ಬಾಲಿವುಡ್ ಬಾದಶಾ ಶಾರೂಖ್ ಖಾನ್ ಕಾರುಲೋಕ
ವಾಂಖೆಡೆ ಸ್ಟೇಡಿಯಂನಲ್ಲಿ ಜಗಳ ಮಾಡಿ ಸುದ್ದಿಯಲ್ಲಿರುವ ಶಾರೂಖ್ ಖಾನ್ ಕುರಿತು ಅಭಿಮಾನಿಗಳು "ಅಯ್ಯೋ ಪಾಪಾ" ಎನ್ನುತ್ತಿದ್ದಾರೆ. ಹಾಗಂತ ಅವರೇನೂ ತುಂಬಾ ಮೃದುಸ್ವಭಾವದವರು ಅಲ್ಲ. ಒಮ್ಮೆಮ್ಮೆ ಒರಟರಾಗಿ ಶಾರೂಖ್ ಖಾನ್ ವರ್ತಿಸುತ್ತಾರೆ. ಅದರಲ್ಲೂ ಹೆಚ್ಚು ಹಾರ್ಸ್ ಪವರ್ ಇರುವ ಕಾರುಗಳನ್ನು ಡ್ರೈವ್ ಮಾಡುವಾಗಂತೂ ಶತಒರಟನಾಗಿ ವರ್ತಿಸುತ್ತಾರಂತೆ. ಇಲ್ಲಿದೆ ಶಾರೂಖ್ ಕಾರುಲೋಕ.

ಬಾಲಿವುಡ್ ಬಾದಶಾ ಶಾರೂಖ್ ಖಾನ್‌ಗೆ ಕಾರುಗಳೆಂದರೆ ಇಷ್ಟ. ಅವರು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಮಾರುತಿ ವ್ಯಾನ್ ಹೊಂದಿದ್ರಂತೆ. ಆದರೆ ಈಗ ಶಾರೂಖ್ ಬಳಿ ಕೋಟಿ ಕೋಟಿ ರುಪಾಯಿಗಳ ಐಷಾರಾಮಿ ಕಾರುಗಳಿವೆ. ಸದ್ಯ ಅವರಲ್ಲಿರುವ ಅಗ್ಗದ ಕಾರೆಂದರೆ ಮಿಟ್ಸುಬಿಸಿ ಪಜೆರೊ. ಇದರ ದರ ಸುಮಾರು 20 ಲಕ್ಷ ರುಪಾಯಿ.
ಶಾರೂಖ್ ಖಾನ್ ಇತ್ತೀಚೆಗೆ ಆಡಿ ಎ6 ಕಾರು ಖರೀದಿಸಿದ್ದರು. ಆದರೆ ಈ ಕಾರು ಖರೀದಿಸಿದ್ದು ಸ್ವಯಂ ಬಳಕೆಗಾಗಿ ಅಲ್ಲ. ತನ್ನ ಮಕ್ಕಳಿಗೆ ಪ್ರಯಾಣ ಮಾಡಲು(ಆಡಲು) ಆಡಿ ಕಾರನ್ನೇ ನೀಡಿದ್ದ ಶ್ರೀಮಂತ ವ್ಯಕ್ತಿ ಈತ. ಮಕ್ಕಳಾದ ಆರ್ಯನ್ ಮತ್ತು ಸುಹಾನರಿಗಾಗಿ ಆಡಿ ಎ6 ಖರೀದಿಸಿದ್ರು.
ಶಾರೂಖ್ ಖಾನ್ ಬಳಿ ಇರುವ ಕೋಟಿ ದರದ ದುಬಾರಿ ಕಾರುಗಳೂ ಇವೆ. ತನ್ನ ಐಷಾರಾಮಿ ಪ್ರಯಾಣಕ್ಕೆ ಸುಮಾರು 1.25 ಕೋಟಿ ರುಪಾಯಿಯ ಬಿಎಂಡಬ್ಲ್ಯು 7 ಸೀರಿಸ್ ಕಾರು ಬಳಸುತ್ತಾರೆ. ಒಮ್ಮೊಮ್ಮೆ 85 ಲಕ್ಷ ರುಪಾಯಿಯ ಬಿಎಂಡಬ್ಲ್ಯು 6 ಸೀರಿಸ್ ಕಾರು ಬಳಸುತ್ತಾರೆ.
ಇವರ ಕಾರು ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಶಾರೂಖ್ ಖಾನ್ ಬಳಿ ಟೊಯೊಟಾ ಲ್ಯಾಂಡ್ ಕ್ರೂಷರ್ ಕಾರಿದೆ. ಇದರ ದರ ಒಂದು ಕೋಟಿ ರುಪಾಯಿಗೆ ಹತ್ತಿರವಿದೆ. ಜೊತೆಗೆ ನೀಲಿ ಬಣ್ಣದ ರೋಲ್ಸ್ ರಾಯ್ಸ್ ಕಾರಿನ ಮಾಲಿಕ ನಮ್ಮ ಬಾಲಿವುಡ್ ಬಾದಶಾ ಶಾರೂಖ್ ಖಾನ್.
ಓದಿ: ಸವಾರಿ ಹುಚ್ಚುಕುದುರೆಯೇರಿದ ಇಬ್ಬರು ಖಾನ್


Click it and Unblock the Notifications








