ಒಬಾಮ ಕಾರು ಮಾರಾಟಕ್ಕಿದೆ.. ನೀವು ತಗೋತೀರಾ?

ಈಗ ಹರಾಜಾಗುತ್ತಿರುವ ಕಾರಿನ ಸುದ್ದಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರದ್ದು. ಬರಾಕ್ ಒಬಾಮಾ ಭೋಗ್ಯಕ್ಕೆ ಪಡೆದಿದ್ದ ಗ್ರೇ ಕ್ಲಿಸ್ಲರ್ 300ಸಿ ಕಾರನ್ನು ಅನಾಮಿಕ ಮಾಲೀಕರೊಬ್ಬರು eBay ತಾಣದಲ್ಲಿ ಹರಾಜಿಗಿಟ್ಟಿದ್ದಾರೆ. ಇದರ ಬುಕ್ಕಿಂಗ್ ಮೌಲ್ಯ 16,500 ಡಾಲರ್. ಕನಿಷ್ಠ ಹರಾಜು ಮೊತ್ತ 10 ಲಕ್ಷ ಡಾಲರ್.
ಈ ಕುರಿತು ಒಬಾಮಾ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಇದು 2005ನೇ ಇಸವಿಯ Chrysler 300C ಕಾರು. ಬರಾಕ್ ಒಬಾಮಾ ಈ ಕಾರನ್ನು 2004ರಿಂದ 2007ನೇ ಇಸವಿಯವರೆಗೆ ಪ್ರಯಾಣಕ್ಕೆ ಬಳಸಿದ್ದರಂತೆ. ಈ ಕಾರನ್ನು ಚಿಕಾಗೋ ಮೂಲದ ವ್ಯಕ್ತಿಯೊಬ್ಬರು ಇಬೇನಲ್ಲಿ ಮಾರಾಟಕ್ಕಿಟ್ಟಿದ್ದಾರೆ.
ಈ ಹರಾಜು ಪ್ರಕ್ರಿಯೆಗೂ ಮುಂಬರುವ ಚುನಾವಣೆಗೂ ಯಾವುದೇ ಸಂಬಂಧವಿಲ್ಲವೆಂಬ ವಾಕ್ಯ ಕೂಡ ಅಲ್ಲಿದೆ. ಇದಕ್ಕೆ ಬಂದ ಕಾಮೆಂಟ್ ಒಂದರಲ್ಲಿ "ಚುನಾವಣೆ ವಿಷ್ಯ ಬಿಟ್ಟುಬಿಡೋಣ. ಆದರೆ ಈ ಕಾರಿನ ಮೌಲ್ಯ ಹತ್ತು ಲಕ್ಷ ಡಾಲರ್ ಇದೆಯಾ? ಎಂದು ಒಬ್ಬರು ಪ್ರಶ್ನಿಸುತ್ತಾರೆ. ಇಬೇ ಕಾರು ಮಾರಾಟ ವಿಭಾಗದಡಿಯಲ್ಲಿ ಕಾಮೆಂಟುಗಳು, ಪ್ರಶ್ನೆಗಳು ಉತ್ತರಗಳು ಬೆಳೆದಿವೆ. ಒಬಾಮಾ ಕಾರು ಅಂತಿಮವಾಗಿ ಎಷ್ಟು ಡಾಲರಿಗೆ ಮಾರಾಟವಾಗುತ್ತದೆ ಕಾದು ನೋಡೋಣ.


Click it and Unblock the Notifications








