ಮಾರುತಿ ಎ-ಸ್ಟಾರ್ ಹೊಸ ಸೆಡಾನ್‌ಗೆ ಸುಸ್ವಾಗತ
ಫೈನಲಿ ಬಹುನಿರೀಕ್ಷಿತ ಮಾರುತಿ ಸುಜುಕಿ ಎರ್ಟಿಗಾ ರಸ್ತೆಗಿಳಿದಿದೆ. ಅದೇ ಸಮಯದಲ್ಲಿ ಮಾರುತಿ ಸುಜುಕಿ ಕಂಪನಿಯು ಎ-ಸ್ಟಾರ್ ಆಧರಿತ ನೂತನ ಕಾರೊಂದನ್ನು ಪರಿಚಯಿಸಲು ಯೋಜಿಸಿದೆ ಎಂಬ ಸುದ್ದಿ ನಮಗೆ ದೊರಕಿದೆ. ಮಾರುತಿ ಡಿಜೈರ್‌ನಂತೆ ಎ-ಸ್ಟಾರ್ ಕೂಡ ಸೆಡಾನ್ ಆಯ್ಕೆಯಲ್ಲಿ ಬರಲಿದೆಯಂತೆ!
ಮಾರುತಿ ಸುಜುಕಿ ಎಸ್ಟಾರ್ ಕಾರನ್ನು ಕಂಪನಿಯ ಪ್ರಮುಖ ಕಾರು. ಇದು ದೇಶದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜಾಗತಿಕ ಮಾರುಕಟ್ಟೆಗೆ ರಫ್ತಾಗುತ್ತಿದೆ. ದಕ್ಷತೆಯ ಎಂಜಿನ್ ಹಿನ್ನಲೆಯಲ್ಲಿ ದೇಶದಲ್ಲಿ ರಿಟ್ಜ್ ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ. ಮಾರುತಿ ಡಿಜೈರ್ ಮತ್ತು ಎಸ್ಎಕ್ಸ್4 ನಡುವಿನ ಸ್ಪೇಸಿಗೆ ಎಸ್ಟಾರ್ ಸೆಡಾನ್ ಪರಿಚಯಿಸಲು ಕಂಪನಿ ನಿರ್ಧರಿಸಿದೆ.
ಮೂರುಬಾಕ್ಸ್ ಆಕಾರದ ಸೆಡಾನ್ ಎ-ಸ್ಟಾರ್ ಮುಂದಿನ ವರ್ಷದ ಆರಂಭದಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಕಾರು ಸ್ಕೋಡಾ ರಾಪಿಡ್‌ಗೆ ನೇರ ಪೈಪೋಟಿ ನೀಡುವ ನಿರೀಕ್ಷೆಯಿದೆ. ಎ-ಸ್ಟಾರ್ ಸೆಡಾನ್ ಆವೃತ್ತಿಯಲ್ಲಿ ಇರಬಹುದಾದ ಹೊಸ ಫೀಚರುಗಳ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. . ಮತ್ತೊಂದು ಮೂಲದ ಪ್ರಕಾರ ಮಾರುತಿ ರಿಟ್ಜ್ ಕಾರಿನ ಪರಿಷ್ಕೃತ ಆವೃತ್ತಿ ಕೂಡ ಆಗಮಿಸಲಿದೆಯಂತೆ.
ಮಾರುತಿ ಸುಜುಕಿ ಕಂಪನಿಯು ಏಪ್ರಿಲ್ 12ರಂದು ಹೊಸ ಎಂಪಿವಿ ಎರ್ಟಿಗಾ ಪರಿಚಯಿಸಿತ್ತು. ಇದು 1.3 ಲೀಟರ್ ಡಿಡಿಐಎಸ್ ಡೀಸೆಲ್ ಮತ್ತು ನೂತನ 1.4 ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.
ಬಹುನಿರೀಕ್ಷಿತ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಅನಿರೀಕ್ಷಿತವಾಗಿ ಕೆಲವು ಗಂಟೆಗಳಷ್ಟು ಬೇಗನೇ ರಸ್ತೆಗಿಳಿದಿದೆ. ಇದು 1.3 ಲೀಟರ್ ಡಿಡಿಐಎಸ್ ಡೀಸೆಲ್ ಮತ್ತು ನೂತನ 1.4 ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಎರ್ಟಿಗಾ ದರ 5.89 ರು.ನಿಂದ 8.45 ಲಕ್ಷ ರುಪಾಯಿವರೆಗಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









