ಎಸ್ಟಾರ್‌ಗೆ ಬೀಸಿದ ತಾಜಾ ಹವಾ; ಬರಮಾಡಿಕೊಳ್ಳಿ 'ವಿಂಡ್'

By Nagaraja

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತೆರೆಮರೆಯಲ್ಲಿ ಮುಂದಿನ ತಲೆಮಾರಿನ ಎಸ್ಟಾರ್/ಆಲ್ಟೊ ನಿರ್ಮಾಣದ ಸಿದ್ಧತೆ ನಡೆಸುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಹೌದು, ಸುಜುಕಿಯ ಮುಂದಿನ ತಲೆಮಾರಿನ 'ಎ:ವಿಂಡ್' ಕಾನ್ಸೆಪ್ಟ್ ಕಾರಿನ ಚಿತ್ರಣಗಳು ಈಗಾಗಲೇ ಬಿಡುಗಡೆಗೊಂಡಿದೆ. ಸಹಜವಾಗಿಯೇ ನಿರ್ಮಾಣದ ಮೆಟ್ಟಿಲೇರುವಾಗ ಈ ವಿನ್ಯಾಸದಲ್ಲಿ ಬದಲಾವಣೆ ಕಂಡುಬರಲಿದೆ. ಆದದೆ ಸದ್ಯಕ್ಕಂತೂ ಮುಂದಿನ ಜನಾಂಗದ ಎಸ್ಟಾರ್ ಪರಿಕಲ್ಪನೆ ಬಿಡುಗಡೆಗೊಂಡಿರುವುದು ಅಭಿಮಾನಿಗಳಲ್ಲಿ ಭಾರಿ ಸಂತಸಕ್ಕೆ ಕಾರಣವಾಗಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಈಗಾಗಲೇ 2013 ಥಾಯ್ಲೆಂಡ್ ಅಂತರಾಷ್ಟ್ರೀಯ ಮೋಟಾರ್ ಎಕ್ಸ್‌ಪೋದಲ್ಲಿ ಅನಾವರಣಗೊಂಡಿರುವ ಸುಜುಕಿಯ ಎ:ವಿಂಡ್ ಕಾನ್ಸೆಪ್ಟ್ ತಾಜಾ ಹವೆಯನ್ನು ಬೀಸುವ ನಿರೀಕ್ಷೆಯಲ್ಲಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಸುಜುಕಿ ಎ:ವಿಂಡ್ ಮೂರು ವಿಧಧ ವಿನ್ಯಾಸದ ಅಂಶವನ್ನು ಒಳಗೊಂಡಿರಲಿದೆ. ಅವುಗಳೆಂದರೆ ಡೈನಾಮಿಕ್ ಬಾಡಿ, ರೂಮಿ ಕ್ಯಾಬಿನ್ ಮತ್ತು ಫೈನ್ ಕ್ವಾಲಿಟಿ. ಇವೆಲ್ಲವೂ ಶ್ರೇಷ್ಠ 'ಎ' ಸೆಗ್ಮೆಂಟ್ ಕಾರು ನಿರ್ಮಾಣ ಮಾಡಲು ನೆರವಾಗಲಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಅಂದ ಹಾಗೆ ಸುಜುಕಿ ಎ ವಿಂಡ್ ಕಾರು 3600 ಎಂಎಂ ಉದ್ದ, 1600 ಎಂಎಂ ಅಗಲ ಮತ್ತು 1540 ಎಂಎಂ ಎತ್ತರವನ್ನು ಹೊಂದಿರಲಿದೆ. ಅಲ್ಲದೆ 2425 ಎಂಎಂ ಉದ್ದವನ್ನು ಪಡೆದುಕೊಳ್ಳಲಿದೆ. ಅಂದರೆ ಎಲ್ಲ ಅರ್ಥದಲ್ಲೂ ಎಸ್ಟಾರ್ ಮೀರಿ ನಿಲ್ಲಲಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಇನ್ನು ಹೊರಮೈ ವಿನ್ಯಾಸದಲ್ಲೂ ಎ:ವಿಂಡ್ ಕಾನ್ಸೆಪ್ಟ್ ಹೆಚ್ಚು ಆಕರ್ಷಕತೆಯನ್ನು ಪೆಡದುಕೊಂಡಿದೆ. ಇದರಲ್ಲಿ ಆಧುನಿಕತೆಗೆ ಭಾಗವಾಗಿ ಸ್ಟೈಲಿಷ್ ಗ್ರಿಲ್ ಆಳವಡಿಸಲಾಗಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಹಾಗೆಯೇ ಪ್ರೊಜೆಕ್ಟರ್ ಹೆಡ್‌ಲೈಟ್, ಎಲ್‌ಇಡಿ ಲೈಟ್ ಅಂದತೆಯನ್ನು ಹೆಚ್ಚಿಸಿದೆ. ಆದರೆ ಉತ್ಪನ್ನ ವರ್ಷನ್‌ ಇದೇ ಸ್ವರೂಪ ಗಿಟ್ಟಿಸಿಕೊಳ್ಳಲಿದೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಒಟ್ಟಾರೆಯಾಗಿ ಎ:ವಿಂಡ್ ಕಾನ್ಸೆಪ್ಟ್‌ನಲ್ಲಿ ಆಲ್ಟೊ ಹಾಗೂ ಎಸ್ಟಾರ್ ಆವೃತ್ತಿಯ ಕೆಲವೊಂದು ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಕಾರಿನ ಒಳಮೈ ಸಹ ಸಂಪೂರ್ಣ ವಿಭಿನ್ನತೆಯನ್ನು ಪಡೆದುಕೊಂಡಿದೆ. ಇಂದು ಏರ್ ವೆಂಟ್ಸ್, ಸ್ಟೀರಿಂಗ್, ಗೇರ್ ಬಾಕ್ಸ್, ಹ್ಯಾಂಡ್ ಬ್ರೇಕ್, ಡೋರ್ ಹ್ಯಾಂಡಲ್ ಹಾಗೂ ಆಧುನಿಕ ಮಾಹಿತಿ ಸಿಸ್ಟಂ ಪಡೆದುಕೊಳ್ಳಲಿದೆ. ಎದುರುಗಡೆ ಹಾಗೂ ಹಿಂದುಗಡೆ ಪ್ರಯಾಣಿಕರಿಗೂ ಹೆಚ್ಚು ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಗರಿಷ್ಠ ಲಗ್ಗೇಜ್ ಸ್ಪೇಸ್‌ಗೂ ಆದ್ಯತೆ ಕೊಡಲಾಗಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಅಂತಿಮವಾಗಿ ಸುಜುಕಿ ಎ:ವಿಂಡ್ 996 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, ಸಿವಿಟಿ ಗೇರ್ ಬಾಕ್ಸ್ ಹೊಂದಿರಲಿದೆ.

ಸುಜುಕಿ ಎ:ವಿಂಡ್ ಕಾನ್ಸೆಪ್ಟ್

ಅಷ್ಟೇ ಅಲ್ಲದೆ ಈ ನೂತನ ಕಾನ್ಸೆಪ್ಟ್ ಮಾಡೆಲ್ ಮುಂಬರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.

Most Read Articles

Kannada
English summary
This folks is the Suzuki A:Wind Concept. A car that's expected to be the pre-production version of the next-gen Maruti A-Star and Alto (outside India).
Story first published: Friday, November 29, 2013, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X