ರೆನೊ 800ಸಿಸಿ ಕಾರು: ಆಲ್ಟೊ, ಇಯಾನಿಗೆ ಸವಾಲ್

ಮುಂಬೈ, ಆ 1: ಮಾರುತಿ ಸುಜುಕಿ ಕಂಪನಿಯ ಆಲ್ಟೊ, ಹ್ಯುಂಡೈ ಇಂಡಿಯಾ ಕಂಪನಿಯ ಇಯಾನ್ ಮತ್ತು ಷೆವರ್ಲೆ ಸ್ಪಾರ್ಕಿಗೆ ಸವಾಲ್ ಹಾಕುವಂತಹ ಸಣ್ಣಕಾರೊಂದನ್ನು ಫ್ರಾನ್ಸಿನ ಕಾರು ತಯಾರಿಕಾ ಕಂಪನಿ ರೆನೊ ಅಭಿವೃದ್ಧಿಪಡಿಸುತ್ತಿದೆ. ಈ ಮೂಲಕ ದೇಶದ ಕಾರು ಮಾರುಕಟ್ಟೆಯ ಬಹುಪಾಲು ಆಕ್ರಮಿಸಿಕೊಂಡಿರುವ ಸಣ್ಣಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ರೆನೊ ಉದ್ದೇಶಿಸಿದೆ.

ರೆನೊ ಕಂಪನಿಯ ಅಗ್ಗದ ಕಾರು ಸ್ಪೆಷಲಿಸ್ಟ್ ಗಿರಾರ್ಡ್ ಡೆಟೊರ್ ಬೆಟ್ ಈ ಸಣ್ಣಕಾರನ್ನು ಅಭಿವೃದ್ಧಿಪಡಿಸುವ ಕೆಲಸ ಆರಂಭಿಸಿದೆ. ನೂತನ ಸಣ್ಣಕಾರು 800ಸಿಸಿ ಎಂಜಿನ್ ಹೊಂದಿರಲಿದೆ ಎನ್ನುವುದನ್ನು ಮೂಲಗಳು ಖಚಿತಪಡಿಸಿವೆ.

ರೆನೊ 800ಸಿಸಿ ಕಾರು ಪ್ರತಿಲೀಟರಿಗೆ 20 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುವ ನಿರೀಕ್ಷೆಯಿದೆ. ಎಂಟ್ರಿ ಲೆವೆಲ್ ಸೆಗ್ಮೆಂಟಿಗೆ ಆಗಮಿಸಲಿರುವ ಈ ಕಾರಿನ ದರ 2 ಲಕ್ಷ ರು.ನಿಂದ 4 ಲಕ್ಷ ರು.ವಿನೊಳಗೆ ಇರುವ ನಿರೀಕ್ಷೆಯಿದೆ. ನೂತನ ಕಾರನ್ನು ಚೆನ್ನೈ ಘಟಕದಲ್ಲಿ ಕಂಪನಿಯು ಉತ್ಪಾದಿಸುವ ಸಾಧ್ಯತೆಯಿದೆ. ಅಂದಹಾಗೆ, ನೂತನ ಕಾರು 2014-15ರ ವೇಳೆಗೆ ರಸ್ತೆಗಿಳಿಯುವ ಸೂಚನೆಯಿದೆ.

ರೆನೊ ಪಲ್ಸ್ ಕಾರಿಗಿಂತ ಕೆಳಹಂತದ ಕಾರೊಂದನ್ನು ಭವಿಷ್ಯದಲ್ಲಿ ಪರಿಚಯಿಸಲಿದ್ದೇವೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾರಿನ ಟೆಕ್ ಮಾಹಿತಿ, ವಿನ್ಯಾಸ ವಿಚಾರಗಳನ್ನು ಬಹಿರಂಗಪಡಿಸಲು ಇದು ಸೂಕ್ತ ಸಮಯವಲ್ಲವೆಂದು ಕಂಪನಿ ಹೇಳಿದೆ.

Article Published On: Wednesday, August 1, 2012, 9:47 [IST]
English summary
Renault is developing a new small car that is expected to be its new entry level car in India. This new Renault car is expected to be powered by a 800cc engine that can deliver a mileage of 20kmpl. The car is being developed under the project name A Entry by a team lead by Gerard Detourbet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+