ದೇಶಾದ್ಯಂತ ಮೇ 4ರಿಂದ ಟಿಂಟೆಡ್ ಗ್ಲಾಸ್ ನಿಷೇಧ

ನವದೆಹಲಿ, ಮೇ 04: ಕಾರುಗಳಲ್ಲಿ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ಶುಕ್ರವಾರ(ಮೇ 04)ರಿಂದ ನಿಷೇಧಿಸಲಾಗಿದೆ. ಇನ್ಮುಂದೆ ಕಾರುಗಳಲ್ಲಿಗೆ ಕಪ್ಪು ಅಥವಾ ಗಾಢ ಬಣ್ಣದ ಟಿಂಟೆಡ್ ಕಾಗದಗಳನ್ನು ಅಂಟಿಸುವಂತಿಲ್ಲ.

ವಾಹನಗಳ ಮುಂಭಾಗದ ಮತ್ತು ಹಿಂಭಾಗದ ಕಿಟಕಿಗಳಲ್ಲಿ ಶೇಕಡ 70ರಷ್ಟು ವೀಕ್ಷಣೆ ಸಾಧ್ಯವಿರಬೇಕು. ಸೈಡ್ ಕಿಟಕಿಗಳಲ್ಲಿ ಕನಿಷ್ಠ ಶೇಕಡ 50ರಷ್ಟು ವೀಕ್ಷಣೆ ಸಾಧ್ಯವಿರಬೇಕು ಎಂದು 1989ರ ವಾಹನ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದನ್ನು ಸಮರ್ಪಕವಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಿಯ ಆಡಳಿತ ಪ್ರದೇಶಗಳು ಕಡ್ಡಾಯವಾಗಿ ಶುಕ್ರವಾರದಿಂದ ಅನುಷ್ಠಾನಗೊಳಿಸುವಂತೆ ಕೋರ್ಟ್ ಸೂಚಿಸಿದೆ.

ಕೋರ್ಟ್ ಕೇವಲ ಕಾರು ಕಂಪನಿಗಳು ಉತ್ಪಾದಿಸುವ ಟಿಂಟ್ ಗ್ಲಾಸ್‌ಗಳಿಗೆ ಓಕೆ ಎಂದಿದೆ. ಅಂದರೆ ಕಾರು ಆಕ್ಸೆಸರಿ ಮಳಿಗೆಗಳಲ್ಲಿ ದೊರಕುವ ಎಲ್ಲಾ ಗಾಢ ಟಿಂಟೆಡ್ ಗ್ಲಾಸ್ ಗಳನ್ನು ಇನ್ಮುಂದೆ ಬಳಸುವಂತಿಲ್ಲ. ಭದ್ರತಾ ದೃಷ್ಟಿಯಿಂದ ಕೇವಲ ಪ್ರಮುಖ ಸರಕಾರಿ ಅಧಿಕಾರಿಗಳಿಗೆ ಮಾತ್ರ ನೂತನ ಕಾನೂನಿನಲ್ಲಿ ವಿನಾಯಿತಿ ನೀಡಿದೆ. ಈ ಕುರಿತು ನೀತಿನಿಯಮಗಳನ್ನು ಹೊರತರುವಂತೆ ರಾಜ್ಯ ಸರಕಾರಗಳಿಗೆ ತಿಳಿಸಲಾಗಿದೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಹೆಚ್ಚಿನ ಅಪರಾಧಗಳು ಗಾಢ ಟಿಂಟೆಡ್ ಗ್ಲಾಸ್ ಹಿಂದೆ ನಡೆಯುತ್ತಿದೆ ಎಂದು ಅವಿಷೇಕ್ ಗೋಯೆಂಕಾ ಸಾರ್ವಜನಿಕ ಹಿತಾಶಕ್ತಿ ದಾವೆ ಹೂಡಿದ್ದರು. ನ್ಯಾಯಮೂರ್ತಿ ಎಸ್ ಚ್ ಕಪಾಡಿಯ, ಎ.ಕೆ. ಪಟ್ನಾಯಿಕ್ ಮತ್ತು ಎಸ್ ಕುಮಾರ್ ಅವರಿದ್ದ ತ್ರಿಸದಸ್ಯ ಪೀಠವು ಎಲ್ಲಾ ರಾಜ್ಯಗಳು ಅನುಮತಿ ಇರುವುಷ್ಟೇ ಟಿಂಟೆಡ್ ಗ್ಲಾಸ್ ಬಳಸುವ ಕಾನೂನು ಅನುಷ್ಠಾನಗೊಳಿಸುವಂತೆ ರಾಜ್ಯಗಳಿಗೆ ಆದೇಶಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಸಚಿವ ಆರ್. ಅಶೋಕ್ ಏನು ಹೇಳಿದ್ರು?

More from DriveSpark

Article Published On: Friday, May 4, 2012, 16:59 [IST]
English summary
As per the Supreme Court orders, from today (4th May 2012) onwards, one should not use any kind of sun film or tinting on their car windows. According to the motor vehicle rules, a car's windscreen and rear glass should have 70 per cent light transmittance and reflectance, whereas the window panes should have 50 per cent light reflectance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+