ಏಪ್ರಿಲ್ ಹನ್ನೆರಡು: ಎರ್ಟಿಗಾ ಸ್ವಾಗತಕ್ಕೆ ತಳಿರುತೋರಣ

ಏಪ್ರಿಲ್ ಹನ್ನೆರಡರ ಸಂಜೆ 7.15 ಗಂಟೆಗೆ ಮುಂಬೈನಲ್ಲಿ ಮಾರುತಿ ಸುಜುಕಿ ಎರ್ಟಿಗಾ ರಸ್ತೆಗಿಳಿಯಲಿದೆ. ಮಾರುತಿ ಸುಜುಕಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶಿಂಝೊ ನಕನಿಶಿ ಈ ಮಲ್ಟಿಪರ್ಪೊಸ್ ವೆಹಿಕಲ್‌ನ್ನು ಪರಿಚಯಿಸಲಿದ್ದಾರೆ. ಮುಂಬೈನ ಸಹರಾ ರಸ್ತೆಯಲ್ಲಿರುವ ಹೋಟೆಲ್ ಐಟಿಸಿ ಮರಾಠದ ರಾಯಲ್ ಗಾರ್ಡನಿನಲ್ಲಿ ಕಾರು ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಮುಂಬರುವ ದಿನಗಳಲ್ಲಿ ದೇಶದ ಉಳಿದ ನಗರಗಳಲ್ಲಿ ಮಾರುತಿ ಎರ್ಟಿಗಾ ಲಾಂಚ್ ಆಗಲಿದೆ. ಬೆಂಗಳೂರಿನಲ್ಲಿ ಏಪ್ರಿಲ್ ಹದಿಮೂರರಂದು ಎರ್ಟಿಗಾ ಬಿಡುಗಡೆಯಾಗಲಿದೆ. ಈ ಎರ್ಟಿಗಾ ಕಾರನ್ನು ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ನೂತನ ಎರ್ಟಿಗಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಪೆಟ್ರೋಲ್ ಕಾರು ಪ್ರತಿಲೀಟರಿಗೆ 16.02 ಕಿ.ಮೀ. ಮೈಲೇಜ್ ನೀಡಿದರೆ, ಡೀಸೆಲ್ ಆವೃತ್ತಿ ಲೀಟರಿಗೆ 20.77 ಕಿ.ಮೀ. ಮೈಲೇಜ್ ನೀಡಲಿದೆ ಎಂದು ವರದಿಗಳು ಹೇಳಿವೆ.

ಮಾರುತಿ ಸುಜುಕಿ ಕಂಪನಿಯ ನೂತನ ಎರ್ಟಿಗಾ ಕಾರು ಆರು ಮಾಡೆಲ್ ಆಯ್ಕೆಯಲ್ಲಿ ದೊರಕಲಿದೆ. ಎರ್ಟಿಗಾ ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ, ಎಲ್ಡಿಐ, ವಿಡಿಐ ಮತ್ತು ಝಡ್ ಡಿಐ ಆರು ಆವೃತ್ತಿಗಳಾಗಿವೆ. ಸಂಪೂರ್ಣ ಮಾಹಿತಿ ಶೀಘ್ರದಲ್ಲಿ ನಿಮ್ಮ ಮುಂದಿರಲಿದೆ. (ಕನ್ನಡ ಡ್ರೈವ್‌ಸ್ಪಾರ್ಕ್).

More from DriveSpark

Article Published On: Wednesday, April 11, 2012, 17:08 [IST]
English summary
Maruti Suzuki Ertigia MPV will roll out on 12 April, tomorrow. The Ertiga will be unveiled at 7:15 pm by Maruti Suzuki Managing Director & CEO Shinzo Nakanishi in Mumbai. The venue of the launch is Hotel ITC Maratha's The Royal Garden at Sahar Road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+