ಮಿಟ್ಸುಬಿಸಿ ಮತ್ತು ಎಚ್ಎಂ ಡಿವೋರ್ಸ್ ಸನ್ನಿಹಿತ
ಯಾವುದೇ ಹೊಸ ವಾಹನ ಪರಿಚಯಿಸುವಲ್ಲಿ ಇವೆರಡು ಕಂಪನಿಗಳು ಸೋತಿವೆ. ಮಿಟ್ಸುಬಿಸಿ ಇತ್ತೀಚೆಗೆ ಹಳೆಯ ಮಾಡೆಲ್ ಕಾರೊಂದನ್ನು ಅಪ್ ಡೇಟ್ ಮಾಡಿ ರಸ್ತೆಗೆ ಬಿಟ್ಟಿತ್ತು. ಹಿಂದೂಸ್ತಾನ್ ಮೋಟರ್ಸ್ ಇನ್ನೂ ಅಂಬಾಸಡರ್ ಕಾರಿನ ಸುತ್ತಲೇ ಗಿರಕಿಹೊಡೆಯುತ್ತಿದೆ. ಮಿಟ್ಸುಬಿಸಿ ಕಂಪನಿಯು ಲಾನ್ಸರ್, ಪಜೆರೊ ಮತ್ತು ಔಟ್ಲಾಂಡರ್ ಆವೃತ್ತಿಗಳ ಮಾರಾಟದಲ್ಲಿ ಬ್ಯುಸಿಯಾಗಿದೆ.
ಈ ಎರಡು ಕಂಪನಿಗಳ ಜಂಟಿ ಉದ್ಯಮ ಕೊನೆಗೊಳ್ಳುವ ಸೂಚನೆ ಈ ವರ್ಷದ ಆರಂಭದಲ್ಲಿಯೇ ದೊರಕಿತ್ತು. ದೆಹಲಿ ವಾಹನ ಪ್ರದರ್ಶನದಲ್ಲಿ ಯಾವುದೇ ಹೊಸ ವಾಹನ ಅನಾವರಣ ಮಾಡುವುದಿಲ್ಲವೆಂದು ಜಂಟಿ ಉದ್ಯಮಗಳು ಜೊತೆಯಾಗಿ ತಿಳಿಸಿದ್ದವು. ವಾಹನ ಪ್ರದರ್ಶನದಲ್ಲಿ ಒಂದು ಕಾನ್ಸೆಪ್ಟ್ ವಾಹನವನ್ನೂ ಪ್ರದರ್ಶಿಸಿರಲಿಲ್ಲ.
ಮತ್ತೊಂದು ವರದಿಯ ಪ್ರಕಾರ ಮಿಟ್ಸುಬಿಸಿ ಕಂಪನಿಯು ಸ್ವತಂತ್ರವಾಗಿ ಮೀರಜ್ ಎಂಬ ಕಾರನ್ನು ಶೀಘ್ರದಲ್ಲಿ ಪರಿಚಯಿಸಲಿದೆಯಂತೆ. ಆದರೆ ಈ ಕಾರು ಉತ್ಪಾದನೆಗೆ ಯಾವುದೇ ಮೂಲ ಸೌಕರ್ಯ ಮಿಟ್ಸುಬಿಸಿ ದೇಶದಲ್ಲಿ ಹೊಂದಿಲ್ಲ. ಜಂಟಿ ಉದ್ಯಮ ಕೊನೆಗೊಳ್ಳದಿದ್ದರೆ ಹಿಂದೂಸ್ತಾನ್ ಮೋಟರ್ಸ್ ನ ಚೆನ್ನೈ ಘಟಕದಲ್ಲಿಯೇ ಮೀರಜ್ ಕಾರನ್ನು ಉತ್ಪಾದಿಸುವ ನಿರೀಕ್ಷೆಗಳಿವೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









