ನೂತನ ಮಿಟ್ಸುಬಿಸಿ ಔಟ್ಲಾಂಡರ್ ರಸ್ತೆಗೆ, ದರವೆಷ್ಟು?

ಮಿಟ್ಸುಬಿಸಿ ಇಂಡಿಯಾ ಕಂಪನಿಯು ನೂತನ ಏಳು ಸೀಟಿನ ಔಟ್ಲಾಂಡರ್ ಕ್ರಾಸೊವರ್ ನ್ನು ರಸ್ತೆಗಿಳಿಸಿದೆ. ಇದರ ದೆಹಲಿ ಎಕ್ಸ್ ಶೋರೂಂದ ರ 19.95 ಲಕ್ಷ ರುಪಾಯಿ. 5 ಸೀಟಿನ ಔಟ್ಲಾಂಡರ್ ಕಾರಿಗೆ ಹೋಲಿಸಿದರೆ ಸುಮಾರು 1 ಲಕ್ಷ ರುಪಾಯಿಯಷ್ಟು ಅಗ್ಗವಾಗಿದೆ.

ನೂತನ ಔಟ್ಲಾಂಡರ್ ಈಗಾಗಲೇ ರಸ್ತೆಯಲ್ಲಿರುವ ಹೋಂಡಾ ಸಿಆರ್ ವಿ, ಫೋರ್ಡ್ ಎಂಡೊವರ್ ಮತ್ತು ಷೆವರ್ಲೆ ಕ್ಯಾಪ್ಟಿವಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಕಂಪನಿಯು ಇತ್ತೀಚೆಗೆ ನೂತನ ಪಜೆರೊ ಕಾರನ್ನು ಪರಿಚಯಿಸಿದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನೂತನ ಔಟ್ಲಾಂಡರ್ ಬುಕ್ಕಿಂಗ್ ಮಾಡಿದರೆ ಒಂದು ತಿಂಗಳ ವೇಟಿಂಗ್ ಅವಧಿಯಲ್ಲಿ ನಿಮ್ಮ ಕೈ ಸೇರಲಿದೆ.

ಹಳೆಯ ಔಟ್ಲಾಂಡರಿಗೆ ಹೋಲಿಸಿದರೆ ನೂತನ ಕಾರಲ್ಲಿ ಮಹತ್ವದ ಬದಲಾವಣೆಗಳು ಏನೂ ಇಲ್ಲ. ಕೇವಲ ಎರಡು ಎಕ್ಸ್ ಟ್ರಾ ಸೀಟುಗಳನ್ನು ಅಳವಡಿಸಲಾಗಿದೆ ಅಷ್ಟೇ! ಇದರಿಂದ ಔಟ್ಲಾಂಡರ್ ಹಿಂಭಾಗದಲ್ಲಿ ಎರಡು ಜನರು ಹೆಚ್ಚಿಗೆ ಕುಳಿತುಕೊಳ್ಳಬಹುದು.

ನೂತನ ಔಟ್ಲಾಂಡರ್ ಕ್ರಾಸೊವರ್ ಕಾರಿನ ಸ್ಟಿಯರಿಂಗ್ ವೀಲ್ ನಲ್ಲಿ ಆಡಿಯೊ ಮತ್ತು ಕ್ರೂಷ್ ಕಂಟ್ರೋಲ್ ಇದೆ. ಉಳಿದಂತೆ ಕೀಲೆಸ್ ಎಂಟ್ರಿ, ಎಚ್ ಐಡಿ ಹೆಡ್ ಲ್ಯಾಂಪ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್ ಮತ್ತು ಮುಂಭಾಗ ಹಿಂಭಾಗದ ಸೀಟುಗಳಿಗೆ ಸೀಟ್ ಬೆಲ್ಟ್ ಮತ್ತು ಚರ್ಮದ ಸೀಟುಗಳು ಇದರಲ್ಲಿರುವ ಪ್ರಮುಖ ಫೀಚರುಗಳಾಗಿವೆ.

ಏಳು ಸೀಟಿನ ಔಟ್ಲಾಂಡರ್ 2.4 ಲೀಟರಿನ ಎಂಪಿಎಫ್ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಆರು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು 167 ಪಿಎಸ್ ಪವರ್ ಮತ್ತು 226 ಟಾರ್ಕ್ ಪವರ್ ನೀಡುತ್ತದೆ. ಔಟ್ಲಾಂಡರ್ ಡೀಸೆಲ್ ಎಂಜಿನ್ ಆಯ್ಕೆಯದಲ್ಲಿ ದೊರಕುವುದಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Saturday, March 17, 2012, 11:35 [IST]
English summary
Mitsubishi India has launched the new 7-seater Outlander crossover at Rs. 19.95 lakh (ex-showroom, Delhi.). Less costlier by Rs. 1 lakh than the outgoing 5-seater Outlander, the new version is sure to take on the likes of Honda CR-V, Ford Endeavor and Chevrolet Captiva. The new Outlander comes following the recent launch of the Pajero Sport in New Delhi. Mitsubishi is expected to start delivering the car in about one month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+