). ಕಂಪನಿಯು ಪ್ರಪ್ರಥಮ ಬಾರಿಗೆ ದೇಶಕ್ಕೆ ಈ ಮಾದರಿಯ ಕಾರನ್ನು ಪರಿಚಯಿಸುತಿದೆ. ದಿನನಿತ್ಯದ ಬಳಕೆಗೆ ಹೆಚ್ಚು ಸ್ಥಳಾವಕಾಶದ ಕಾರನ್ನು ಹುಡುಕುವರಿಗೆ ಇದು ಸೂಕ್ತ ಆಯ್ಕೆಯಾಗಲಿದೆ.

ಮಾರುತಿ ಸುಜುಕಿ ಎರ್ಟಿಗಾ ಏಳು ಸೀಟು ಹೊಂದಿರಲಿದೆ. ಇದರ ದರ 7-9 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಇದು ಆರು ಆವೃತ್ತಿಗಳಲ್ಲಿ ದೊರಕಲಿದೆ.

ಎರ್ಟಿಗಾ ಕಾರು ಎರಡು ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ನೂತನ ಕೆ14ಬಿ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. 1.4 ಲೀಟರಿನ ಈ ಎಂಜಿನ್ 6 ಸಾವಿರ ಆವರ್ತನಕ್ಕೆ 95 ಹಾರ್ಸ್ ಪವರ್ ಮತ್ತು 4 ಸಾವಿರ ಆವರ್ತನಕ್ಕೆ 130 ಎನ್ಎಂ ಪವರ್ ನೀಡಲಿದೆ. 1.4 ಲೀಟರಿನ ಡಿಡಿಐಎಸ್ ವಿಜಿಟಿ ಡೀಸೆಲ್ ಎಂಜಿನ್ 4 ಸಾವಿರ ಆವರ್ತನಕ್ಕೆ 90 ಪಿಎಸ್ ಪವರ್ ಮತ್ತು ಗರಿಷ್ಠ 1,750 ಆವರ್ತನಕ್ಕೆ 200ಎನ್ಎಂ ಟಾರ್ಕ್ ಪವರ್ ನೀಡಲಿದೆ.

ಮಾರುತಿ ಸುಜುಕಿ ಎರ್ಟಿಗಾ ಸಂಪೂರ್ಣ ವಿಮರ್ಶೆ ಓದಿರಿ>>

More from DriveSpark

Article Published On: Monday, April 9, 2012, 12:50 [IST]
English summary
Maruti Suzuki Ertiga's launch which is slated on April 12 will be the biggest car launch of the month. The much awaited MPV has already created a buzz with it being broadly talked about inmedia and automotive circles. Ertiga also gained sixth position among the 30 reputed Indian cars even before its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+