ಮಾರುತಿ ಎರ್ಟಿಗಾ ದರ ಜುಲೈ ನಂತರ ಹೆಚ್ಚಳ
"ಎರ್ಟಿಗಾ ದರ ಹೆಚ್ಚಿಸುವ ಕುರಿತು ಪರಿಶೀಲಿಸುತ್ತಿದ್ದೇವೆ. ಈ ಕುರಿತು ಮುಂದಿನ ಕೆಲವೇ ತಿಂಗಳುಗಳಲ್ಲಿ ಪ್ರಕಟಿಸಲಿದ್ದೇವೆ" ಎಂದು ಮಯಾಂಕ್ ಪಾರೇಖ್ ಹೇಳಿದ್ದಾರೆ. ಈಗಾಗಲೇ ಒಂದು ತಿಂಗಳಲ್ಲಿಯೇ ಎರ್ಟಿಗಾ ಬುಕ್ಕಿಂಗ್ 32 ಸಾವಿರ ಗಡಿ ದಾಟಿದೆ. ಗ್ರಾಹಕರ ಅತ್ಯುತ್ತಮ ಪ್ರತಿಕ್ರಿಯೆಯು ಕಂಪನಿಗೆ ದರ ಹೆಚ್ಚಿಸಲು ದೈರ್ಯ ನೀಡಿದೆ.
ಹೆಚ್ಚಿನ ಕಾರು ಕಂಪನಿಗಳು ಹೊಸ ಉತ್ಪನ್ನಗಳಿಗೆ ಆರಂಭಿಕವಾಗಿ ಕಡಿಮೆ ದರಕ್ಕೆ ಪರಿಚಯಿಸುತ್ತಿವೆ. ಮಹೀಂದ್ರ ಕ್ಷೈಲೊ ದರ ಕೂಡ ಆರಂಭದಲ್ಲಿ ಕಡಿಮೆಯಿತ್ತು. ಮಹೀಂದ್ರ ಎಕ್ಸ್‌ಯುವಿ ದರವೂ ಕಡಿಮೆಯಿತ್ತು. ಆದರೆ ನಂತರದ ದಿನಗಳಲ್ಲಿ ಈ ಕಾರುಗಳ ದರ ದುಬಾರಿಯಾಗಿತ್ತು.
ವಿಶೇಷವೆಂದರೆ ಮಾರುತಿ ಸುಜುಕಿ ಎರ್ಟಿಗಾ ಕಾರು ಸ್ವಿಫ್ಟ್ ಡಿಜೈರ್ ಸೆಡಾನ್ ಕಾರಿಗಿಂತಲೂ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಎರ್ಟಿಗಾ ಎಂಪಿವಿಯ ಡೀಸೆಲ್ ಆವೃತ್ತಿಗೆ ಅತ್ಯುತ್ತಮ ಬೇಡಿಕೆಯಿದೆ. ಎರ್ಟಿಗಾ ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗಿದೆ ಎಂಬ ಸೂಚನೆ ನಮಗೆ ದೊರಕಿದೆ.
ನೂತನ ಮಾರುತಿ ಸುಜುಕಿ ಎರ್ಟಿಗಾ ದರ ಸುಮಾರು 10-20 ಸಾವಿರ ರುಪಾಯಿ ಹೆಚ್ಚಾಗುವ ನಿರೀಕ್ಷೆಯಿದೆ. ಈಗ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿ ಸೇರಿ ಎರ್ಟಿಗಾ ಆರು ಆವೃತ್ತಿಗಳಲ್ಲಿ ದೊರಕುತ್ತಿದೆ. ಎರ್ಟಿಗಾ ಬೆಂಗಳೂರು ಎಕ್ಸ್ ಶೋರೂಂ ಆರಂಭಿಕ ದರ 6.12 ಲಕ್ಷ ರುಪಾಯಿ ಇದೆ. ಕಂಪನಿಯು ಇತ್ತೀಚೆಗೆ ಸ್ವಿಫ್ಟ್ ಡಿಜೈರ್ ಸೆಡಾನ್ ದರವನ್ನು ಸುಮಾರು 12 ಸಾವಿರ ರು.ನಷ್ಟು ಹೆಚ್ಚಿಸಿತ್ತು.


Click it and Unblock the Notifications









