ಮುಂದಿನ ತಲೆಮಾರಿನ ಹೊಸ ಸ್ಕಾರ್ಪಿಯೊಗೆ ಸುಸ್ವಾಗತ
ನೂತನ ಸ್ಕಾರ್ಪಿಯೊ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ 2014ಕ್ಕೆ ಆಗಮಿಸಲಿದೆಯಂತೆ. ಹೊಸ ಸ್ಕಾರ್ಪಿಯೊ ಅಭಿವೃದ್ಧಿಪಡಿಸುವ ಪ್ರಾಜೆಕ್ಟಿಗೆ ಕಂಪನಿಯು ಡಬ್ಲ್ಯು105 ಎಂದು ಹೆಸರಿಟ್ಟಿದೆ. ಈ ಪ್ರಾಜೆಕ್ಟ್‌ನ್ನು ಮಹೀಂದ್ರ ಕಂಪನಿಯ ಚೆನ್ನೈ ಸಂಶೋಧನಾ ಘಟಕ "ಮಹೀಂದ್ರ ರಿಸರ್ಚ್ ವ್ಯಾಲಿ"ಯಲ್ಲಿ ಮಾಡಲಾಗುತ್ತಿದೆ.
ಆದರೆ ಹೊಸ ಆವೃತ್ತಿಯ ತೂಕ ಮಾತ್ರ 260 ಕೆಜಿ ಕಡಿಮೆ ಇರಲಿದೆಯಂತೆ. ಫೈಬರ್ ಬಿಡಿಭಾಗಗಳ ಬಳಕೆ ಹೆಚ್ಚಿಸುವ ಮೂಲಕ ಸ್ಕಾರ್ಪಿಯೊ ಬಂಡಿಯನ್ನು ಹಗುರಗೊಳಿಸಲು ಕಂಪನಿ ನಿರ್ಧರಿಸಿದೆ. ಇದರಿಂದ ತುಸು ಮೈಲೇಜ್ ಹೆಚ್ಚಾಗಲಿದೆ.
2014ರ ಹೊಸ ಮಹೀಂದ್ರದಲ್ಲಿ ಹೊಸ ಫೀಚರುಗಳು ಯಾವುದು ಇರಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಸ್ಕಾರ್ಪಿಯೊ ವಿನ್ಯಾಸದಲ್ಲಿ ಯಾವ ರೀತಿಯ ಬದಲಾವಣೆಯಾಗಲಿದೆ ಎಂಬ ಮಾಹಿತಿಯೂ ಲಭ್ಯವಿಲ್ಲ.
ಕಂಪನಿಯು ವಿಶಾಲ ವೀಲ್ ಬೇಸ್ ಪ್ಲಾಟ್ ಫಾರ್ಮ್ ನಿರ್ಮಿಸಲು ಕೂಡ ಯೋಜಿಸಿದೆ. ಇದರಿಂದ ಸ್ಕಾರ್ಪಿಯೊ ಲಗೇಜ್ ಸ್ಥಳಾವಕಾಶ ಹೆಚ್ಚಾಗಲಿದೆ. ಹೊಸ ಸ್ಕಾರ್ಪಿಯೊ ಕಾರಿಗೆ 140 ಹಾರ್ಸ್ ಪವರಿನ, 330 ಎನ್ಎಂ ಟಾರ್ಕ್ ಪವರಿನ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸುವ ನಿರೀಕ್ಷೆಯಿದೆ. ಇದೇ ಎಂಜಿನನ್ನು ಮಹೀಂದ್ರ ಕಂಪನಿಯು ಎಕ್ಸ್‌ಯುವಿ 500 ಕಾರಿಗೆ ಬಳಸಿದೆ.
ಹೈಬ್ರಿಡ್ ಕಾರೊಂದನ್ನು ಅಭಿವೃದ್ಧಿಪಡಿಸಲು ಆರಂಭಿಸಿರುವುದಾಗಿ ಕಂಪನಿಯು ಇತ್ತೀಚೆಗೆ ಹೇಳಿತ್ತು. ಇದು 2015ರಲ್ಲಿ ರಸ್ತೆಗಿಳಿಯಲಿದೆ. ಇದರೊಂದಿಗೆ ಕಂಪನಿಯು ಸ್ಕಾರ್ಪಿಯೊ ಎಸ್‌ಯುವಿಯ ಹೈಬ್ರಿಡ್ ಪ್ರೊಟೊಟೈಪ್ ಆವೃತ್ತಿಯನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.


Click it and Unblock the Notifications









