ಮಾರುತಿ ಸುಜುಕಿ ರಿಟ್ಜ್ ಆಟೋಮ್ಯಾಟಿಕ್ ಆಗಮನಕ್ಕೆ ಕ್ಷಣಗಣನೆ

ಇಷ್ಟು ಮಾತ್ರವಲ್ಲದೇ ಪರಿಷ್ಕೃತ 2012ರ ರಿಟ್ಜ್ ಆವೃತ್ತಿಯು ಹೆಚ್ಚು ಇಂಧನ ದಕ್ಷತೆಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹೊಂದಿರಲಿದೆ. ಅಂದರೆ 1.2 ಲೀಟರಿನ ಕೆ ಸರಣಿಯ (80 ಹಾರ್ಸ್ ಪವರ್ ಮತ್ತು 112 ಎನ್ಎಂ ಟಾರ್ಕ್ ಪವರ್) ಎಂಜಿನ್ ಮತ್ತು 1.3 ಲೀಟರಿನ ಫಿಯೆಟ್ ಮಲ್ಟಿಜೆಟ್ (75 ಅಶ್ವಶಕ್ತಿ ಮತ್ತು 190 ಎನ್ಎಂ) ಟರ್ಬೊ ಡೀಸೆಲ್ ಎಂಜಿನ್ ಹೊಂದಿರಲಿದೆ.
ಈ ಎಂಜಿನುಗಳು ಈಗಾಗಲೇ ಸ್ವಿಫ್ಟ್ ಕಾರುಗಳಲ್ಲಿ ಜನಪ್ರಿಯವಾಗಿದೆ. ಹೀಗಾಗಿ ಸ್ವಿಫ್ಟ್ ಯಾಕೆ, ರಿಟ್ಜ್ ತಗೊಳ್ಳಿ ಎಂಬ ನಮ್ಮ ಲೇಖನಕ್ಕೆ ಇನ್ನಷ್ಟು ಮಹತ್ವ ಬರಲಿದೆ. ಆದರೆ ಈ ಎಂಜಿನುಗಳು ಐದು ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿವೆ. ಆದರೆ ಕಂಪನಿಯು ನೂತನ ಕಾರಿಗೆ ನಾಲ್ಕು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಿದೆ.
ನೂತನ ರಿಟ್ಜ್ ಕಾರು ಬಿ ಸೆಗ್ಮೆಂಟಿನಲ್ಲಿ ಕಂಪನಿಯು ಪರಿಚಯಿಸುತ್ತಿರುವ ಎರಡನೆಯ ಆಟೋಮ್ಯಾಟಿಕ್ ಗೇರ್ ಕಾರಾಗಲಿದೆ. ಈಗಾಗಲೇ ಎ-ಸ್ಟಾರ್ ಕಾರಿಗೆ ಆಟೋಮ್ಯಾಟಿಕ್ ಗೇರ್ ಅಳವಡಿಸಿಯಾಗಿದೆ. ಈಗಾಗಲೇ 2012ರ ರಿಟ್ಜ್ ಕಾರು ಯುರೋಪ್ ಮಾರುಕಟ್ಟೆಗೆ ಆಗಮಿಸಿಯಾಗಿದೆ. ಆಟೋಮ್ಯಾಟಿಕ್ ಆವೃತ್ತಿಯು ರಿಟ್ಜ್ ಕಾರನ್ನು ಸಿಟಿ ರಸ್ತೆಗೆ ಹೆಚ್ಚು ಸೂಕ್ತವಾಗಿಸಲಿದೆ.
ನೂತನ ರಿಟ್ಜ್ ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಝಡ್ ಎಕ್ಸ್ಐ ಕಾರುಗಳು ಮ್ಯಾನುಯಲ್ ಆವೃತ್ತಿಗಳಲ್ಲಿಯೇ ಆಗಮಿಸುವ ನಿರೀಕ್ಷೆಯಿದೆ. ಎಲ್ ಡಿಐ, ವಿಡಿಐ ಮತ್ತು ಝಡಿಐ ಡೀಸೆಲ್ ಆವೃತ್ತಿಗಳು ಆಟೋಮ್ಯಾಟಿಕ್ ಗೇರುಗಳಲ್ಲಿ ಆಗಮಿಸುವ ಸೂಚನೆಯಿದೆ. ವಿಎಕ್ಸ್ಐ ಪೆಟ್ರೋಲ್ ರಿಟ್ಜ್ ಕೂಡ ಆಟೋಮ್ಯಾಟಿಕ್ ಗೇರ್ ಆಯ್ಕೆಯಲ್ಲಿ ಸಿಗುವ ನಿರೀಕ್ಷೆಯಿದೆ.
ಮಾರುತಿ ಸುಜುಕಿ ರಿಟ್ಜ್: ಸಂಪೂರ್ಣ ವಿಮರ್ಶೆ ಓದಿ


Click it and Unblock the Notifications