ಎರಡು ಲಕ್ಷ ರಿಟ್ಜ್ ಮಾರಾಟ ಮಾಡಿದ ಮಾರುತಿ
ಸ್ವಿಫ್ಟ್ ಕಾರಿನಂತೆ ರಿಟ್ಜ್ ಕೂಡ ಗ್ರಾಹಕರಿಂದ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಕಂಪನಿಯು 2011-12ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಸುಮಾರು 64 ಸಾವಿರ ರಿಟ್ಜ್ ಮಾರಾಟ ಮಾಡಿದೆ. ಜೊತೆಗೆ ಸುಮಾರು 8 ಸಾವಿರ ರಿಟ್ಜ್ ರಫ್ತು ಮಾಡಿದೆ.
"ಎಲ್ಲಾ ವಯೋಮಾನದವರಿಂದಲೂ ಮಾರುತಿ ಸುಜುಕಿ ರಿಟ್ಜ್ ಬೇಡಿಕೆ ಪಡೆದುಕೊಳ್ಳುತ್ತಿರುವುದು ಕಂಪನಿಗೆ ಹರ್ಷ ತಂದಿದೆ. ರಿಟ್ಜ್ ಚಾಲನೆ ಆರಾಮದಾಯಕತೆಯ ಕುರಿತು ಗ್ರಾಹಕರು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದಲ್ಲಿ ರಿಟ್ಜ್ ಕಾರು ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆ ನಮಗಿದೆ" ಎಂದು ಮಾರುತಿ ಸುಜುಕಿ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶಶಾಂಕ್ ಶ್ರಿವಾತ್ಸವ ಹೇಳಿದ್ದಾರೆ.
ರಿಟ್ಜ್ ಕಾರಿಗೆ ಇನ್ನಷ್ಟು ಗರಿಗಳು: 2009ರಲ್ಲಿ ಪ್ರಕಟಗೊಂಡ ಭಾರತದ ಕಾರುಗಳ ಗುಣಮಟ್ಟ ಸಮೀಕ್ಷೆಯಲ್ಲಿ ಬೆಸ್ಟ್ ಪ್ರೀಮಿಯಂ ಕಾಂಪ್ಯಾಕ್ಟ್ ಕಾರಾಗಿ ರಿಟ್ಜ್ ಹೊರಹೊಮ್ಮಿತ್ತು. ಅದೇ ವರ್ಷ ಸುಂದರವಾದ ಕಾರೆಂಬ ಪ್ರಶಸ್ತಿಯನ್ನೂ ರಿಟ್ಜ್ ಪಡೆದುಕೊಂಡಿತ್ತು.
ಆಟೋ ಕಾರ್ ಬಳಗದಿಂದ ಬೆಸ್ಟ್ ಹ್ಯಾಚ್ ಬ್ಯಾಕ್ ಎಂಬ ಪ್ರಶಸ್ತಿ, ಆಟೋ ಬಿಲ್ಡ್ ವತಿಯಿಂದ ವರ್ಷದ ಕಾಂಪ್ಯಾಕ್ಟ್ ಕಾರು ಪ್ರಶಸ್ತಿ, ಬಿಎಸ್ ಮೋಟರಿಂಗ್ ಕಡೆಯಿಂದ ವರ್ಷದ ಕಾರು ಪ್ರಶಸ್ತಿಯನ್ನು ರಿಟ್ಜ್ ಪಡೆದಿದೆ. ಫೇಸ್ ಬುಕಿನಲ್ಲಿ ಹತ್ತು ಲಕ್ಷ ಅಭಿಮಾನಿಗಳನ್ನು ಪಡೆದ ಖ್ಯಾತಿಗೂ ರಿಟ್ಜ್ ಭಾಜನವಾಗಿದೆ.
ಎಲ್ಲದಕ್ಕೂ ಮೊದಲು ರಿಟ್ಜ್ ಕಾರಿನ ಸಂಪೂರ್ಣ ವಿಮರ್ಶೆ ಓದಿಬಿಡಿ.


Click it and Unblock the Notifications
