9,999 ರು.ಗೆ ಸ್ಕಾರ್ಪಿಯೊ ಮನೆಗೆ ಕೊಂಡೊಯ್ಯಿರಿ!
ಬಿಎಸ್4 ಆಯ್ಕೆಯ ಸ್ಕಾರ್ಪಿಯೊ ದರ ಸುಮಾರು 7.55 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಕಂಪನಿಯು ನೂತನ ಪ್ಯಾಕೇಜ್ ಕುರಿತು ತನ್ನ ವೆಬ್ ತಾಣದಲ್ಲಿ ನೂತನ ಜಾಹೀರಾತನ್ನೂ ಪ್ರಕಟಿಸಿದೆ. ಅಲ್ಲೇ ಬುಕ್ಕಿಂಗ್ ಅಥವಾ ಟೆಸ್ಟ್ ಡ್ರೈವ್ ಅರ್ಜಿ ತುಂಬಿಸಬಹುದಾಗಿದೆ.
ಮಹೀಂದ್ರ ಕಂಪನಿಯ ನೂತನ ಸ್ಕಾರ್ಪಿಯೊ ಶಕ್ತಿಶಾಲಿ ಮತ್ತು ದಕ್ಷತೆಗೆ ಹೆಸರುವಾಸಿ. ಇದು ಎಂ2ಡಿಐಸಿಆರ್ ಎಂಜಿನ್ ಹೊಂದಿದ್ದು, ಪ್ರತಿಲೀಟರಿಗೆ ಸರಿಸುಮಾರು 14 ಕಿ.ಮೀ.ಯಷ್ಟು ಮೈಲೇಜ್ ನೀಡುತ್ತದೆ.
ಬಿಎಸ್4 ಇಂಗಾಲ ಮಾನದಂಡಗಳಿಗೆ ಅನುಗುಣವಾಗಿ ಇದು ಹೈಬ್ರಿಡ್ ತಂತ್ರಜ್ಞಾನವನ್ನೂ ಅಲವಡಿಸಿಕೊಂಡಿದೆ. ಹೀಗಾಗಿ ಇದು ಕೊಂಚ ಪರಿಸರ ಸ್ನೇಹಿ ಕೂಡ ಹೌದು. ಕೇವಲ ಬೆರಗುಗೊಳಿಸುವ ಫೀಚರುಗಳು ಮಾತ್ರವಲ್ಲದೇ ಹಲವು ಪ್ರಮುಖ ಫೀಚರುಗಳಿಂದಲೂ ಸ್ಕಾರ್ಪಿಯೊ ಇಷ್ಟವಾಗುತ್ತದೆ.
ಮಹೀಂದ್ರ ಸ್ಕಾರ್ಪಿಯೊ ವಿಶೇಷತೆ
* ಎಂ2ಡಿಐಸಿಆರ್ ಎಂಜಿನ್, 75 ಹಾರ್ಸ್ ಪವರ್
* ಎಆರ್ಎಐನಿಂದ ಮಾನ್ಯತೆ ಪಡೆದ 14 ಕಿ.ಮೀ. ಮೈಲೇಜ್
* ಇಂಧನ ದಕ್ಷತೆ ಹೆಚ್ಚಿಸಲು ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ
* ಕೇವಲ 11.2 ಸೆಕೆಂಡಿನಲ್ಲಿ 0-60 ಕಿ.ಮೀ. ವೇಗಪಡೆದುಕೊಳ್ಳಬಹುದು
* ಡಿಜಿಟಲ್ ಇಮೊಬಿಲೈಝರ್
* ಪವರ್ ಸ್ಟಿಯರಿಂಗ್
* ಹೀಟಿಂಗ್, ಎಸಿ ಮತ್ತು ವೆಂಟಿಲೇಷನ್
* ಸುರಕ್ಷತೆಯ ಸವಾರಿಗೆ ನೆರವಾಗುವ ವಿನ್ಯಾಸ
* ಮಕ್ಕಳ ಸವಾರಿಗೆ ಸೂಕ್ತವಾದ ಚೈಲ್ಡ್ ಲಾಕ್
* ದೆಹಲಿ ಎಕ್ಸ್ ಶೋರೂಂ ಆರಂಭಿಕ ದರ: 7.55 ಲಕ್ಷ ರುಪಾಯಿ.


Click it and Unblock the Notifications









