ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಬಿಡುಗಡೆ

By Nagaraja

ಈ ಹಬ್ಬದ ಸೀಸನಿನಲ್ಲಿ ಕಾರುಗಳ ಬಿಡುಗಡೆ ಮೇಳ ಬಹಳ ಜೋರಾಗಿಯೇ ಸಾಗುತ್ತಿದೆ. ಕಳೆದ ದಿನವಷ್ಟೇ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿಯಿಂದ ಆಲ್ಟೊ 800 ಬಿಡುಗಡೆಗೊಂಡಿತ್ತು. ಇದರ ಬೆನ್ನಲ್ಲೇ ಟಾಟಾ ಮೋಟಾರ್ಸ್ ಕೂಡಾ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಬಿಡುಗಡೆ ಮಾಡಿದೆ.

ದರ ಮಾಹಿತಿ:

  • ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಪೆಟ್ರೋಲ್ ಆವೃತ್ತಿ ದರ: 5.70 ಲಕ್ಷ ರು.
  • ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಡೀಸೆಲ್ ಆವೃತ್ತಿ ದರ: 6.49 ಲಕ್ಷ ರು.

ನೂತನ ಗ್ರಾಹಕರನ್ನು ಆಕರ್ಷಿಸುವ ನಂಬಿಕೆಯನ್ನು ಕಂಪನಿ ಹೊಂದಿದ್ದು, ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಮಹೀಂದ್ರ ವೆರಿಟೊ ಹಾಗೂ ಟೊಯೊಟಾ ಇಟಿಯೋಸ್ ಆವೃತ್ತಿಗಳಿಗೆ ಕಠಿಣ ಪೈಪೋಟಿ ನೀಡುವ ಸಾಧ್ಯತೆಯಿದೆ. ದೇಶದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಕಾರು ಸಿಗಲಿದೆ. ಇದರಲ್ಲಿ ಪೆಟ್ರೋಲ್ ವೆರಿಯಂಟ್ ಆರಂಭಿಕ ದರ 5.70 ಲಕ್ಷ ರುಪಾಯಿಗಳಾಗಿದ್ದು ಡೀಸೆಲ್ 6.49 ಲಕ್ಷ ರು.ಗಳಾಗಿವೆ.

ಟಾಟಾ ಮಾಂಝಾ ಸ್ಪೆಷಲ್ ಫೀಚರ್‌ಗಳಿಗಾಗಿ ಕೆಳಗಿನ ಫೋಟೊಗಳನ್ನು ಬ್ರೌಸ್ ಮಾಡಿರಿ...

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌ ಅಂತರಾಷ್ಟ್ರೀಯ ದರ್ಜೆಯ 90 ಪಿಸ್ ಸಫೈರ್ ಪೆಟ್ರೋಲ್ ಎಂಜಿನ್ ಹಾಗೂ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಸಫೈರ್ ಪೆಟ್ರೋಲ್ ಪ್ರಿತಿ ಲೀಟರ್‌ಗೆ 1.37 ಕಿಲೋ ಮೀಟರ್ ಹಾಗೂ ಕ್ವಾಡ್ರಾಜೆಟ್ ಡೀಸೆಲ್ 21.02 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

ಇಂಟಿರಿಯರ್ ಫೀಚರ್ಸ್

ಇಂಟಿರಿಯರ್ ಫೀಚರ್ಸ್

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಒಳಭಾಗಗಳನ್ನು ಕಪ್ಪು ಹಾಗೂ ಪ್ಲಮ್ ಬಣ್ಣಗಳಿಂದ ಆಲಂಕರಿಸಲಾಗಿದೆ. ಪ್ರಥಮ ದರ್ಜೆಯ ಟಚ್‌ಸ್ಕ್ರೀನ್ ಮಲ್ಟಿ ಮೀಡಿಯಾ ಜತೆಗೆ ಜಿಪಿಎಸ್ ಹಾಗೂ ಸ್ವಯಂಚಾಲಿತ ವಾತಾವರಣ ನಿಯಂತ್ರಣ ಸೌಲಭ್ಯ ಕೂಡಾ ಇದೆ.

ಸ್ಫೋರ್ಟಿ ಲುಕ್

ಸ್ಫೋರ್ಟಿ ಲುಕ್

ನೂತನ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಸ್ಫೋರ್ಟಿ ಲುಕ್ ಹೊಂದಿದ್ದು, ಹೆಚ್ಚು ಆಕರ್ಷಕವಾಗಿ ಗೋಚರಿಸಲು ಕಾರಣವಾಗಿದೆ.

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌

ಟಾಟಾ ಮಾಂಜಾ ಕ್ಲಬ್ ಆವೃತ್ತಿ ಐದು ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿದೆ. ಅಂತರಾಷ್ಟ್ರೀಯ ದರ್ಜೆಯ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಮತ್ತಷ್ಟು ಸದೃಢತೆಯನ್ನು ನೀಡಿದೆ.

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌

ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಸುರಕ್ಷತೆಗೆ ಕೂಡಾ ಅಷ್ಟೇ ಪ್ರಾಧ್ಯಾನ್ಯತೆ ನೀಡುತ್ತಿದ್ದು, ಮುಂಭಾಗದಲ್ಲಿ ಡ್ಯುಯಲ್ ಫಾಂಟಲ್ ಏರ್‌ಬ್ಯಾಗ್ಸ್ ಹೊಂದಿದೆ. ಬಾಗಿಕೊಳ್ಳಬಹುದಾದ ಸ್ಟೀರಿಂಗ್ ಅಂಕಣ, ಎಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಎಂಜಿನ್ ಇಂಮೊಬಿಲೈಜರ್ ಹಾಗೂ ಸೆಂಟ್ರಲ್ ಲಾಕಿಂಗ್ ಸಿಸ್ಟಂಗಳು ಇತರ ಪ್ರಮುಖ ಸುರಕ್ಷಾ ಮಾನದಂಡಗಳಾಗಿವೆ.

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌ ಕಲರ್

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌ ಕಲರ್

ನೂತನ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಕಾರುಗಳು ಇನ್ಫಿನಿಟಿ ಬ್ಲ್ಯಾಕ್, ಟೆರಿಯನ್ ವೈನ್, ಲೇಸರ್ ರೆಡ್, ಕ್ಯಾಸ್ಟಲ್ ಗ್ರೇ, ಡ್ಯೂ ವೈಟ್ ಮತ್ತು ಜೆಟ್ ಸಿಲ್ವರ್ ಬಣ್ಣಗಳಲ್ಲಿ ಗ್ರಾಹಕರ ಕೈ ಸೇರಲಿವೆ. ಅಲ್ಲದೆ ಎಲ್‌ಎಸ್, ಎಲ್‌ಎಕ್ಸ್, ವಿಎಕ್ಸ್, ಇಎಕ್ಸ್ ಹಾಗೂ ಇಎಕ್ಸ್‌ಎ ಆವೃತ್ತಿಗಳಲ್ಲಿ ಲಭ್ಯವಾಗಲಿದೆ.

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌ ಕೊಡುಗೆ

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌ ಕೊಡುಗೆ

ಹಬ್ಬದ ಸೀಸನ್ ಆಗಿದ್ದರಿಂದ ವಿಶೇಷ ಕೊಡುಗೆಗಳನ್ನು ಕಂಪನಿ ಮುಂದಿರಿಸಿವೆ. ಕಾರು ಶೋರೂಂ ಹಾಗೂ ಸರ್ವೀಸ್ ಸೆಂಟರ್‌‌ಗಳಲ್ಲಿ ವಿಶೇಷವಾಗಿ ನೇಮಕ ಮಾಡಲಾದ ಮ್ಯಾನಜರ್‌ಗಳ ಸೇವೆಯನ್ನು ಕಾರು ಮಾಲಿಕರು ಪಡೆಯಲಿದ್ದಾರೆ

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌

ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್‌

ನೂತನ ಮಾಂಝಾ ಕ್ಲಬ್ ಕ್ಲಾಸ್ ಕಾರಿನ ಒಳಗಡೆ ಕಾಲು ಚಾಚಲು ಬೇಕಾದಷ್ಟು ಸ್ಥಳಾವಕಾಶ ಹೊಂದಿದೆ.

More from DriveSpark

Article Published On: Wednesday, October 17, 2012, 10:14 [IST]
English summary
India's largest vehicle maker Tata Motors has launched its Indigo Manza Club Class in Indian market at a price of Rs 5.70 lakhs for petrol version and Rs 6.49 lakhs for the diesel variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+