ಮಾರುತಿ ಸುಜುಕಿ ಕಿಝಾಷಿಗೆ 3.12 ಲಕ್ಷ ರು. ಡಿಸ್ಕೌಂಟ್

ಪ್ರೀಮಿಯಂ ಕಾರು ಕಿಝಾಷಿಗೆ ಮಾರುತಿ ಸುಜುಕಿ ಬಂಪರ್ ಆಫರ್ ಪ್ರಕಟಿಸಿದೆ. ಈಗ ನೀವು ಮಾರುತಿ ಸುಜುಕಿ ಕಿಝಾಷಿ ಖರೀದಿಸಿದರೆ ಸುಮಾರು 3.12 ಲಕ್ಷ ರುಪಾಯಿ ಡಿಸ್ಕೌಂಟ್ ಪಡೆಯಬಹುದು.

ಮಾರುತಿ ಸುಜುಕಿ ಕಿಝಾಷಿ ಕಾರು ಕಂಪನಿಯ ನಿರೀಕ್ಷೆಯಂತೆ ಬೇಡಿಕೆ ಪಡೆದುಕೊಂಡಿಲ್ಲ. ಕಿಝಾಷಿ ಆರಂಭಿಕ ದರ 17.12 ಲಕ್ಷ ರು. ಇದೆ. ಇಷ್ಟು ದುಬಾರಿ ದರಕ್ಕೆ ಇದರ ಪ್ರತಿಸ್ಪರ್ಧಿ ಕಂಪನಿಗಳ ಕಾರು ಗ್ರಾಹಕರನ್ನು ಸೆಳೆಯುತ್ತಿದೆ.

ಮಾರುತಿ ಸುಜುಕಿ ಕಿಝಾಷಿ ಕಾರನ್ನು ಕಂಪನಿಯು ಪೂರ್ಣ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಕಿಝಾಷಿ ಡಿಸ್ಕೌಂಟ್ ಆಫರನ್ನು ಪ್ರಚಾರ ಪಡಿಸಲು ಕಂಪನಿಯು ಕೊಟಕ್ ಮಹೀಂದ್ರದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಕೊಟಕ್ ಮಹೀಂದ್ರ ಕಂಪನಿಯು ತನ್ನ ಗ್ರಾಹಕರಿಗೆ ಕಿಝಾಷಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಡಿಸ್ಕೌಂಟ್ ನಂತರ ಮಾರುತಿ ಕಿಝಾಷಿ ಮ್ಯಾನುಯಲ್ ಗೇರ್ ಕಾರು ದರ ಸುಮಾರು 14 ಲಕ್ಷ ರು. ಆಗಲಿದೆ. ಆಟೋಮ್ಯಾಟಿಕ್ ಕಿಝಾಷಿ ದರ ಸುಮಾರು 15 ಲಕ್ಷ ರು. ಇರಲಿದೆ.

ಡಿಸ್ಕೌಂಟ್ ನಂತರದ ಕಿಝಾಷಿ ದರವು ಅದರ ಪ್ರತಿಸ್ಪರ್ಧಿ ಕಂಪನಿಗಳ ಕಾರುಗಳಿಗಿಂತ ಕಡಿಮೆಯಾಗಿದೆ. ನಿಸ್ಸಾನ್ ಟೀನಾ, ಸ್ಕೋಡಾ ಸೂಪರ್ಬ್, ಹೋಂಡಾ ಅಕಾರ್ಡ್ ಮತ್ತು ಹ್ಯುಂಡೈ ಸೊನಾಟ ಕಾರುಗಳಿಗಿಂತ ಕಿಝಾಷಿ ದರ ಕಡಿಮೆಯಾಗಿದೆ.

More from DriveSpark

Article Published On: Monday, September 17, 2012, 11:23 [IST]
English summary
Maruti Suzuki's 3.12 Lakh Discount For Kizashi. The Maruti Suzuki Kizashi's price for the manual variant after the discount is Rs.14 lakhs while the automatic variant costs Rs.15 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+