ಚಿತ್ರಕಥೆ: ಅಚ್ಚರಿಯ ಪುಟ್ಟಪುಟ್ಟ ಚಿಕಣಿ ಕಾರುಲೋಕ

ಟೆಕ್ ಲೋಕದಲ್ಲಿ ಈಗ ಚಿಕಣಿ ಸಾಧನಗಳದ್ದೇ ಕಾರುಬಾರು. ಈ ಟ್ರೆಂಡು ಕಾರುಲೋಕವನ್ನೂ ಬಿಟ್ಟಿಲ್ಲ. ಇಲ್ಲೂ ನ್ಯಾನೊ ಮೇನಿಯಾ ಬಂದುಬಿಟ್ಟಿದೆ. ಅಚ್ಚರಿಗೊಳಿಸುವ, ಮೂಗಿನಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವ ಅಚ್ಚರಿಯ ಪುಟ್ಟಪುಟ್ಟ ಕಾರುಗಳನ್ನು ಅಭಿವೃದ್ಧಿಪಡಿಸುವ ಸಾಹಸಕ್ಕೆ ಕಾರು ಕಂಪನಿಗಳು ಕೈಹಾಕುತ್ತಿವೆ.

ನಮ್ಮೂರ ರಸ್ತೆಯಲ್ಲಿ ನ್ಯಾನೊ, ರೇವಾ ಕಾರುಗಳಿವೆ. ಆದರೆ ಅವುಗಳಿಗಿಂತಲೂ ಎಷ್ಟೋ ಪಟ್ಟು ಸಣ್ಣದಾಗಿರುವ ಪುಟ್ಟಪುಟ್ಟಕಾರುಗಳಿವೆ. ಇವು ಚಿಕ್ಕಮಕ್ಕಳ ಆಟಿಕೆ ಕಾರುಗಳಂತೆ ಕಾಣುತ್ತವೆ. ಕೆಲವು ಕಾರುಗಳು ಇನ್ನೂ ಕಾನ್ಸೆಪ್ಟ್ ಹಂತದಲ್ಲಿವೆ.

ಮೈಲೇಜ್ ಹೆಚ್ಚಿಸುವುದು ಸಣ್ಣಕಾರುಗಳ ಪ್ರಮುಖ ಉದ್ದೇಶ. ಇವುಗಳಿಂದ ಪರಿಸರ ಮಾಲಿನ್ಯ ಸಹ ಕಡಿಮೆ. ದುಬಾರಿ ಇಂಧನ ದರದ ಹಿನ್ನಲೆಯಲ್ಲಿ ದೊಡ್ಡಕಾರುಗಳಿಂದ ಜನರು ದೂರಸಾಗುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಕಂಪನಿಗಳು ಸಣ್ಣಕಾರುಗಳನ್ನು ಉತ್ಪಾದಿಸುತ್ತಿವೆ. ಕೆಲವು ಕಂಪನಿಗಳು ಅತಿಸಣ್ಣ ಚಿಕಣಿ ಕಾರು ಉತ್ಪಾದಿಸುತ್ತಿವೆ.

ಇಲ್ಲಿ ಕೆಲವು ಪುಟ್ಟಪುಟ್ಟ ಕಾರುಗಳಿವೆ. ಇದರಲ್ಲಿ ಒಬ್ಬರು, ಹೆಚ್ಚೆಂದರೆ ಇಬ್ಬರು ಕುಳಿತುಕೊಳ್ಳಬಹುದು. ಹಾಗಂತ ಇವು ಕಡಿಮೆ ಶಕ್ತಿಯ ಕಾರುಗಳಂದುಕೊಳ್ಳಬೇಡಿ. ಇವುಗಳು ಬೃಹತ್ ಸೂಪರ್ ಕಾರುಗಳಷ್ಟೇ ಶಕ್ತಿಶಾಲಿ.

ಸೂಪರ್ ಕಾರುಗಳು ಹೆಚ್ಚು ಮಾಲಿನ್ಯಕಾರಕ. ಹೀಗಾಗಿ ಈ ಕಂಪನಿಗಳು ಅತ್ಯಧಿಕ ಶಕ್ತಿಶಾಲಿ ಆದರೆ ಅತಿಸಣ್ಣ ಕಾರುಗಳನ್ನು ಪರಿಚಯಿಸುತ್ತಿವೆ. ಸುಮ್ನೆ ಕಲ್ಪಿಸಿಕೊಳ್ಳಿ. ಬುಗಾಟಿ ವೆರೊನ್, ಫೆರಾರಿ ಕಾರುಗಳು ಗಾತ್ರವನ್ನು ಹತ್ತಿಪತ್ತುಪಟ್ಟು ಕುಗ್ಗಿಸಿಕೊಂಡು ಬಂದರೆ ಹೇಗಿರುತ್ತೆ?

ಮುಂದಿನ ಪುಟದಲ್ಲಿ ಪುಟ್ಟಪುಟ್ಟ ಕಾರುಗಳ ಪುಟ್ಟಪುಟ್ಟ ಟಿಪ್ಪಣಿಗಳಿವೆ. ಚಿತ್ರನೋಡಿಕೊಂಡು ಚಿಕಣಿ ಕಾರುಗಳ ಬಗ್ಗೆ ಓದಿಬಿಡಿ.

More from DriveSpark

Article Published On: Thursday, March 29, 2012, 12:14 [IST]
English summary
Photo feature Story: Cars are getting smaller by the day. Many carmakers are reducing the size and weight of their cars to deliver higher mileage and too reduce emissions of their cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+