ಮರ್ಸಿಡೀಸ್ 'ಎಂ' ಶ್ರೇಣಿ ಐಷಾರಾಮಿ ಕಾರು ಬರಲಿದೆ!

ML250 CDI ಸಣ್ಣ ಇಂಜಿನ್ ನೊಂದಿಗೆ ಬರುತ್ತಿದ್ದು, 4 ಸಿಲಿಂಡರ್, 2,143 ಸಿಸಿ ಡೀಸೆಲ್ ಇಂಜಿನ್ ಹೊಂದಿದೆ. ಹೊಸ ಇಂಜಿನ್ 204 bhp ಸಾಮರ್ಥ್ಯ ಹೊಂದಿದ್ದು ಇಂಜಿನ್ ಜೋಡಣೆಯನ್ನು ಫೋರ್ಸ್ ಮೋಟರ್ಸ್ ಮಾಡಿದೆ.
ಮರ್ಸಿಡೀಸ್ ಬೆಂಜ್ ML 250 ಬೆಲೆ ಸುಮಾರು 50 ರಿಂದ 60 ಲಕ್ಷ ರು ಬೆಲೆ ಆಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ. 6 ಸಿಲಿಂಡರ್ ಇಂಜಿನ್ ಸಾಮರ್ಥ್ಯದ ಆಡಿ Q5 ಹಾಗೂ BMW x3 ಜೊತೆ ಭರ್ಜರಿ ಪೈಪೋಟಿ ನೀಡಲು ಮರ್ಸಿಡೀಸ್ ಬೆಂಜ್ ಸಿದ್ಧತೆ ನಡೆಸಿದೆ.
ಭಾರತದಲ್ಲೇ ಸಂಪೂರ್ಣವಾಗಿ ಜೋಡಣೆಗೊಳಿಸಲಾಗಿರುವ ಮರ್ಸಿಡೀಸ್ ಬೆಂಜ್ ML 250 ಕಾರು ಅಕ್ಟೋಬರ್ 10ರ ವೇಳೆಗೆ ರಸ್ತೆಗಿಳಿಯಲಿದೆ. ML 250ರ ಮುಂದುವರಿದ ಸರಣಿಯಲ್ಲಿ ML 350 ಕೂಡಾ ಹೊರ ಬರಲು ಸಿದ್ಧವಾಗಿದೆ.


Click it and Unblock the Notifications