ಹೈಹೀಲ್ಡ್ ಧರಿಸಿ ಸವಾರಿ ಹೊರಡುವಿರಾ, ಜೋಕೆ!
ಹೈಹೀಲ್ಡ್ ಧರಿಸಿ ನಡೆಯುವ ಚಾಕಚಕ್ಯತೆ ಎಲ್ಲಾ ಹೆಣ್ಮಕ್ಲಿಗೆ ಸುಲಭವಾಗಿ ಒಲಿಯುವುದಿಲ್ಲ. ಹೈಹೀಲ್ಡ್ ಧರಿಸಿ ಎಡವಿಬಿದ್ದವರೆಷ್ಟೋ, ಕೈಕಾಲು ಮುರಿದುಕೊಂಡವರೇಷ್ಟೋ ಲೆಕ್ಕಇಟ್ಟವರಿಲ್ಲ.
ವಾಹನ ವೆಬ್ ಸೈಟಿಗೂ ಹೈಹೀಲ್ಡ್ ಪಾದುಕೆಗೂ ಎತ್ತಣಿದೆತ್ತಣ ಸಂಬಂಧವಯ್ಯ ಎಂದು ಕೇಳದಿರಿ? ಹೈಹೀಲ್ಡ್ ಧರಿಸಿ ವಾಹನ ಚಾಲನೆ ಮಾಡುವ ನಾರಿಯರು ಹೆಚ್ಚಿನ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆಂದು ನೂತನ ಅಧ್ಯಯನ ತಿಳಿಸಿದೆ. ಹೀಗಾಗಿ ಅಪಘಾತಕ್ಕೆ ಹೈಹೀಲ್ಡ್ ಕೂಡ ಕಾರಣ ಎನ್ನಬಹುದು.
ಇಂಗ್ಲೆಂಡ್ ಮೂಲದ ರೋಡ್ ಸೇಫ್ಟಿ ಚಾರಿಟಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರಿಂದ ಉಂಟಾಗುವ ವಾಹನ ಅಪಘಾತಗಳಿಗೆ ಹೈಹೀಲ್ಡ್ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಶೇಕಡ 40ರಷ್ಟು ಮಹಿಳೆಯರು ವಾಹನ ಚಾಲನೆ ಮಾಡುವಾಗ ಹೈಹೀಲ್ಡ್ ಬಳಸುತ್ತಾರೆ ಎಂದು ಸಮೀಕ್ಷೆ ಕಂಡುಕೊಂಡಿದೆ. ಎತ್ತರದ ಹಿಮ್ಮಡಿಯಿರುವ ಪಾದುಕೆ ಧರಿಸಿ ಬ್ರೇಕ್, ಆಕ್ಸಿಲರೇಟ್, ಕ್ಲಚ್ ತುಳಿಯದಿರಿ ಎಂದು ಹೆಣ್ಮಕ್ಲಿಗೆ ಸೇಫ್ಟಿ ಚಾರಿಟಿ ಕಿವಿಮಾತು ಹೇಳಿದೆ.
ಕನ್ ಫ್ಯೂಸ್ಡ್ ಡಾಟ್ ಕಾಮ್ ತಾಣದ ಪ್ರಕಾರ ಶೇಕಡ 39ರಷ್ಟು ಮಹಿಳೆಯರು ಪ್ಲಿಪ್ ಪ್ಲಾಪ್ ಪಾದುಕೆ ಬಳಸುತ್ತಾರೆ. ಶೇಕಡ 16ರಷ್ಟು ಹೆಣ್ಮಕ್ಲು ಸ್ಲಿಪ್ಪರ್ ಧರಿಸುತ್ತಾರೆ ಮತ್ತು ಶೇಕಡ 24ರಷ್ಟು ಮಹಿಳೆಯರು ಖಾಲಿ ಕಾಲಲ್ಲಿ ಡ್ರೈವಿಂಗ್ ಮಾಡುತ್ತಾರೆಂದು ಮಾಹಿತಿ ನೀಡಿದೆ.
ಹೀಗಾಗಿ "ಹೈಹೀಲ್ಡ್ ಧರಿಸಿ ವಾಹನ ಚಾಲನೆ ಮಾಡದಿರಿ" ಎಂದು ಸಮಸ್ತ ಮಹಿಳೆಯರನ್ನು ಕನ್ನಡ ಡ್ರೈವ್ ಸ್ಪಾರ್ಕ್ ಕೇಳಿಕೊಳ್ಳುತ್ತಿದೆ. ಅಪಘಾತಕ್ಕೆ ಹೈಹೀಲ್ಡ್ ಪಾದುಕೆಯೇ ಕಾರಣ. ಹ್ಯಾಪಿ ಜರ್ನಿ.


Click it and Unblock the Notifications









