ಡೋಂಟ್ ವರಿ ಟಾಟಾ ಮೋಟರ್ ಎಂದ ಫೆಬ್ರವರಿ

ಇದೇ ಸಮಯದಲ್ಲಿ ಕಂಪನಿಯ ದೇಶಿ ಮಾರಾಟ 34,832 ಯುನಿಟ್ ಗೆ ತಲುಪಿ ಶೇಕಡ 9.16ರಷ್ಟು ಏರಿಕೆ ಕಂಡಿದೆ. 2011ರ ಫೆಬ್ರವರಿ ತಿಂಗಳಲ್ಲಿ ಕಂಪನಿಯ ದೇಶಿಯ ಮಾರಾಟ 31,909 ಯುನಿಟ್ ಆಗಿತ್ತು.
ಪ್ರಸಕ್ತ ಫೆಬ್ರವರಿಯಲ್ಲಿ ಟಾಟಾ ಇಂಡಿಕಾ ಸರಣಿಯ ಕಾರುಗಳು 10,424 ಯುನಿಟ್ ಮಾರಾಟವಾಗಿದೆ ಶೇಕಡ 3.78ರಷ್ಟು ಏರಿಕೆಯಾಗಿದೆ. ಆದರೆ ಇಂಡಿಗೊ ಕಾರುಗಳ ಮಾರಾಟ 8,966 ಯುನಿಟ್ ಗೆ ತಲುಪಿ ಶೇಕಡ 4.14ರಷ್ಟು ಇಳಿಕೆ ಕಂಡಿದೆ.
ನ್ಯಾನೊ ಮಾರಾಟ: ಇದೇ ಸಮಯದಲ್ಲಿ ಟಾಟಾ ನ್ಯಾನೊ ಮಾರಾಟ 9,217 ಯುನಿಟ್ ಗೆ ತಲುಪಿ ಶೇಕಡ 11.56ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ನ್ಯಾನೊ ಮಾರಾಟ 8,262 ಯುನಿಟ್ ಆಗಿತ್ತು.
ಸುಮೊ ಕುಟುಂಬದ ಸಫಾರಿ ಮತ್ತು ಆರಿಯಾ ಮಾರಾಟ 6,596 ಯುನಿಟ್ ತಲುಪಿದ್ದು, ಕಳೆದ ವರ್ಷದ ಫೆಬ್ರವರಿಯ 4,637 ಯುನಿಟ್ ಗೆ ಹೋಲಿಸಿದರೆ ಶೇಕಡ 42.25ರಷ್ಟು ಏರಿಕೆ ದಾಖಲಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








