ಬಿಎಂಡಬ್ಲ್ಯು ಇಂಡಿಯಾಕ್ಕೆ ಸಚಿನ್ ತೆಂಡೂಲ್ಕರ್ ರಾಯಭಾರಿ

ಕ್ರಿಕೆಟ್ ಅಭಿಮಾನಿಗಳ ಪಾಲಿನ ನೆಚ್ಚಿನ ದೇವರು ಸಚಿನ್ ತೆಂಡೂಲ್ಕರ್ ಕಾರು ಅಭಿಮಾನಿಗಳಿಗೂ ಪುಳಕ ತರಲಿದ್ದಾರೆ. ಶೀಘ್ರದಲ್ಲಿ ಬಿಎಂಡಬ್ಲ್ಯು ಇಂಡಿಯಾ ಬ್ರಾಂಡ್ ರಾಯಭಾರಿಯಾಗಿ ಒಪ್ಪಂದವೊಂದಕ್ಕೆ ಸಚಿನ್ ರುಜು ಹಾಕಲಿದ್ದಾರೆ. ಫಿಯೆಟ್ ಫಾಲಿಯೊ ಕಾರಿಗೆ ಈ ಹಿಂದೆ ಸಚಿನ್ ರಾಯಭಾರಿಯಾಗಿದ್ದರು.

ಬಿಎಂಡಬ್ಲ್ಯು ಇಂಡಿಯಾ ಜೊತೆ ನೂತನ ಡೀಲಿಗೆ ಜುಲೈ 27ರಂದು ಸಚಿನ್ ಸಹಿ ಹಾಕುವ ನಿರೀಕ್ಷೆಯಿದೆ. ಅವತ್ತು ಶುಭದಿನವೇ ಎಂದು ಕೇಳದಿರಿ. ಅಂದು ಬಿಎಂಡಬ್ಲ್ಯು ಕಂಪನಿಯ ಬಹುನಿರೀಕ್ಷಿತ ನೂತನ ಎಫ್30 3 ಸೀರಿಸ್ ಕಾರು ಅನಾವರಣಗೊಳ್ಳಲಿದೆ. ಅದೇ ಕಾರ್ಯಕ್ರಮದಲ್ಲಿ ರಾಯಭಾರಿ ಒಪ್ಪಂದಕ್ಕೆ ತೆಂಡೂಲ್ಕರ್ ಅಂಕಿತ ಹಾಕುವ ಸಾಧ್ಯತೆ ನಿಚ್ಚಳವಾಗಿದೆ.

ಜಗತ್ತಿನ ಜನಪ್ರಿಯ ಐಷಾರಾಮಿ ಕಾರು ಕಂಪನಿ ಬಿಎಂಡಬ್ಲ್ಯುಗೆ ಜಾಗತಿಕವಾಗಿ ತನ್ನ ಆಟದಿಂದ ಅಚ್ಚುಮೆಚ್ಚಾಗಿರುವ ಸಚಿನ್ ಸೂಕ್ತ ಆಯ್ಕೆ. ಒಂದು ಮೂಲದ ಪ್ರಕಾರ ಬಿಎಂಡಬ್ಲ್ಯು ನೂತನ ಕಾರಿನ ಮೊದಲ 100 ಗ್ರಾಹಕರಿಗೆ ಸ್ವತಃ ಸಚಿನ್ ಕೀಲಿಕೈ ಹಸ್ತಾಂತರಿಸಲಿದ್ದಾರಂತೆ.

ಸಚಿನ್ ತೆಂಡೂಲ್ಕರಿಗೆ ಕಾರುಗಳೆಂದರೆ ಅಚ್ಚುಮೆಚ್ಚು. ಫೆರಾರಿ 360 ಮಡೆನಾ ಸೇರಿದಂತೆ ಹಲವು ಹೈಎಂಡ್ ಕಾರುಗಳಿಗೆ ಮಾಲೀಕರಾಗಿದ್ದಾರೆ. ಫೆರಾರಿ 360 ಕಾರು ಫೆರಾರಿ ಕಿ ಸವಾರಿ ಚಿತ್ರದಲ್ಲಿ ಬಳಕೆಯಾಗಿತ್ತು.

ಸಚಿನ್ ಗ್ಯಾರೇಜಿನಲ್ಲಿ ಹಲವು ಬಿಎಂಡಬ್ಲ್ಯು ಕಾರುಗಳು ಸಹ ಇವೆ. ಅವರ ಬಳಿ ಬಿಎಂಡಬ್ಲ್ಯು ಇ60 ಕಾರಿದೆ. ಹೆಚ್ಚಾಗಿ ಬಿಎಂಡಬ್ಲ್ಯು ಎಕ್ಸ್5 ಕಾರನ್ನು ದಿನನಿತ್ಯದ ಪ್ರಯಾಣಕ್ಕೆ ಬಳಸುತ್ತಾರೆ. ಸಚಿನ್ ತೆಂಡೂಲ್ಕರ್ ಇ90 3 ಸೀರಿಸ್ ಕಾರನ್ನು ಅವರ ಪತ್ನಿ ಅಂಜಲಿ ಸದ್ಯ ಡ್ರೈವ್ ಮಾಡುತ್ತಿದ್ದಾರೆ.

ಫೆರಾರಿ, ಬಿಎಂಡಬ್ಲ್ಯು ಮಾತ್ರವಲ್ಲದೆ ಮರ್ಸಿಡಿಸ್, ಪೊರ್ಷ್ ಕಾರುಗಳೂ ಸಚಿನ್ ತೆಂಡೂಲ್ಕರಿಗೆ ಅಚ್ಚುಮೆಚ್ಚು. ಈ ಕಂಪನಿಯ ಪ್ರಮುಖ ಮಾಡೆಲ್ ಕಾರುಗಳು ಅವರಲ್ಲಿದೆ. ಅದರಲ್ಲಿ ಮರ್ಸಿಡಿಸ್ ಕಂಪನಿಯ ಎಸ್ಎಲ್ಎಸ್ ಎಎಂಜಿ ಕಾರು ಅವರಿಗಿಷ್ಟ. ಅದರೊಂದಿಗೆ ಮರ್ಸಿಡಿಸ್ ಸಿ230 ಕಾರಲ್ಲೂ ಆಗಾಗ ಸವಾರಿ ಹೊರಡುತ್ತಾರೆ. ಲ್ಯಾಂಡ್ ಕ್ರೂಷರ್ ಕೂಡ ಅವರ ನೆಚ್ಚಿನ ಕಾರು.

ಅಂದಹಾಗೆ ಬಿಎಂಡಬ್ಲ್ಯು ಎಫ್30 3 ಸೀರಿಸ್ ಕಾರು ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಡ್ರೈವ್ ಸ್ಪಾರ್ಕ್ ಭಾಗವಹಿಸಲಿದೆ. ಜುಲೈ 27ರಂದು ಕಾರು ಬಿಡುಗಡೆ ನೇರ ಪ್ರಸಾರ ಮತ್ತು ಸಚಿನ್ ಡೀಲ್ ಕುರಿತು ಕ್ಷಣಕ್ಷಣದ ಮಾಹಿತಿ ನೀಡಲಿದ್ದೇವೆ. ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.

ಓದಿ: ಭಾರತದ ಕ್ರಿಕೆಟಿಗರಲ್ಲಿ ಎಷ್ಟೆಷ್ಟು ಕಾರುಗಳಿವೆ ಗೊತ್ತಾ?

More from DriveSpark

Article Published On: Tuesday, July 24, 2012, 14:40 [IST]
English summary
Indian cricketer Sachin Tendulkar will sign on as BMW India’s first brand ambassador. Sachin Cars. German car maker BMW to rope with Indian cricket legend Sachin Tendulkar as a brand ambassador soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+