ಪೆಟ್ರೋಲ್ ಕಾರುಗಳಿಗೆ ಈಗ ಆಫರುಗಳ ಸುರಿಮಳೆ

ಪೆಟ್ರೋಲ್ ಕಾರು ಖರೀದಿಸುವರಿಗೆ ಈಗ ಸಾಕಷ್ಟು ಚೌಕಾಶಿ ಮಾಡಲು ಅವಕಾಶವಿದೆ. ಕಾರು ಡೀಲರುಗಳು ಪೆಟ್ರೋಲ್ ಕಾರು ಖರೀದಿಗೆ ಈಗ ಸಾಕಷ್ಟು ವಿನಾಯಿತಿ, ಆಫರುಗಳು, ಉಚಿತ ಸೇವೆ ಮತ್ತು ಉಡುಗೊರೆಗಳನ್ನು ಘೋಷಿಸುತ್ತಿದ್ದಾರೆ.

ಶೋರೂಂಗಳಿಗೆ ಪ್ರವೇಶಿಸುವ ಗ್ರಾಹಕರಿಗೆ ಕಾರು ಕಂಪನಿಗಳು ಚಿನ್ನದ ನಾಣ್ಯ, ಎಲ್ಇಡಿ ಟಿವಿ, ಉಚಿತ ಆಕ್ಸೆಸರಿಗಳ ಆಮೀಷ ನೀಡುತ್ತಿವೆ. ಉದಾಹರಣೆಗೆ ಮಾರುತಿ ಸುಜುಕಿ ಕಂಪನಿಯು ಪೆಟ್ರೋಲ್ ಕಾರುಗಳಾದ ಆಲ್ಟೊ ಮತ್ತು ವ್ಯಾಗನಾರಿಗೆ 20-25 ಸಾವಿರ ವಿನಾಯಿತಿ ನೀಡುತ್ತಿದೆ.

ಹೋಂಡಾ, ಟೊಯೊಟಾ ಮತ್ತು ಷೆವರ್ಲೆ ಕಾರು ಕಂಪನಿಗಳೂ ಕೂಡ ಪೆಟ್ರೋಲ್ ಕಾರುಗಳಿಗೆ ಇಂತಹ ಹಲವು ಆಫರುಗಳನ್ನು ನೀಡುತ್ತಿವೆ. ಆದರೆ ಟೊಯೊಟಾ ಮೋಟರ್ಸ್ ಕಂಪನಿಯು ಪೆಟ್ರೋಲ್ ಕಾರುಗಳಿಗೆ ದರ ವಿನಾಯಿತಿ ನೀಡಿಲ್ಲ. ಆದರೆ ಉಚಿತ ಸರ್ವಿಸ್ ಮತ್ತು ಉಚಿತ ವಿಮೆ ಆಫರನ್ನು ನೀಡಿದೆ. ಅಂದ್ರೆ ಎಟಿಯೋಸ್, ಎಟಿಯೋಸ್ ಲಿವಾ ಮತ್ತು ಕೊರೊಲಾ ಆಲ್ಟಿಸ್ ಪೆಟ್ರೋಲ್ ಕಾರುಗಳಿಗೆ ಸದ್ಯ ಸೇವೆ ಮತ್ತು ವಿಮೆ ಉಚಿತ.

ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವ ಕಾರಣ ಪೆಟ್ರೋಲ್ ಕಾರುಗಳ ಮಾರಾಟ ಹೆಚ್ಚಿಸುವುದು ಡೀಲರುಗಳಿಗೆ ಸವಾಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಪೆಟ್ರೋಲ್ ಕಾರುಗಳ ಮಾರಾಟ ಗಮನಾರ್ಹವಾಗಿ ಇಳಿಕೆ ಕಾಣುತ್ತಿದೆ.

ಹೋಂಡಾ ಕಂಪನಿಯು ಬ್ರಿಯೊ ಸಣ್ಣಕಾರುಗಳಿಗೆ ಆಕರ್ಷಕ ಸಾಲದ ಆಮೀಷ ನೀಡುತ್ತಿದೆ. ಬ್ರಿಯೊ ಕಾರಿಗೆ ಅತ್ಯಧಿಕ ಬೇಡಿಕೆಯಿರುವ ಸಮಯದಲ್ಲೂ ಕಂಪನಿಯು ಸ್ಕೀಮ್ ನೀಡುತ್ತಿರುವುದು ಕೊಂಚ ಅಚ್ಚರಿಯ ವಿಷಯ. ಹ್ಯುಂಡೈ ಕೂಡ ಇಯಾನ್ ಕಾರಿಗೆ 10 ಸಾವಿರ ರುಪಾಯಿ ಮತ್ತು ಸ್ಯಾಂಟ್ರೊ ಕಾರಿಗೆ 15 ಸಾವಿರ ರು. ವಿನಿಮಯ ಬೋನಸ್ ಆಫರ್ ನೀಡಿದೆ.

ಪ್ರಸಕ್ತ ವರ್ಷ ಪೆಟ್ರೋಲ್ ಕಾರುಗಳ ಮಾರಾಟ ಇಳಿಕೆ ಕಾಣಲಿದೆ. ಮಾರುತಿ ಸುಜುಕಿ ಕಂಪನಿಯು ಪೆಟ್ರೋಲ್ ಕಾರುಗಳ ಮಾರಾಟ ಶೇಕಡ 20ರಷ್ಟು ಇಳಿಕೆ ಕಾಣುವುದಾಗಿ ಅಂದಾಜಿಸಿದೆ. ಆಲ್ಟೊ, ವ್ಯಾಗನಾರ್, ಝೆನ್ ಎಸ್ಟಿಲೊ ಕಾರುಗಳು ಡೀಸೆಲ್ ಆಯ್ಕೆಯಗಳಲ್ಲಿ ದೊರಕುವುದಿಲ್ಲ. ಹೀಗಾಗಿ ಈ ಕಾರುಗಳ ಮಾರಾಟ ಹೆಚ್ಚಿಸುವುದು ಕಂಪನಿಗೆ ಅನಿವಾರ್ಯವಾಗಿದೆ.

More from DriveSpark

Article Published On: Friday, April 27, 2012, 11:03 [IST]
English summary
Are you planning to buy a new car? If you are not very particular about buying a petrol car or a diesel one, then this is possibly the best time to buy a petrol car and at a bargain too. Carmakers and dealers are offering huge offers, discounts, freebies along with free services to push the sales of petrol cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+