ಟಾಟಾ ಮೋಟರ್ಸ್ ಏಪ್ರಿಲ್ ಮಾರಾಟ ಇಳಿಕೆ
ಏಪ್ರಿಲ್ 2012ರಲ್ಲಿ ಟಾಟಾ ಮೋಟರ್ಸ್ ವಾಹನ ಮಾರಾಟ ಶೇಕಡ 7ರಷ್ಟು ಇಳಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು ಒಟ್ಟು 60,086 ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇಳಿಕೆ ಕಂಡಿದೆ.
ಕಂಪನಿಯ ಪ್ರಯಾಣಿಕ ವಾಹನ ಮಾರಾಟ 23,658 ಯುನಿಟಿಗೆ ತಲುಪಿದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳ 25,436 ಯುನಿಟ್ ಗೆ ಹೋಲಿಸಿದರೆ ಶೇಕಡ 7ರಷ್ಟು ಇಳಿಕೆ ಕಂಡಿದೆ.
ಇದೇ ಸಮಯದಲ್ಲಿ ಟಾಟಾ ನ್ಯಾನೊ ಮಾರಾಟ 8,028 ಯುನಿಟಿಗೆ ತಲುಪಿದೆ. ಅಂದರೆ ಕಳೆದ ವರ್ಷದ ಏಪ್ರಿಲ್ ತಿಂಗಳ 10 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 20ರಷ್ಟು ನ್ಯಾನೊ ಮಾರಾಟ ಇಳಿಕೆ ಕಂಡಿದೆ.
ಆದರೆ ಇದೇ ಸಮಯದಲ್ಲಿ ಇಂಡಿಕಾ ಶ್ರೇಣಿಯ ಕಾರುಗಳ ಮಾರಾಟ 6,913 ಯುನಿಟ್ ತಲುಪಿದ್ದು, ಶೇಕಡ 63ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಇಂಡಿಗೊ ಶ್ರೇಣಿಯ ಕಾರುಗಳ ಮಾರಾಟ ಶೇಕಡ 31ರಷ್ಟು ಇಳಿಕೆ ಕಂಡಿದೆ. ಟಾಟಾ ಸುಮೊ, ಆರಿಯಾ, ಸಫಾರಿ ಮುಂತಾದ ಯುಟಿಲಿಟಿ ವಾಹನಗಳ ಮಾರಾಟ ಶೇಕಡ 5ರಷ್ಟು ಏರಿಕೆ ಕಂಡಿದೆ.
ಕಳೆದ ಕೆಲವು ತಿಂಗಳಲ್ಲಿ ಟಾಟಾ ಮೋಟರ್ಸ್ ಪ್ರಯಾಣಿಕ ಕಾರುಗಳ ಮಾರಾಟ ಹೆಚ್ಚಾಗಿತ್ತು. ಆದರೆ ವಾಣಿಜ್ಯ ವಾಹನಗಳ ಮಾರಾಟ ಇಳಿಕೆ ಕಂಡಿತ್ತು. ಆದರೆ ಇದೇ ಮೊದಲ ಬಾರಿಗೆ ಇದು ಉಲ್ಟಾ ಪಲ್ಟಾ ಆಗಿದೆ.


Click it and Unblock the Notifications









